ಪ್ರೇಯಸಿಯ ಬಯಕೆ ತೀರಿಸಲು ಹೋಗಿ ಗೋವಾ ಬೀಚ್‌ನಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ಯುವಕ

ಪ್ರೇಯಸಿ ಗೋವಾ ಹುಚ್ಚಿಗೆ ಪ್ರೇಮಿ ತನ್ನ ಮನೆಯಲಿದ್ದ ಚಿನ್ನ ಎಗರಿಸಿದ್ದಾನೆ. ಬಳಿಕ ಗೋವಾ ಬೀಚ್​ನಲ್ಲಿ ಲವರ್ ಜತೆ ಜಾಲಿ ಮಾಡುತ್ತಿರುವಾಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರೇಯಸಿಯ ಬಯಕೆ ತೀರಿಸಲು ಹೋಗಿ ಗೋವಾ ಬೀಚ್‌ನಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ಯುವಕ
ಪ್ರೇಯಸಿ ಗೋವಾ ಆಸೆಗೆ ಮನೆಯಲಿದ್ದ ಚಿನ್ನ ಕದ್ದ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Dec 27, 2022 | 10:56 PM

ಬೆಂಗಳೂರು: ಆತ ಉಂಡಾಡಿ ಗುಂಡ.. ಮಾಡುವುದಕ್ಕೆ ಕೆಲಸವಿಲ್ಲದೇ ಏರಿಯಾ ಸುತ್ತಾಡಿಕೊಂಡು ಮನೆಲ್ಲಿದ್ದ. ಆದ್ರೂ ಈತನಿಗೆ ಒಬ್ಬಳು ಪ್ರೇಯಿಸಿಯಿದ್ದಳು. ಆ ಪ್ರೇಯಸಿಯ ಆಸೆ ತೀರಿಸಲು ಹೋದ ಪ್ರೇಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ಕನಕಪುರ: ಅವಿವಾಹಿತನ ಜೊತೆ ವಿವಾಹಿತೆಯ ಆಕ್ರಮ ಸಂಬಂಧ, ಕೊನೆಗೆ ಆ ವಿವಾಹಿತೆಯ ಕಾಟ ತಾಳದೆ ಹತ್ಯೆ ಮಾಡಿದ!

ಹೌದು.. ಆರೋಪಿಯ ಹೆಸರು ಮಹಮ್ಮದ್ ಇರ್ಫಾನ್. ಬೆಂಗಳೂರಿನ ಆಡುಗೋಡಿ ನಿವಾಸಿ. ತಾಯಿ, ಅಣ್ಣ ಹಾಗೂ ಅತ್ತಿಗೆ ಜೊತೆ ಇರುವ ಈತ, ಮೂರು ಹೊತ್ತು ತಿನ್ನೋದು. ಉಂಡಾಡಿ ಗುಂಡನಂತೆ ಪ್ರೇಯಿಸಿ ಜೊತೆ ಸುತ್ತೋದಷ್ಟೇ ಕಾಯಕ. ಹೀಗೆ ಒಮ್ಮೆ ಪ್ರೇಯಸಿಗೆ ಏನ್​ ಬೇಕು ಅಂತ ಕೇಳಿದ್ದಾನೆ. ಅವಳು ಗೋವಾಗೆ ಹೋಗೋ ಆಸೆ ವ್ಯಕ್ತಪಡಿಸಿದ್ದಾಳೆ.

ಆದ್ರೆ, ಕೈಲಿ ನಯಾಪೈಸೆ ಇಲ್ಲದ ಇರ್ಫಾನ್, ತಾನಿದ್ದ ಮನೆಗೆ ಕನ್ನ ಹಾಕಿದ್ದಾನೆ. ರಾತ್ರಿ ಎಲ್ಲರೂ ಮಲಗಿದ್ದ ವೇಳೆ 103 ಗ್ರಾಮ್ ಚಿನ್ನಾಭರಣ ಎಗರಿಸಿದ್ದಾನೆ. ಬಳಿಕ ಗಿರವಿ ಅಂಗಡಿಯಲ್ಲಿಟ್ಟು, ಲಕ್ಷ ಲಕ್ಷ ಹಣ ತೆಗೆದುಕೊಂಡು ಪ್ರೇಯಸಿ ಜೊತೆ ಗೋವಾಗೆ ಜೂಟ್ ಆಗಿದ್ದಾನೆ.

ಗೋವಾ ಬೀಚ್‌ನಲ್ಲಿ ತಗ್ಲಾಕೊಂಡ

ಮನೆಯಲ್ಲಿರೋ ಚಿನ್ನಾಭರಣ ಕಾಣೆಯಾಗ್ತಿದ್ದಂತೆ ಇರ್ಫಾನ್ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಗೆ ಬಂದು ಮಹಜರ್ ಮಾಡಿದ ಪೊಲೀಸರಿಗೆ, ಮನೆಯಲ್ಲಿ ಕಾಣದ ಇರ್ಫಾನ್ ಮೇಲೆ ಡೌಟ್ ಬಂದಿದೆ. ಆಗ ಮನೆಯವರು ಗೆಳೆಯರ ಜೊತೆ ಗೋವಾಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ಆಗ ಪೊಲೀಸರ ಅನುಮಾನ ಮತ್ತಷ್ಟು ನಿಜವಾಗಿದೆ. ಕೂಡಲೇ ತಂಡ ರಚನೆ ಮಾಡಿ ಗೋವಾಕ್ಕೆ ತೆರಳಿದ ಪೊಲೀಸರು ಇರ್ಫಾನ್‌ನನ್ನ ಪತ್ತೆ ಹಚ್ಚಿದ್ದಾರೆ. ಪ್ರೇಯಸಿ ಜೊತೆ ಗೋವಾ ಬೀಚ್‌ನಲ್ಲಿ ಅಲೆದಾಡುತ್ತಿದ್ದ ಚೋರ ಇರ್ಫಾನ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ.

ಗೋವಾದಿಂದ ಇರ್ಫಾನ್‌ನನ್ನ ಕರೆತಂದ ಪೊಲೀಸರು, ಆತ ಗಿರವಿಯಿಟ್ಟಿದ್ದ ಚಿನ್ನವನ್ನು ರಿಕವರಿ ಮಾಡಿದ್ದಾರೆ. ಆದ್ರೆ ಪ್ರೇಯಸಿಯ ಬಯಕೆ ತೀರಿಸಲು ತಾನಿದ್ದ ಮನೆಗೆ ಕನ್ನ ಹಾಕಿ, ಪೊಲೀಸರ ಅತಿಥಿಯಾಗಿರೋದು ವಿಪರ್ಯಾಸ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:21 pm, Tue, 27 December 22

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್