Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ; ಬಗೆದಷ್ಟು ಚಿನ್ನಾಭರಣ ಪತ್ತೆ

ಬಾಗಲಕೋಟೆ ಕೆವಿಜಿ ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ ಎಸಿಬಿ ಅಧಿಕಾರಿಗಳಿಗೆ ಬಿಗ್ ಶಾಕ್​ ಆಗಿದ್ದು, ಲಾಕರ್​ನಲ್ಲಿ 550 ಗ್ರಾಮ್ ಚಿನ್ನ ಪತ್ತೆಯಾಗಿದೆ. ಲಾಕರ್​ನಲ್ಲಿ ಹೆಚ್ಚಾಗಿ ಸುತ್ತುಂಗುರ ಇಟ್ಟಿದ್ದ ಅರಣ್ಯಾಧಿಕಾರಿ, ಒಟ್ಟು 13 ಸುತ್ತುಂಗುರಳಿದ್ದವು.

ಬಾಗಲಕೋಟೆ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ; ಬಗೆದಷ್ಟು ಚಿನ್ನಾಭರಣ ಪತ್ತೆ
ವಲಯ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 18, 2022 | 1:15 PM

ಬಾಗಲಕೋಟೆ: ವಲಯ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ (ACB Raid) ವಿಚಾರ ಬಗೆದಷ್ಟು ಚಿನ್ನಾಭರಣ ಸಿಗುತ್ತಿದೆ. ಬ್ಯಾಂಕ್ ಲಾಕರ್​ನಲ್ಲಿ ಇತ್ತು ಅರ್ಧ ಕೆಜಿಗೂ ಅಧಿಕ ಚಿನ್ನದ ವಸ್ತುಗಳು. ಶಿವಾನಂದ. ಖೇಡಗಿ ಬಾದಾಮಿ ವಲಯ ಅರಣ್ಯಾಧಿಕಾರಿ ಬಾಗಲಕೋಟೆ ನವನಗರದಲ್ಲಿರುವ ನಿವಾಸದ ಮೇಲೆ ಎರಡು ದಿನಗಳ ಹಿಂದೆ ಎಸಿಬಿ ದಾಳಿ ನಡೆದಿತ್ತು. ಬಾಗಲಕೋಟೆ ಕೆವಿಜಿ ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ ಎಸಿಬಿ ಅಧಿಕಾರಿಗಳಿಗೆ ಬಿಗ್ ಶಾಕ್​ ಆಗಿದ್ದು, ಲಾಕರ್​ನಲ್ಲಿ 550 ಗ್ರಾಮ್ ಚಿನ್ನ ಪತ್ತೆಯಾಗಿದೆ. ಲಾಕರ್​ನಲ್ಲಿ ಹೆಚ್ಚಾಗಿ ಸುತ್ತುಂಗುರ ಇಟ್ಟಿದ್ದ ಅರಣ್ಯಾಧಿಕಾರಿ, ಒಟ್ಟು 13 ಸುತ್ತುಂಗುರಳಿದ್ದವು. ಚಿನ್ನದ ಜೊತೆ ಲಾಕರ್​ನಲ್ಲಿ ಎರಡು ಪ್ಲಾಟ್​ಗಳ ಕಾಗದ ಪತ್ರ ಕೂಡ ಇತ್ತು. ಒಟ್ಟು ಅರಣ್ಯಾಧಿಕಾರಿ ಆದಾಯಕ್ಕಿಂತ ಅಂದಾಜು 400 ಪಟ್ಟು ಆಸ್ತಿ ಪತ್ತೆ ಮಾಡಿರುವ ಎಸಿಬಿ ಅಧಿಕಾರಿಗಳು, ತಮ್ಮ ಹಾಗೂ ತಮ್ಮ ಪತ್ನಿ ಮತ್ತು ಅಳಿಯಂದಿರ ಹೆಸರಿನಲ್ಲಿ ಆಸ್ತಿ-ಪಾಸ್ತಿ ಮಾಡಿರುವ ಖೇಡಗಿ, ಎರಡು ದಿನ ನಡೆದ ದಾಳಿಯಲ್ಲಿ ಅರಣ್ಯಾಧಿಕಾರಿ ಖೇಡಗಿ ಹಾಗೂ ಅವರ ಸಂಬಂಧಿಕರ ಬಳಿ ಸಾಕಷ್ಟು ಹಣ, ಚಿನ್ನಾಭರಣ ಪತ್ತೆಯಾಗಿವೆ. ಒಟ್ಟು 17 ಲಕ್ಷ ನಗದು, 16 ಲಕ್ಷ ರೂ ಕ್ಯಾಶ್ ಸರ್ಟಿಪಿಕೇಟ್, 1.46 ಕೋಟಿ ರೂ. ಡೆಪಾಸಿಟ್, 8 ಪ್ಲಾಟ್ ಹೊಂದಿದ್ದಾರೆ. ಒಂದುವರೆ ಕೆಜಿ ಚಿನ್ನ, 15 ಕೆಜಿ ಬೆಳ್ಳಿ ವಸ್ತು ಪತ್ತೆ ಮಾಡಿರುವ ಎಸಿಬಿ‌ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿ ಬಳಿ ಬಗೆದಷ್ಟು ಅಕ್ರಮ ಸಂಪತ್ತು ಹುಟ್ಟಿಕೊಳ್ಳತ್ತಲೇ ಇದೆ.

