AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಕಪುರ: ಅವಿವಾಹಿತನ ಜೊತೆ ವಿವಾಹಿತೆಯ ಆಕ್ರಮ ಸಂಬಂಧ, ಕೊನೆಗೆ ಆ ವಿವಾಹಿತೆಯ ಕಾಟ ತಾಳದೆ ಹತ್ಯೆ ಮಾಡಿದ!

Kanakapura Woman murder: ಒಟ್ಟಾರೆ ವಿವಾಹಿತ ಗೆಳತಿಯ ಕಾಟ ತಾಳಲಾರದೇ ಹನುಮಂತು, ಶೃತಿಯನ್ನ ಕೊಲೆಗೈದು ಇದೀಗ ಜೈಲು ಪಾಲಾಗಿದ್ದಾನೆ. ಹೆಂಡತಿಯ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದ ಶೃತಿಯ ಗಂಡ ಲೋಕೇಶ್ ಇದೀಗ ಒಂಟಿಯಾಗಿದ್ದಾನೆ.

ಕನಕಪುರ: ಅವಿವಾಹಿತನ ಜೊತೆ ವಿವಾಹಿತೆಯ ಆಕ್ರಮ ಸಂಬಂಧ, ಕೊನೆಗೆ ಆ ವಿವಾಹಿತೆಯ ಕಾಟ ತಾಳದೆ ಹತ್ಯೆ ಮಾಡಿದ!
ಅವಿವಾಹಿತನ ಜೊತೆ ವಿವಾಹಿತೆಯ ಆಕ್ರಮ ಸಂಬಂಧ
TV9 Web
| Updated By: ಸಾಧು ಶ್ರೀನಾಥ್​|

Updated on:Dec 27, 2022 | 6:45 PM

Share

ಆಕೆ ಈಗಾಗಲೇ ಮದುವೆಯಾಗಿದ್ದರು ಕೂಡ, ಅದೊಬ್ಬ ಅವಿವಾಹಿತನ ಜೊತೆ ಆಕ್ರಮ ಸಂಬಂಧ ಹೊಂದಿದ್ದಳು. ಪದೇ ಪದೇ ಆತನಿಗೆ ಮಾನಸಿಕನವಾಗಿ ಕಿರುಕುಳ ನೀಡುತ್ತಿದ್ದ ಆಕೆ (Woman), ಆತನ ಮದುವೆಗೂ ಕೂಡ ವಿರೋಧ ವ್ಯಕ್ತಪಡಿಸಿ ಕೆಲವೊಂದು ಫೋಟೊಗಳನ್ನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಳು. ಆಕೆಯ ವರ್ತನೆಗೆ ಬೇಸತ್ತು ಆತ ದೂರವಾಗಲು ಮುಂದಾದರೂ, ಆಕೆ ಮಾತ್ರ ಆತನನ್ನ ಬಿಡುತ್ತಿರಲಿಲ್ಲ. ಇದರಿಂದ ರೋಸಿಹೋದ ಆತ, ಆಕೆಯ ಕಥೆಯನ್ನೇ ಮುಗಿಸಿದ್ದಾನೆ (murder).

ಹೌದು ವಿವಾಹಿತ ಗೆಳತಿಯ ಕಾಟ ತಾಳಲಾರದೇ ಆಕೆಯನ್ನ ವ್ಯಕ್ತಿಯೊಬ್ಬ ಹತ್ಯೆ ಮಾಡಿರೋ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾರಣ್ಣನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಅಂದಹಾಗೆ ನಿನ್ನೆ ಸೋಮವಾರ ಮಾರಣ್ಣನದೊಡ್ಡಿ ಗ್ರಾಮದ ಬಳಿ ಕನಕಪುರ (Kanakapura) ನಗರದ ಕುರುಪೇಟೆ ನಿವಾಸಿ ಶೃತಿ (32) ಎಂಬಾಕೆಯ ಮೃತದೇಹ ಪತ್ತೆಯಾಗಿತ್ತು. ಬೆಲ್ಟ್ ವೊಂದರಿಂದ ಕತ್ತುಬಿಗಿದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಪೊಲೀಸರಿಗೆ ತಿಳಿದಿತ್ತು. ಪ್ರಕರಣ ದಾಖಲಿಸಿಕೊಂಡ ಸಾತನೂರು ಠಾಣೆ ಪೊಲೀಸರು, ಒಂದೇ ದಿನದೊಳಗೆ ಆರೋಪಿಯನ್ನ ಬಂಧಿಸಿದ್ದಾರೆ (arrest). ಕೊಲೆ ಆರೋಪಿ ಬೇರೆ ಯಾರೂ ಆಗಿರಲಿಲ್ಲ. ಮೃತ ಶೃತಿಯ ಗೆಳೆಯನಾಗಿದ್ದ ಅದೇ ಕುರುಪೇಟೆ ನಿವಾಸಿಯಾಗಿದ್ದ ಹನುಮಂತನಾಗಿದ್ದ.

