ಅಪ್ರಾಪ್ತ ಯುವತಿಯರ ಅಶ್ಲೀಲ ಫೋಟೋ, ವಿಡಿಯೋಗಳನ್ನು ಕಳಸುತ್ತಿದ್ದ ಆರೋಪಿಯ ಬಂಧನ
ಅಪ್ರಾಪ್ತ ಯುವತಿಯರ ಅಶ್ಲೀಲ ಫೋಟೋ, ವಿಡಿಯೋಗಳನ್ನ ಕಳಿಸ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಡಿವಾಳ ನಿವಾಸಿ ಪುರುಷೋತ್ತಮ(42) ಬಂಧಿತ ಆರೋಪಿ.
ಬೆಂಗಳೂರು: ಅಪ್ರಾಪ್ತ ಯುವತಿಯರ ಅಶ್ಲೀಲ ಫೋಟೋ (Photo), ವಿಡಿಯೋಗಳನ್ನ ಕಳಿಸ್ತಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಮಡಿವಾಳ (Madival) ನಿವಾಸಿ ಪುರುಷೋತ್ತಮ(42) ಬಂಧಿತ ಆರೋಪಿ. ಆಗ್ನೇಯ ವಿಭಾಗ ಸಿಇಎನ್ ಪೋಲಿಸರು ಆರೋಪಿಯನ್ನು ಸರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಫೇಸ್ಬುಕ್ ಮೂಲಕ ದೇಶ-ವಿದೇಶದ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಸ್ವೀಕರಿಸುತ್ತಿದ ನಂತರ ಅಶ್ಲೀಲ ಫೋಟೋ & ವಿಡಿಯೋಗಳನ್ನ ಆರೋಪಿ ಕಳಿಸ್ತಿದ್ದನು.
ಇದನ್ನು ಓದಿ: ವಿದ್ಯಾರ್ಥಿನಿಯ ಬಾಳಲ್ಲಿ ಹಾಸ್ಟೆಲ್ ವಾರ್ಡನ್ ಚೆಲ್ಲಾಟ: ಮದುವೆ ಆಗುವ ನೆಪದಲ್ಲಿ ವಿದ್ಯಾರ್ಥಿನಿಗೆ ಮೋಸ
ಟಮೊಟೋ ಗಾಡಿಯಲ್ಲಿ ಅಕ್ರಮವಾಗಿ ರಕ್ತ ಚಂದನ ಸಾಗಾಟ
ದಾವಣಗೇರೆ: ಟಮೊಟೋ ಗಾಡಿಯಲ್ಲಿ ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆ ವಿಜಿಲೇನ್ಸ್ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಮಧ್ಯರಾತ್ರಿ ಹೊಸಕೋಟೆ ಮಾಲೂರು ರಸ್ತೆಯಲ್ಲಿ ನೆರೆಯ ಆಂದ್ರದಿಂದ ಟಾಟಾಎಸ್ ವಾಹನ ಮೂಲಕ ರಕ್ತಚಂದನವನ್ನು ಸಾಗಾಟ ಮಾಡ್ತಿದ್ದರು. ಮಾಹಿತಿ ತಿಳಿದ ಅರಣ್ಯ ಇಲಾಖೆ ವಿಜಿಲೇನ್ಸ್ ಡಿಸಿಎಪ್ ಗಂಗಾಧರ್ ನೇತೃತ್ವದ ತಂಡ ಟಾಟಾಎಸ್ ವಾಹನವನ್ನು ಬೆನ್ನ ಹತ್ತಿದ್ದಾರೆ.
ಇದನ್ನು ಓದಿ: ಖಿನ್ನತೆಗೆ ಒಳಗಾಗಿ ಬೆಂಕಿ ಹಚ್ಚಿಕೊಂಡು 8 ತಿಂಗಳ ಮಗು ಸಮೇತ ತಾಯಿ ಆತ್ಮಹತ್ಯೆ
ಆಗ ಟಾಟಾಎಸ್ ಚಾಲಕ ವಾಹನವನ್ನು ನಡು ದಾರಿಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ಅಧಿಕಾರಿಗಳು ವಾಹನದಲ್ಲಿದ್ದ 600 ಕೆಜಿಯ 28 ರಕ್ತ ಚಂಧನ ತುಂಡುಗಳು, 497.7 ಕೆಜಿ ತೂಕದ 37 ರಕ್ತ ಚಂಧನ ತುಂಡುಗಳು, 61.7 ಕೆಜಿ ತೂಕದ ಮೂರು ಮೂಟೆ ಚಕ್ಕೆ ಸೇರಿದಂತೆ 559.4 ಕೆಜಿ ರಕ್ತ ಚಂದನ, ಒಟ್ಟು 28 ಲಕ್ಷ ಮೌಲ್ಯ ದ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:04 pm, Wed, 1 June 22