ಇತರೇ ಸುದ್ದಿಗಳು:

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ಕಳ್ಳರ ಗ್ಯಾಂಗ್ ಬಂಧನ ಮಾಡಲಾಗಿದೆ. ಫ್ಲೈಟ್​ನಲ್ಲಿ ಬರ್ತಾರೆ ಬೀಗ ಹಾಕಿದ ಮನೆ ಟಾರ್ಗೆಟ್ ಮಾಡ್ತಾರೆ. ಕನ್ನ ಹಾಕಿ ಎಸ್ಕೇಪ್ ಆಗುತ್ತಾರೆ. ಬಾಣಸವಾಡಿ ಪೊಲೀಸರಿಂದ ಪಶ್ಚಿಮ ಬಂಗಳಾದ ಕುಖ್ಯಾತ ಮನೆಗಳ್ಳರ ಬಂಧನ ಮಾಡಲಾಗಿದೆ. ಹರಿದಾಸ್ ಬರಾಯಿ, ಪಾರ್ಥ ಹಲ್ದಾರ್ ಬಂಧಿತರು. ಮೂಲತಃ ಪಶ್ಚಿಮ ಬಂಗಳಾದ ಆರೋಪಿಗಳಾಗಿದ್ದು, ಕಳ್ಳತನಕ್ಕಾಗಿಯೇ ವಿಮಾನದಲ್ಲಿ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದರು. ಬಂದ ವೇಳೆ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತಿದ್ದ ಆರೋಪಿಗಳು, ಬಳಿಕ ರಾತ್ರೋರಾತ್ರಿ ಎಂಟ್ರಿ ಕೊಟ್ಟು ಮನೆಯನ್ನೇ ದೊಚುತ್ತಿದ್ದರು. ಆರೋಪಿಗಳ ಬಂಧನದಿಂದ 740 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಕಳವು ಪ್ರಕರಣಗಳಲ್ಲಿ ಹರಿದಾಸ್ ಜೈಲು ಸೇರಿದ್ದ. ದೆಹಲಿ ಹಾಗೂ ಸಿಕಂದ್ರಬಾದ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ. ಜೈಲಿನಿಂದ ಬಿಡುಗಡೆಯಾದ್ರು ಹಳೆಚಟ ಬಿಡದೇ ಕೃತ್ಯ ಮಾಡಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ನೀಡಿದ್ದಾರೆ. ಸದ್ಯದಲ್ಲೇ ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ.

