ದಾಖಲೆ ಪ್ರಮಾಣದಲ್ಲಿ ನೇರ ತೆರಿಗೆ ಸಂಗ್ರಹ; 2023-24ರಲ್ಲಿ 19.58 ಲಕ್ಷ ಕೋಟಿ ರೂ ಕಲೆಕ್ಷನ್

Net direct tax collections of 19.58 lakh crore in 2023-24: ಭಾರತದಲ್ಲಿ 2023-24ರಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ 19.58 ಲಕ್ಷ ಕೋಟಿ ರೂ ಆಗಿದೆ. 2022-23ರಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹ 19.72 ಲಕ್ಷ ಕೋಟಿ ರೂ ಇತ್ತು. 2023-24ರಲ್ಲಿ ಅದು 23.37 ಲಕ್ಷ ಕೋಟಿ ರೂಗೆ ಏರಿದೆ. ಒಟ್ಟು ತೆರಿಗೆ ಮತ್ತು ನಿವ್ವಳ ತೆರಿಗೆ ಎರಡರಲ್ಲೂ ಗಣನೀಯ ಹೆಚ್ಚಳವಾಗಿದೆ. ನೇರ ತೆರಿಗೆಯಲ್ಲಿ ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಎರಡೂ ಪ್ರಮುಖ ಭಾಗಗಳಾಗಿವೆ. ಈ ಎರಡರಲ್ಲೂ ಕೂಡ ಉತ್ತಮ ಟ್ಯಾಕ್ಸ್ ಕಲೆಕ್ಷನ್ ಆಗಿದೆ.

ದಾಖಲೆ ಪ್ರಮಾಣದಲ್ಲಿ ನೇರ ತೆರಿಗೆ ಸಂಗ್ರಹ; 2023-24ರಲ್ಲಿ 19.58 ಲಕ್ಷ ಕೋಟಿ ರೂ ಕಲೆಕ್ಷನ್
ನೇರ ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 21, 2024 | 3:53 PM

ನವದೆಹಲಿ, ಏಪ್ರಿಲ್ 21: ಸರ್ಕಾರದ ಪ್ರಮುಖ ಆದಾಯ ಮೂಲವಾಗಿರುವ ತೆರಿಗೆಗಳ ಸಂಗ್ರಹ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹ (net direct tax collection) 2023-24ರ ಹಣಕಾಸು ವರ್ಷದಲ್ಲಿ 19.58 ಲಕ್ಷ ಕೋಟಿ ರೂ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಡೈರೆಕ್ಟ್ ಟ್ಯಾಕ್ಸ್ ಮೊತ್ತದಲ್ಲಿ ಶೇ. 17.7ರಷ್ಟು ಹೆಚ್ಚಾಗಿದೆ. ಇದು ತೆರಿಗೆ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಅಂಕಿ ಅಂಶದಿಂದ ತಿಳಿದುಬರುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ಆಗಿರುವ ತೆರಿಗೆ ಸಂಗ್ರಹವು ಬಜೆಟ್ ವೇಳೆ ಮಾಡಿದ ಅಂದಾಜಿಗಿಂತಲೂ ಹೆಚ್ಚಿದೆ. ಪರಿಷ್ಕೃತ ಅಂದಾಜಿಗಿಂತಲೂ ಹೆಚ್ಚಿದೆ. ನೇರ ತೆರಿಗೆಯಲ್ಲಿ ಪ್ರಮುಖವಾದುದು ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ. ಈ ಎರಡೂ ಕೂಡ ನಿರೀಕ್ಷೆಮೇರಿ ಹೆಚ್ಚು ಗಳಿಕೆ ಕಂಡಿವೆ.