ಅಂದಹಾಗೆ ಕಾರು ಚಾಲನಾಗಿದ್ದ ಹನುಮಂತ, ಈಗಾಗಲೇ ಮದುವೆಯಾಗಿದ್ದ ಶೃತಿಯನ್ನ ಎರಡೂವರೆ ವರ್ಷದ ಹಿಂದೆ ಪರಿಚಯ ಮಾಡಿಕೊಂಡಿದ್ದ. ಆನಂತರ ಪರಿಚಯ ಸ್ನೇಹವಾಗಿ, ಆಕ್ರಮ ಸಂಬಂಧದವರೆಗೂ ಬೆಳೆದಿತ್ತು. ಆಗಾಗ ಇಬ್ಬರೂ ಅದೊಂದು ರೂಮ್ ನಲ್ಲಿ ಸೇರುತ್ತಿದ್ದರು. ಇದಕ್ಕಾಗಿಯೇ ಶೃತಿ ರೂಮ್ ಸಹ ಮಾಡಿದ್ದಳು. ಆದರೆ ಆನಂತರ ಶೃತಿ ಬೇರೆಯವರ ಜೊತೆ ಕೂಡ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆಕೆಯನ್ನ ಅವಾಯ್ಡ್​​ ಮಾಡಲು ಶುರು ಮಾಡಿದ್ದ. ಅಲ್ಲದೆ ಮೊಬೈಲ್ ನಂಬರ್ ಅನ್ನು ಸಹ ಚೇಂಜ್ ಮಾಡಿದ್ದ.

ಆದರೆ ಆ ನಂಬರ್ ಅನ್ನೂ ತೆಗೆದುಕೊಂಡ ಶೃತಿ, ಹನುಮಂತನಿಗೆ ಟಾರ್ಚರ್ ಕೊಡಲು ಶುರು ಮಾಡಿದ್ದಳು. ರಾತ್ರಿ ವೇಳೆ ಕುಡಿದು ಅವಾಜ್ ಹಾಕುತ್ತಿದ್ದಳು. ಜೊತೆಗೆ ಕೆಲ ದಿನಗಳ ಕೆಳಗೆ ಫೇಸ್ ಬುಕ್ ನಲ್ಲಿ ತಾವಿಬ್ಬರೂ ಇದ್ದ ಫೋಟೋವನ್ನು ಕೂಡ ಫೋಸ್ಟ್ ಮಾಡಿದ್ದಳು. ಇದನ್ನ ಗಮನಿಸಿದ ಹನುಮಂತನ ಕೆಲ ಸ್ನೇಹಿತರು ಕರೆ ಮಾಡಿದ್ದೆರು. ಅಲ್ಲದೆ ನೀನೇನಾದ್ರು ಬೇರೆಯವಳನ್ನ ಮದುವೆಯಾದರೆ ಕೆಲ ಖಾಸಗಿ ಪೋಟೊಗಳನ್ನು ಕೂಡ ಹಾಕುವುದಾಗಿ ಬೆದರಿಸಿದ್ದಳು. ಇದರಿಂದ ಹನುಮಂತ ಸಾಕಷ್ಟು ರೋಸಿಹೋಗಿದ್ದ ಎಂದು ರಾಮನಗರ ಎಸ್ ಪಿ ಸಂತೋಷ್ ಬಾಬು ಕೆ ಮಾಹಿತಿ ನೀಡಿದ್ದಾರೆ.