ಮಂಡ್ಯ: ಆದಿಚುಂಚನಗಿರಿ ರಥೋತ್ಸವದಲ್ಲಿ ಹೃದಯಘಾತವಾಗಿ ವೃದ್ದೆ ಸಾವಪ್ಪಿದ್ದಾರೆ. ಮಹದೇವಮ್ಮ(65) ಮೃತ ವೃದ್ದೆ. ಮೈಸೂರು ನಗರದ ಕಸ್ತೂರಿಬಾ ನಗರ ನಿವಾಸಿಯಾಗಿರುವ ಮಹದೇವಮ್ಮ. ರಥೋತ್ಸವ ನಡೆದು ಹಿಂದಿರುಗುವಾಗ ಹೃದಯಘಾತವಾಗಿ ಕುಸಿದು ಬಿದಿದ್ದಾರೆ. ತಕ್ಷಣವೇ ವೃದ್ದೆಯನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು. ಚಿಕಿತ್ಸೆ ನೀಡಿದರು ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬೆಂಗಳೂರು: ನೈಸ್ ರಸ್ತೆಯಲ್ಲಿ ಸ್ಯಾಂಟ್ರೊ ಕಾರಿಗೆ ಬೆಂಕಿ ತಗುಲಿ ದರ್ಶನ್ ಸಾವನ್ನಪ್ಪಿದ್ದರು. ಈಗ ಅವರ ಸಾವಿಗೆ ಕಾರಣ ತಿಳಿದುಬಂದಿದೆ. 21 ವರ್ಷದ ಹಳೆಯ ಸ್ಯಾಂಟ್ರೊ ಕಾರು ಅದಾಗಿತ್ತು. ಕಾರಿನ ಒಳಗಿದ್ದ ಕೆಲ ವೈರ್​ಗಳು ಕಟ್ ಆಗಿದ್ದವು. ಹಾಗಾಗಿ‌ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿ ಸಾವು ಸಂಭವಿಸಿದೆ ಎಂದು ಆರ್.ಆರ್.ನಗರ ಪೊಲೀಸರ ತನಿಖೆ ವೇಳೆ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದ್ದು ಪತ್ತೆಯಾಗಿದೆ.  ಚೆನ್ನೈ ನಿಂದ ನಿನ್ನೆ ಬಂದಿದ್ದ ಹ್ಯೂಂಡೈ ಕಂಪನಿ ಟೆಕ್ನಿಕಲ್ ಟೀಂ, ಪರಿಶೀಲನೆ ವೇಳೆ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ‌ ಹೊತ್ತಕೊಂಡಿದ್ದು ಪತ್ತೆಯಾಗಿದೆ. ಬೆಂಕಿ ಕಾಣಿಸಿಕೊಂಡಂತೆ ಹೊರಗೆ ಇಳಿಯಲು ಯತ್ನಿಸಿದ್ದ ದರ್ಶನ್, ಆದ್ರೆ ಡೋರ್ ಗಳೆಲ್ಲವೂ ಲಾಕ್ ಆಗಿದ್ವು, ಎಷ್ಟೇ ಪ್ರಯತ್ನಿಸಿದ್ರು ಓಪನ್ ಆಗಲಿಲ್ಲ. ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಕಾರಿನೊಳಗೆ ಒದ್ದಾಡಿ ಒದ್ದಾಡಿ ದರ್ಶನ್ ಕುಮಾರ್ ಪ್ರಾಣಬಿಟ್ಟಿದ್ದಾರೆ.

ಬೆಂಗಳೂರು: ಮದುವೆಯಾಗುವಂತೆ ಕೇಳಿದ್ದಕ್ಕೆ ಯುವತಿಗೆ ಪೆಟ್ರೋಲ್ ಹಾಕಿದ ಆರೋಪ ಮಾಡಲಾಗಿದೆ. ಇದೇ 15 ರಂದು ಘಟನೆ ನಡೆದಿದೆ. ನಿನ್ನೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಸೆಕ್ಷನ್ 307, SC st ಕಾಯ್ದೆಯಡಿ ಕೇಸ್ ದಾಖಲಾಗಿದೆ. ಹುಡುಗ ಹುಡುಗಿ ಇಬ್ಬರು ಪ್ರೀತಿಸ್ತಾ ಇದ್ರು. ಬಳಿಕ ಹುಡುಗಿ ಮದುವೆಯಾಗು ಎಂದಾಗ ಹುಡುಗ ನಿರಾಕರಿಸಿದ್ದ ಅಂತ ದೂರಿನಲ್ಲಿ ನಮೂದಿಸಿದ್ದಾರೆ. ಘಟನೆ ನಡೆದಾಗ ಪೊಲೀಸರಿಗೆ ಮಾಹಿತಿ ಬಂದು, ಆಸ್ಪತ್ರೆಗೆ ಹೋಗಿದ್ದು, ಪೋಷಕರು ದೂರು ಕೊಡಲು ತಡ ಮಾಡಿದ್ರು. ಕೊಲೆ ಯತ್ನ ಅಂತ ಆರೋಪ ಮಾಡಿದ್ದಾರೆ. ಈಗ ಯುವತಿ ಮೃತಪಟ್ಟಿದ್ದಾರೆ. ಸೆಕ್ಷನ್ ೩೦೨ ರಡಿ ಕೇಸ್ ಮಾಡಿ ತನಿಖೆ ಮಾಡ್ತಿವಿ. ಆರೋಪಿಯ ಯುವಕನನ್ನ ಪತ್ತೆ ಹಚ್ಚುತ್ತೇವೆ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

Crime News: ಮಾನಸಿಕ ಖಿನ್ನತೆ; ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ನೇಣಿಗೆ ಶರಣು

ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್