Crime News: ಮಾನಸಿಕ ಖಿನ್ನತೆ; ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ನೇಣಿಗೆ ಶರಣು
ನಗರದ ತಹಸೀಲ್ದಾರ ಸಂಗಮೇಶ್ ಬಾಡಗಿ (೩೮) ಅವರು ರಾತ್ರಿ 2:30ಕ್ಕೆ ಹೃದಯಾಘಾತದಿಂದ ಮೃತರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಮನೆಯಲ್ಲಿ ಹೃದಯಾಘಾತವಾಗಿದ್ದು, ಓರ್ವ ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಮೈಸೂರು: ಸಿಎ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಯುವತಿ ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ನಡೆದಿದೆ. ಮೈಸೂರು ತಾಲ್ಲೂಕು ದಾಸನಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಚಂದನ (23) ಮೃತ ದುರ್ದೈವಿ. ತಂದೆ ಕೆ.ಎಸ್.ಆರ್.ಟಿ.ಸಿ. ನೌಕರ ಮತ್ತು ತಾಯಿ ಕೆನರಾ ಬ್ಯಾಂಕ್ ಸಿಬ್ಬಂದಿಯಾಗಿದ್ದಾರೆ. ಎಂಕಾಂ ಮುಗಿಸಿದ್ದ ಚಂದನ, ಸಿಎ ಪರೀಕ್ಷೆಗಾಗಿ ಸಿದ್ದತೆ ಮಾಡಿಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೇ ಸುದ್ದಿಗಳು:
ಮುಧೋಳ: ನಗರದ ತಹಸೀಲ್ದಾರ ಸಂಗಮೇಶ್ ಬಾಡಗಿ (೩೮) ಅವರು ರಾತ್ರಿ 2:30ಕ್ಕೆ ಹೃದಯಾಘಾತದಿಂದ ಮೃತರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಮನೆಯಲ್ಲಿ ಹೃದಯಾಘಾತವಾಗಿದ್ದು, ಓರ್ವ ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಅಥಣಿ ತಾಲ್ಲೂಕಿನ ಜನವಾಡ ಮೂಲದ ನಿವಾಸಿ ತಹಸೀಲ್ದಾರ, ಮುಧೋಳ ನಿವಾಸಕ್ಕೆ ಜಮಖಂಡಿ ಎಸಿ ಸಿದ್ದು ಹುಲ್ಲಳ್ಳಿ ಸೇರಿದಂತೆ ಅನೇಕ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ.
ತಮಿಳುನಾಡು: ರಸ್ತೆಗೆ ಬಂದ ಜಿಂಕೆ ಮೇಲೆ ನಾಯಿ ಅಟ್ಯಾಕ್ ಮಾಡಿದೆ. ಬೆಂಗಳೂರು ಹೈವೇ ಕೃಷ್ಣಗಿರಿ ಸಮೀಪದಲ್ಲಿ ಘಟನೆ ನಡೆದಿದೆ. ಜಿಂಕೆಗಳ ಪ್ರಜಾತಿಯಲ್ಲಿ ವಿಶೇಷ ತಳಿಯಾದ ಚುಕ್ಕೆ ಜಿಂಕೆ, ಕಾಡಿನಿಂದ ದಾರಿ ತಪ್ಪಿ ಊರೊಳಗೆ ಚುಕ್ಕೆ ಜಿಂಕೆ ಬಂದದ್ದು, ನಾಯಿ ಅಟ್ಯಾಕ್ ಮಾಡಿದೆ. ನಾಯಿ ಬಾಯಿಯಿಂದ ಸ್ಥಳೀಯರು ಬಚಾವ್ ಮಾಡಿದ್ದು, ಗಾಯಗೊಂಡ ಚುಕ್ಕೆ ಜಿಂಕೆಗೆ ಅರಿಶಿಣ ಹಾಕಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಬೆಂಗಳೂರು: