ಗುಟ್ಕಾ ಉಗಿಯುವುದು, ಕಸ ಎಸೆಯೋ ವಿಷಯಕ್ಕೆ ವೃದ್ದನನ್ನ ಮಚ್ಚಿನಿಂದ ಕೊಂದ ಯುವಕ; ಆಗಿದ್ದೇನು?

ಕಳೆದ 10 ವರ್ಷಗಳ ಹಿಂದೆ ಪ್ರತಿಷ್ಠಿತ ಹಿಮಾಲಯ ಡ್ರಗ್ಸ್ ಕಂಪನಿಯಿಂದ ನಿವೃತ್ತಿ ಹೊಂದಿದ್ದ ವೃದ್ದ, ನಂತರ ತಮ್ಮ ಬಳಿಯಿದ್ದ ಸುಮಾರು 10 ರಿಂದ 15 ಮನೆಯನ್ನು ಬಾಡಿಗೆ ಕೊಟ್ಟು, ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಇಂದು(ಶುಕ್ರವಾರ) ಗುಟ್ಕಾ ಉಗಿಯುವುದು ಹಾಗೂ ಕಸ ಎಸೆಯುವ ವಿಷಯಕ್ಕೆ ವೃದ್ದನನ್ನೇ ಯುವಕನೊಬ್ಬ ಮಚ್ಚಿನಿಂದ ಕೊಂದ ದಾರುಣ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

ಗುಟ್ಕಾ ಉಗಿಯುವುದು, ಕಸ ಎಸೆಯೋ ವಿಷಯಕ್ಕೆ ವೃದ್ದನನ್ನ ಮಚ್ಚಿನಿಂದ ಕೊಂದ ಯುವಕ; ಆಗಿದ್ದೇನು?
ವೃದ್ದನನ್ನ ಮಚ್ಚಿನಿಂದ ಕೊಂದ ಯುವಕ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 09, 2024 | 3:48 PM

ಬೆಂಗಳೂರು, ಆ.09: ಓಡಾಡುವ ರಸ್ತೆಯಲ್ಲಿ ಗುಟ್ಕಾ ಉಗಿಯುವುದು ಮತ್ತು ಕಸ ಎಸೆಯುವ ಕ್ಲುಲ್ಲಕ ವಿಷಯಕ್ಕೆ ವೃದ್ದನನ್ನೇ ಯುವಕನೊಬ್ಬ ಕೊಂದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ(Madanayakanahalli)ಯಲ್ಲಿ ನಡೆದಿದೆ. ಸಿದ್ದಪ್ಪ(70) ಹತ್ಯೆಯಾದ ವೃದ್ದ. ಇಂದು(ಶುಕ್ರವಾರ) ಬೆಳಿಗ್ಗೆ 9ಗಂಟೆಗೆ ಆರೋಪಿ ತುಮಕೂರು ಜಿಲ್ಲೆಯ ಶಿರಾದ ಪುನೀತ್(24), ಕಸ ತುಂಬಿದ ಕವರ್ ಎಸೆದು, ರಸ್ತೆಯಲ್ಲೇ ಗುಟ್ಕಾ ಉಗಿದು ಹೋಗುತ್ತಿದ್ದ. ಈ ವೇಳೆ ಹಿಂದೆ ಬರುತ್ತಿದ್ದ ಸಿದ್ದಪ್ಪ ಯುವಕನಿಗೆ ಬೈದಿದ್ದಾನೆ.

ವೃದ್ದನ ಕುತ್ತಿಗೆ ಕಡಿದು ಬರ್ಬರ ಹತ್ಯೆ; ಆರೋಪಿ ಅಂದರ್​

ಇಷ್ಟಕ್ಕೆ ಕುಪಿತಗೊಂಡ ಯುವಕ, ಸಮೀಪದ ಮನೆಯಿಂದ ಮಚ್ಚು ತಂದು ವೃದ್ದನ ಕುತ್ತಿಗೆಯನ್ನ ಕಡಿದು ಬರ್ಬರ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಮನೆಗೆ ತೆರಳಿ ತನ್ನ ತಾಯಿಯ ಜೊತೆ ಚಿಕ್ಕಬಿದರಕಲ್ಲಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ತಲೆಮರೆಸಿಕೊಳ್ಳುವಾಗ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇದೀಗ ಕೊಲೆ ಅರೋಪಿ ಪುನೀತ್​​ನನ್ನು ವಶಕ್ಕೆ ಪಡೆದು ವಿಚಾರಣೆ ಶುರುಮಾಡಿದ್ದಾರೆ.

ಇದನ್ನೂ ಓದಿ:ನೇಹಾ ಕೊಲೆ ಕೇಸ್​​ಗೆ ಬಿಗ್ ಟ್ವಿಸ್ಟ್​: ನನ್ನ ಮಗಳನ್ನ ನಮ್ಮ ಪಕ್ಷದ ಮುಖಂಡರೇ ಹತ್ಯೆ ಮಾಡಿಸಿದ್ದು ಎಂದ ತಂದೆ

10 ರಿಂದ 15 ಮನೆ ಬಾಡಿಗೆ ಕೊಟ್ಟು, ನಿವೃತ್ತಿ ಜೀವನ ಸಾಗಿಸುತ್ತಿದ್ದ ಮೃತ ವೃದ್ದ

ಇನ್ನು ಮೃತ ವೃದ್ದ ಸಿದ್ದಪ್ಪ ಕಳೆದ 10 ವರ್ಷಗಳ ಹಿಂದೆ ಪ್ರತಿಷ್ಠಿತ ಹಿಮಾಲಯ ಡ್ರಗ್ಸ್ ಕಂಪನಿಯಿಂದ ನಿವೃತ್ತಿ ಹೊಂದಿದ್ದರು. ಬಳಿಕ ತಮ್ಮ ಬಳಿಯಿದ್ದ ಸುಮಾರು 10ರಿಂದ 15 ಮನೆಯನ್ನು ಬಾಡಿಗೆ ಕೊಟ್ಟು, ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಸ್ವಚ್ಚತೆ ವಿಷಯದಲ್ಲಿ ಬಾಡಿಗೆ ಮನೆಯವರ ಜೊತೆ ಸಣ್ಣಪುಟ್ಟ ಗಲಾಟೆ ಬಿಟ್ಟರೆ ಬೇರೆ ಯಾವುದೇ ತಕರಾರು ಇರಲಿಲ್ಲ. ಹೀಗಿರುವಾಗ ಇಂತಹದೊಂದು ದುರ್ಘಟನೆ ನಡೆದು ಹೋಗಿದೆ. ಇನ್ನು ಸ್ಥಳಕ್ಕೆ ಬಂದ ಸೀನ್ ಅಫ್ ಕ್ರೈಂ ಟೀಮ್​ನಿಂದ ತನಿಖಾ ಕಾರ್ಯ ನಡೆಯುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್