ರಾಯಚೂರು: ಲಕ್ಷಾಂತರ ಮೀನುಗಳ ಮಾರಣಹೋಮ; ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹ
50ಕ್ಕೂ ಹೆಚ್ಚು ಕಿ.ಮೀ ಸಾಗಿರುವ ಲಕ್ಷಾಂತರ ಮೀನುಗಳು, ಅಲ್ಲಲ್ಲಿ ಸತ್ತು ಹೋಗಿವೆ. ಅಷ್ಟೇ ಅಲ್ಲದೆ, ಏಕಾಏಕಿ ನೀರು ಬಿಟ್ಟಿದ್ದಕ್ಕೆ ಹತ್ತಾರು ಎಕರೆ ಬೆಳೆ ನೀರುಪಾಲು ಆಗಿದೆ. ಹತ್ತಾರು ಎಕರೆ ತೋಟಗಾರಿಕೆ ಬೆಳೆಯೂ ನೀರುಪಾಲಾಗಿದೆ. ಕೂಡಲೇ ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹ ಕೇಳಿಬಂದಿದೆ.
ರಾಯಚೂರು: ಇಲ್ಲಿನ ಮನ್ಸಲಾಪುರ ಎಂಬಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದಿದೆ. KBJNL (ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ) ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೀನುಗಳ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಮನ್ಸಲಾಪುರ ಕೆರೆಯಲ್ಲಿ 16 ಲಕ್ಷ ಮೀನುಗಳ ಕೃಷಿ ಮಾಡಲಾಗಿತ್ತು. ಕಾಲುವೆಗೆ ಏಕಾಏಕಿ ನೀರು ಹರಿಸಿದ್ದಕ್ಕೆ ಮೀನುಗಳ ಸಾವು ಸಂಭವಿಸಿದೆ. ನಾರಾಯಣಪುರ ಬಲದಂಡೆ ಕಾಲುವೆಗೆ KBJNL ನೀರು ಹೋಗುತ್ತಿದೆ. ಕಾಲುವೆಗೂ, ಮನ್ಸಲಾಪುರ ಕೆರೆಗೆ ಸಂಪರ್ಕವಿರುವ ಹಿನ್ನೆಲೆ, ಕಾಲುವೆಯ ಹೊಸ ನೀರಿನತ್ತ ಮೀನುಗಳು ಹೋಗುತ್ತಿವೆ.
ಕೆರೆಯ ವಿರುದ್ಧ ದಿಕ್ಕಿಗೆ ಮೀನುಗಳು ಹೋಗುತ್ತಿರುವ ಕಾರಣ ಅಲ್ಲಲ್ಲಿ ಲಕ್ಷಾಂತರ ಮೀನುಗಳು ಸತ್ತುಹೋಗಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 50 ಕುಟುಂಬ ಬೀದಿಪಾಲು ಆಗಿದೆ. ಬೇಸಿಗೆಯಲ್ಲಿ ಮೀನು ಹಿಡಿದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. 50ಕ್ಕೂ ಹೆಚ್ಚು ಕಿ.ಮೀ ಸಾಗಿರುವ ಲಕ್ಷಾಂತರ ಮೀನುಗಳು, ಅಲ್ಲಲ್ಲಿ ಸತ್ತು ಹೋಗಿವೆ. ಅಷ್ಟೇ ಅಲ್ಲದೆ, ಏಕಾಏಕಿ ನೀರು ಬಿಟ್ಟಿದ್ದಕ್ಕೆ ಹತ್ತಾರು ಎಕರೆ ಬೆಳೆ ನೀರುಪಾಲು ಆಗಿದೆ. ಹತ್ತಾರು ಎಕರೆ ತೋಟಗಾರಿಕೆ ಬೆಳೆಯೂ ನೀರುಪಾಲಾಗಿದೆ. ಕೂಡಲೇ ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹ ಕೇಳಿಬಂದಿದೆ.
ಮಂಡ್ಯ: ಚಿರತೆ ದಾಳಿಗೆ ಕುರಿ ಹಾಗೂ ಮೇಕೆ ಬಲಿ
ಚಿರತೆ ದಾಳಿಗೆ ಕುರಿ ಹಾಗೂ ಮೇಕೆ ಬಲಿಯಾದ ಘಟನೆ ಅಂಕೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಅಂಕೇಗೌಡನ ದೊಡ್ಡಿಯಲ್ಲಿ ಪ್ರೇಮಮ್ಮ ಎಂಬುವವರಿಗೆ ಸೇರಿದ ಕುರಿ- ಮೇಕೆಗಳು ಸಾವನ್ನಪ್ಪಿದೆ. ತಡರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿ-ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದೆ. ಮೂರು ಕುರಿ ಹಾಗೂ 2 ಮೇಕೆಗಳ ಮೇಲೆ ದಾಳಿ ನಡೆಸಿದೆ. ಕುರಿ- ಮೇಕೆ ಕಳೆದುಕೊಂಡು ರೈತ ಮಹಿಳೆ ಕಂಗಾಲಾಗಿದ್ದಾರೆ. ಚಿರತೆ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ಸೆರೆ ಹಿಡಿಯಲು ಹಲವುಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಮನವಿ ಮಾಡಿದ್ರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ ಕೇಳಿಬಂದಿದೆ.
ತಮಿಳುನಾಡು: ರಸ್ತೆ ಮೇಲೆ ಬಂದ ಜಿಂಕೆಗೆ ನಾಯಿ ಅಟ್ಯಾಕ್
ರಸ್ತೆ ಮೇಲೆ ಬಂದ ಜಿಂಕೆಗೆ ನಾಯಿ ಅಟ್ಯಾಕ್ ಮಾಡಿದ ಘಟನೆ ಬೆಂಗಳೂರು ಹೈವೇ ಕೃಷ್ಣಗಿರಿ ಸಮೀಪದಲ್ಲಿ ನಡೆದಿದೆ. ನಾಯಿ ಬಾಯಿಯಿಂದ ಜಿಂಕೆಯನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ಕಾಡಿನಿಂದ ದಾರಿ ತಪ್ಪಿ ಊರೊಳಗೆ ಬಂದಿದ್ದ ಜಿಂಕೆ ಮೇಲೆ ನಾಯಿ ಅಟ್ಯಾಕ್ ಮಾಡಿದೆ. ಚುಕ್ಕೆ ಜಿಂಕೆಗೆ ಗಾಯವಾಗಿದೆ. ಸ್ಥಳೀಯರು ಜಿಂಕೆಗೆ ಅರಿಶಿಣ ಹಾಕಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಜಿಂಕೆಗಳ ಪ್ರಜಾತಿಯಲ್ಲಿ ವಿಶೇಷ ತಳಿ ಚುಕ್ಕೆ ಜಿಂಕೆ ಇದಾಗಿದೆ.
ಇದನ್ನೂ ಓದಿ: ಪದೇಪದೆ ಊರೊಳಗೆ ನುಗ್ಗಿ ಸಾಕು ಪ್ರಾಣಿಗಳನ್ನು ಎತ್ತ್ಯೊಯ್ಯುತ್ತಿದ್ದ ಚಿರತೆ ಕೊನೆಗೂ ಬೋನಲ್ಲಿ ಸೆರೆಯಾಯಿತು!