ಸಿಎಂ ಎದುರೇ ವೃದ್ಧನೋರ್ವ ಬಾಟಲಿಯಲ್ಲಿ ಯಾವುದೋ ದ್ರವ ಸೇವಿಸಲು ಯತ್ನಿಸಿದ್ದಾನೆ. ಪೊಲೀಸರಿಂದ ಅನ್ಯಾಯ ಆಗಿದೆ ನನಗೆ ಎಂದು ವೃದ್ಧನ ಅಳಲು ತೊಡಿಕೊಂಡಿದ್ದು, ಸುಂಕದಕಟ್ಟೆಯ ಚಂದ್ರಶೇಖರ್ ಎಂಬುವವರಿಂದ ಸಿಎಂಗೆ ದೂರು ನೀಡಲಾಗಿದೆ. ಈ ವೇಳೆ ಪೊಲೀಸರು ಕೆಲವರ ಜತೆ ಸೇರಿ ಸೈಟ್ ಮಾರಾಟದಲ್ಲಿ ಮೋಸ ಮಾಡಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಲಾಗಿದ್ದು, ನ್ಯಾಯ ಕೊಡಿ ಎಂದು ಸಿಎಂ ಎದುರು ವೃದ್ಧ ಅಳಲು ತೊಡಿಕೊಂಡಿದ್ದಾನೆ. ಬಾಟಲಿ ತೆಗೆದು ಸಿಎಂಗೆ ತೋರಿಸಿ ಕುಡಿಯಲು ಯತ್ನಿಸಿದ ವೃದ್ಧ ಚಂದ್ರಶೇಖರ್ ಈ ವೇಳೆ ಅದನ್ನು ಪೊಲೀಸರು ತಡೆದಿದ್ದಾರೆ. ವೃದ್ಧನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವತಿ ಹತ್ಯೆ ಮಾಡಲಾಗಿದೆ. ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಪೊಲೀಸರ ವಿರುದ್ಧ ಕಿರುಕುಳ ಮೃತಳ ತಂದೆ ಆರೋಪ ಮಾಡಿದ್ದಾರೆ. ತಹಶೀಲ್ದಾರ್ ಅಶೋಕ್ ಶರ್ಮಾ ಪುತ್ರಿ ದಾನೇಶ್ವರಿ(25) ಮೃತ ಯುವತಿ. ವಿಜಯಪುರದ ಶಿವು ಎಂಬಾತ ಕೊಲೆ ಮಾಡಿರುವುದಾಗಿ ಆರೋಪ ಮಾಡಲಾಗಿದ್ದು, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ತಹಶೀಲ್ದಾರ್ ಒತ್ತಾಯ ಮಾಡುತ್ತಿದ್ದಾರೆ. ಈ ಪ್ರಕರಣ ನಿಲ್ಲುವುದಿಲ್ಲವೆಂದು ಪೊಲೀಸರೇ ಹೇಳುತ್ತಿದ್ದಾರೆ. ನಮ್ಮನ್ನು ಪೊಲೀಸರು ಕೊಲೆಗಡುಕರ ರೀತಿ ನಡೆಸಿಕೊಂಡಿದ್ದಾರೆ. ದೂರು ನೀಡಲು ಹೋದರೆ ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಡೀ ದಿನ ಠಾಣೆಯಲ್ಲಿ ಕೂರಿಸಿ ಕೊಂಡಿದ್ದಾರೆಂದು ಪೊಲೀಸರ ವಿರುದ್ಧ ತಹಶೀಲ್ದಾರ್ ಅಶೋಕ್ ಶರ್ಮಾ ಆರೋಪ ಮಾಡಿದ್ದಾರೆ. ವಿಜಯಪುರದ ಯುವಕನ ಜತೆ ಸಹಜೀವನ ನಡೆಸ್ತಿದ್ದ ದಾನೇಶ್ವರಿ, ಮದುವೆಯಾಗುವಂತೆ ಯುವಕನಿಗೆ ಪದೇಪದೆ ಕೇಳುತ್ತಿದ್ದಳು. ಇದೇ ವಿಚಾರಕ್ಕೆ ದಾನೇಶ್ವರಿಯನ್ನು ಶಿವು ಹತ್ಯೆಗೈದಿದ್ದಾನೆ ಎಂದು ಶಿವು ವಿರುದ್ಧ ಮೃತಳ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನ ವ್ಯಕ್ತಿಗೆ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಿದ ಪ್ರಿಯಾಂಕಾ ಚೋಪ್ರಾ; ಕಾರಣ ಏನು?
Published On - 12:16 pm, Fri, 18 March 22