Also Read:

RTI activist: ಆತ ಗ್ರಾಮದ ಅವ್ಯವಹಾರಗಳನ್ನ ಪ್ರಶ್ನೆ ಮಾಡಿದ್ದ, ಸಂಬಂಧಿ ಎಂಬುದನ್ನೂ ನೋಡದೆ ಹತ್ಯೆ ಮಾಡಿದರು -ಪೊಲೀಸರು ಆರೋಪಿಗಳ ಬಂಧಿಸಿದರು

ಇನ್ನು ಹನುಮಂತ ಆತನ ಮದುವೆ ಬಗ್ಗೆ ಕೂಡ ಶೃತಿ ಬಳಿ ಪ್ರಸ್ತಾಪ ಮಾಡಿದ್ದ. ಬೇರೆ ಯುವತಿಯನ್ನ ಮದುವೆ ಆಗುತ್ತೇನೆ. ಸಂಬಂಧ ಮುಂದುವರೆಸುವುದು ಬೇಡ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರೂ ಅದಕ್ಕೆ ಶೃತಿ ಒಪ್ಪದೆ ಯಾರನ್ನೂ ಮದುವೆಯಾಗದಂತೆ ಬೆದರಿಕೆಯೊಡ್ಡಿದ್ದಳು. ಹೀಗಾಗಿ ಶೃತಿಯ ಕಾಟದಿಂದ ಬೇಸತ್ತಿದ್ದ ಹನುಮಂತ, ಈಕೆಯನ್ನ ಹೀಗೆಯೇ ಬಿಟ್ಟರೆ ಮುಂದೆ ತನಗೆ ತೊಂದರೆ ಆಗುತ್ತದೆ. ಮದುವೆ ಆಗಲು ಸಹಾ ಬಿಡುವುದಿಲ್ಲ ಎಂದು ಯೋಚಿಸಿದ್ದಾನೆ.

ಅದರಂತೆ ಡಿಸೆಂಬರ್ 25ರ ರಾತ್ರಿ ಬೈಕ್ ನಲ್ಲಿ ಕನಕಪುರದಿಂದ ಮಾರಣ್ಣನದೊಡ್ಡಿ ಗ್ರಾಮದವರೆಗೂ ಕರೆದುಕೊಂಡು ಹೋಗಿ ಅಲ್ಲಿ ಕೆಲ ಕಾಲ ಆಕೆಯ ಜೊತೆ ಮಾತನಾಡಿ, ನಂತರ ಈಗಾಗಲೇ ತನ್ನ ಬಳಿ ತೆಗೆದುಕೊಂಡು ಹೋಗಿದ್ದ ಬೆಲ್ಟ್ ನಿಂದ ರಸ್ತೆಯಲ್ಲಿಯೇ ಕತ್ತು ಬಿಗಿದು ಕೊಲೆಗೈದಿದ್ದಾನೆ. ಕೆಲ ಗಂಟೆಗಳ ಕಾಲ ಅಲ್ಲಿಯೇ ಕಾದು ಕುಳಿತು, ರಾತ್ರೋರಾತ್ರಿ ಮನೆಗೆ ವಾಪಸ್ ಬಂದಿದ್ದ. ಪ್ರಕರಣ ದಾಖಸಿಕೊಂಡು ತನಿಖೆ ಮಾಡಿದ್ದ ಸಾತನೂರು ಠಾಣೆ ಪೊಲೀಸರಿಗೆ ಕೊಲೆಯ ಅಸಲಿ ಸತ್ಯ ಗೊತ್ತಾಗಿದೆ.

ಒಟ್ಟಾರೆ ವಿವಾಹಿತ ಗೆಳತಿಯ ಕಾಟ ತಾಳಲಾರದೇ ಹನುಮಂತು, ಶೃತಿಯನ್ನ ಕೊಲೆಗೈದು ಇದೀಗ ಜೈಲು ಪಾಲಾಗಿದ್ದಾನೆ. ಹೆಂಡತಿಯ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದ ಶೃತಿಯ ಗಂಡ ಲೋಕೇಶ್ ಇದೀಗ ಒಂಟಿಯಾಗಿದ್ದಾನೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Tue, 27 December 22