ಹೈದರಾಬಾದ್: ಬಾಲಕಿಗೆ ಮಾದಕವಸ್ತು ನೀಡಿ ಹೋಟೆಲ್ ಕೊಠಡಿಯಲ್ಲಿ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ
1 8 ಮತ್ತು 26 ವರ್ಷ ವಯಸ್ಸಿನ ಆರೋಪಿಗಳು ಬಾಲಕಿಯನ್ನು ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಮಾದಕ ದ್ರವ್ಯ ನೀಡಿ ಎರಡು ದಿನಗಳ ಕಾಲ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.
ಹೈದರಾಬಾದ್‌ನ (Hyderabad) ಹೋಟೆಲ್ ಕೊಠಡಿಯಲ್ಲಿ 17 ವರ್ಷದ ಬಾಲಕಿಗೆ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಿದ್ದು ದಬೀರಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಸೆಪ್ಟೆಂಬರ್ 13, ಮಂಗಳವಾರದಂದು ಈ ಘಟನೆ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಪ್ರದೇಶದವರಾಗಿರುವುದರಿಂದ ಪರಸ್ಪರ ಪರಿಚಯವಿತ್ತು. 1 8 ಮತ್ತು 26 ವರ್ಷ ವಯಸ್ಸಿನ ಆರೋಪಿಗಳು ಬಾಲಕಿಯನ್ನು ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಮಾದಕ ದ್ರವ್ಯ ನೀಡಿ ಎರಡು ದಿನಗಳ ಕಾಲ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. ಸಂತ್ರಸ್ತೆಯ ಪೋಷಕರು ದೂರು ದಾಖಲಿಸಿದ ನಂತರ, ದಬೀರ್‌ಪುರ ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಬೀರಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕೋಟೇಶ್ವರ ರಾವ್ ಮಾತನಾಡಿ, ಪೋಷಕರು ನೀಡಿದ ದೂರು ಮತ್ತು ಬಾಲಕಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.