ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ; ಆಟ ಆಡುತ್ತಿದ್ದ ಐದಾರು ಹುಡುಗರಿಂದ ವ್ಯಕ್ತಿ ಕೊಲೆ, ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸ್
ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಬಳಿ ಸಂಜೆ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಚಿನ್ನಿದಾಂಡು ಆಟದ ವೇಳೆ ಮೃತ ಉಮೇಶನ ಟಿಪ್ಪರ್ಗೆ ಚಿನ್ನಿ ಬಡಿದಿದ್ದರಿಂದ ಜಗಳ ಶುರುವಾಗಿತ್ತು. ಚಿನ್ನಿದಾಂಡು ಆಡುತ್ತಿದ್ದ ಐದಾರು ಮಂದಿಯಿಂದ ಉಮೇಶ್ ಮೇಲೆ ಹಲ್ಲೆ ನಡೆದಿದೆ.
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ನಿನ್ನೆ(ಜೂನ್ 01) ಸಂಜೆ ಚಿನ್ನಿದಾಂಡು ಆಡುತ್ತಿದ್ದ ಕೆಲವರ ನಡುವೆ ಜಗಳ ಶುರುವಾಗಿ ಅದು ಕೊಲೆಯಲ್ಲಿ ಅಂತ್ಯ ಕಂಡಿದೆ. ಎಪಿಎಂಸಿ ಬಳಿ ಐದಾರು ಮಂದಿಯಿಂದ ಉಮೇಶ್ ಶಿವಜೋಗಿಮಠ (40) ಕೊಲೆಯಾಗಿದೆ.
ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಬಳಿ ಸಂಜೆ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಚಿನ್ನಿದಾಂಡು ಆಟದ ವೇಳೆ ಮೃತ ಉಮೇಶನ ಟಿಪ್ಪರ್ಗೆ ಚಿನ್ನಿ ಬಡಿದಿದ್ದರಿಂದ ಜಗಳ ಶುರುವಾಗಿತ್ತು. ಚಿನ್ನಿದಾಂಡು ಆಡುತ್ತಿದ್ದ ಐದಾರು ಮಂದಿಯಿಂದ ಉಮೇಶ್ ಮೇಲೆ ಹಲ್ಲೆ ನಡೆದಿದೆ. ಐದಾರು ಜನರ ಏಟಿನಿಂದ ಹಲ್ಲೆಗೊಳಗಾದ ಉಮೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಉಮೇಶ್ ಮೃತಪಟ್ಟಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ SP ಹನುಮಂತರಾಯ ಹಾಗೂ ಶಿಗ್ಗಾಂವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಕೊಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹಾಲು ಸೇವನೆಯಿಂದ ಆಗುವ 5 ಲಾಭಗಳು ಏನು? ಇಲ್ಲಿದೆ ಓದಿ
ಕವಲಂದೆ ಬಳಿ 2 ಬೈಕ್ ನಡುವೆ ಡಿಕ್ಕಿ, ಇಬ್ಬರು ಸವಾರರ ಸಾವು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದ ಬಳಿ 2 ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಮೃತಪಟ್ಟ ಘಟನೆ ನಡೆದಿದೆ. ನೇರಳೆ ಗ್ರಾಮದ ಮನೋಹರ(21), ಅಪ್ಪು(21) ಮೃತಪಟ್ಟವರು. ಕೃಷ್ಣ ಎಂಬುವರ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆ ಮೈಸೂರು ತಾಲೂಕಿನ ಉತ್ತನಹಳ್ಳಿ ಬಳಿಯ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಚಿರತೆ ಓಡುತ್ತಿದ್ದು ಜಮೀನಿಗೆ ಹೋಗಲು ರೈತರು ಹೆದರುತ್ತಿದ್ದಾರೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಾಸನ ನಗರಸಭಾ ಸದಸ್ಯನ ಹತ್ಯೆ: ಎಸ್ಪಿ ವಿರುದ್ಧ ಹರಿಹಾಯ್ದ ಜೆಡಿಎಸ್, ಪೊಲೀಸರಿಗೆ ರಜೆ ಮೇಲೆ ತೆರಳಲು ಸೂಚನೆ
Published On - 7:21 am, Thu, 2 June 22