ಒಟ್ಟು ನೇರ ತೆರಿಗೆ ಸಂಗ್ರಹ 2023-24ರಲ್ಲಿ 23.37 ಲಕ್ಷ ಕೋಟಿ ರೂ ಆಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 18.48ರಷ್ಟು ಹೆಚ್ಚು. ರೀಫಂಡ್ ಇತ್ಯಾದಿ ಕಳೆದು ಉಳಿಯುವ ನಿವ್ವಳ ನೇರ ತೆರಿಗೆಯ ಮೊತ್ತ 19.58 ಲಕ್ಷ ಕೋಟಿ ರೂ ಆಗಿದೆ. ರೀಫಂಡ್ ಆಗಿರುವ ಹಣ 3.79 ಲಕ್ಷ ಕೋಟಿ ರೂ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಇದನ್ನೂ ಓದಿ: ಐದು ವರ್ಷದ ಬಳಿಕ ನಿಮ್ಮ ಇನ್ಷೂರೆನ್ಸ್ ಕ್ಲೈಮ್ ತಿರಸ್ಕರಿಸಲು ಸಾಧ್ಯವಿಲ್ಲ: ಮಹತ್ವದ ಹೊಸ ಇನ್ಷೂರೆನ್ಸ್ ನಿಯಮ ಬದಲಾವಣೆ ತಿಳಿದಿರಿ

ಒಟ್ಟು ಕಾರ್ಪೊರೇಟ್ ಟ್ಯಾಕ್ಸ್ ಸಂಗ್ರಹ 11.32 ಲಕ್ಷ ಕೋಟಿ ರೂ ಆಗಿದೆ. ಇದು ಹಿಂದಿನ ವರ್ಷದಕ್ಕಿಂತ ಶೇ. 13.06ರಷ್ಟು ಹೆಚ್ಚಳವಾಗಿದೆ. ಇನ್ನು ನಿವ್ವಳ ಕಾರ್ಪೊರೇಟ್ ಟ್ಯಾಕ್ಸ್ 9.11 ಲಕ್ಷ ಕೋಟಿ ರೂ ಇದೆ.

ವೈಯಕ್ತಿಕ ಆದಾಯ ತೆರಿಗೆ 12.01 ಲಕ್ಷ ಕೋಟಿ ರೂ ಆಗಿದೆ. ಕಳೆದ ವರ್ಷಕ್ಕಿಂತ ಬರೋಬ್ಬರಿ ಶೇ. 24.26ರಷ್ಟು ಹೆಚ್ಚಳವಾಗಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಪರ್ಸನಲ್ ಇನ್ಕಮ್ ಟ್ಯಾಕ್ಸ್ ಮೊತ್ತ 10.44 ಲಕ್ಷ ಕೋಟಿ ರೂ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನ ಕೋರಮಂಗಲದಲ್ಲಿದೆ ಕುಬೇರರ ಏರಿಯಾ; ದಾಖಲೆ ಬೆಲೆಗೆ ಮಾರಾಟವಾಗಿದೆ ನಿವೇಶನ

2022-23ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ನೇರ ತೆರಿಗೆ ಸಂಗ್ರಹ 19.72 ಲಕ್ಷ ಕೋಟಿ ರೂ ಇತ್ತು. ಈ ಬಾರಿ ಅದು 23.37 ಲಕ್ಷ ಕೋಟಿ ರೂಗೆ ಏರಿದೆ. ಬಜೆಟ್ ಎಸ್ಟಿಮೇಟ್​ನಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ 18.23 ಲಕ್ಷ ಕೋಟಿ ರೂ ಎಂದು ನಿರೀಕ್ಷಿಸಲಾಗಿತ್ತು. ನಂತರ ನಡೆಸಲಾದ ಪರಿಷ್ಕೃತ ಅಂದಾಜಿನಲ್ಲಿ 19.45 ಲಕ್ಷ ಕೋಟಿ ರೂ ಎಂದಿತ್ತು. ಇದೀಗ ಪರಿಷ್ಕೃತ ಅಂದಾಜಿಗಿಂತಲೂ 13,000 ಕೋಟಿ ರೂನಷ್ಟು ಹೆಚ್ಚು ನಿವ್ವಳ ತೆರಿಗೆ ಸಂಗ್ರಹ ಸರ್ಕಾರಕ್ಕೆ ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