AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳು ಕೊಡುತ್ತೇನೆ ಅಂತ ಕರೆದುಕೊಂಡು ಬಂದು ಮಹಿಳೆಯನ್ನು ಕೊಲೆಗೈದು, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದು ಬಾಡಿಗೆ ಮನೆಯೊಂದನ್ನ ಪಡೆದು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಾ ಜೀವನ ಓರ್ವ ಮಹಿಳೆ ಸಾಗಿಸುತ್ತಿದ್ದಳು. ಅದೊಂದು ದಿನ ಮಹಿಳೆ ಸಂಜೆಯಾದರೂ ಬಾಗಿಲು ತೆರೆದಿರಲಿಲ್ಲ. ಇದರಿಂದ ಅನುಮಾನಗೊಂಡ ಅಕ್ಕ-ಪಕ್ಕದ ನಿವಾಸಿಗಳು ಮನೆಯ ಕಿಟಕಿಯಿಂದ ಇಣುಕಿ ನೋಡಿ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಅಲ್ಲಿ ನಡೆದಿದ್ದು ಏನು? ಈ ಸ್ಟೋರಿ ಓದಿ.

ಬಾಳು ಕೊಡುತ್ತೇನೆ ಅಂತ ಕರೆದುಕೊಂಡು ಬಂದು ಮಹಿಳೆಯನ್ನು ಕೊಲೆಗೈದು, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಕೊಲೆಯಾದ ಹೇಮಾವತಿ
ನವೀನ್ ಕುಮಾರ್ ಟಿ
| Edited By: |

Updated on:Jun 26, 2024 | 10:10 AM

Share

ದೇವನಹಳ್ಳಿ, ಜೂನ್​ 26: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಹೊಸಕೋಟೆ (Hoskote) ನಗರದ ಕಾಲೇಜು ರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದ ಮಹಿಳೆಗೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೇಮಾವತಿ ಕೊಲೆಯಾದವರು. ಹೇಮಾವತಿ ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆಂದು ಆಂಧ್ರದಿಂದ (Andra Pradesh) ಬೆಂಗಳೂರಿಗೆ ಬಂದಿದ್ದರು. ಇಲ್ಲಿ, ಹೊಸಕೋಟೆ ನಗರದಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಾಗಿದ್ದರು. ಹೊಸಕೋಟೆಯ ಪೆಟ್ರೋಲ್ ಬಂಕ್​ನಲ್ಲಿ ಹೇಮಾವತಿ ಕೆಲಸ ಮಾಡುತ್ತಿದ್ದರು.

3-4 ದಿನಗಳಿಗೊಮ್ಮೆ ವೇಣು ಎಂಬವರು ಹೇಮಾವತಿ ಮನೆಗೆ ಬಂದು ಹೋಗುತ್ತಿದ್ದರು. ಹೀಗೆ ಬಂದವರು 2-3 ದಿನ ಹೇಮಾವತಿ ಅವರ ಮನೆಯಲ್ಲೇ ಇರುತ್ತಿದ್ದರು. ಹೇಮಾವತಿ ಮತ್ತು ವೇಣು ದಂಪತಿ ಎಂದು ಅಂತ ಸ್ಥಳಿಯರು ತಿಳಿದಿದ್ದರು. ಎಂದಿನಂತೆ ಸೋಮವಾರ (ಜೂ.24)ರ ರಾತ್ರಿ ಹೇಮಾವತಿ ಮನೆಗೆ ಬಂದಿದ್ದ ವೇಣು ಮಂಗಳವಾರ (ಜೂ.25)ರ ನಸುಕಿನ ಜಾವ 3 ಗಂಟೆವರೆಗೆ ಇದ್ದು ಬಳಿಕ ಚಿಂತಾಮಣಿಯಲ್ಲಿರುವ ಪತ್ನಿಯ ಮನೆಗೆ ಹೋಗಿದ್ದಾನೆ.

ಪತ್ನಿಯ ಮನೆಗೆ ಹೋಗಿ ವಿಷ ಸೇವಿಸಿ, ತನ್ನ ಮಾವನಿಗೆ ಕರೆ ಮಾಡಿದ್ದಾನೆ. ಹೊಸಕೋಟೆಯಲ್ಲಿ ಓರ್ವ ಮಹಿಳೆ ಚಾಕುವಿನಿಂದ ಇರಿದುಕೊಂಡಿದ್ದಾಳೆ, ನಾನು ವಿಷ ಕುಡಿದಿದ್ದೇನೆ ಎಂದು ಹೇಳಿದ್ದಾನೆ. ಈ ವಿಚಾರ ತಿಳಿದ ವೇಣು ಮಾವ ಹೊಸಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ವೇಣು ಅನ್ನು ಚಿಕ್ಕಬಳ್ಳಾಪುರ ಆಸ್ವತ್ರೆಗೆ ದಾಖಲಿಸಲಾಗಿದೆ.

4 ಗಂಟೆಗಳ ಕಾಲ ಮಹಿಳೆಗಾಗಿ ಶೋಧ

ವೇಣು ಮಾವನ ಮಾತು ಕೇಳಿ ಹೊಸಕೋಟೆ ಪೊಲೀಸರು ಕೊಲೆಯಾದ ಮಹಿಳೆಯ ಮನೆಗಾಗಿ ಶೋಧ ಕಾರ್ಯಕ್ಕೆ ಇಳಿದಿದ್ದರು. ಹಲವು ತಂಡಗಳಾಗಿ ಹುಡುಕಾಟ ನಡೆಸಿದರು. ಹೀಗೆ, ಸತತ ನಾಲ್ಕು ಗಂಟೆಗಳ ಕಾಲ ಹುಡುಕತ್ತಾ ಪೊಲೀಸರು ಕೊನೆಗೆ ಬಂದಿದ್ದು, ಹೇಮಾವತಿ ಮನೆಗೆ. ವೇಣು ಹೇಳಿಕೆ ಪ್ರಕಾರ ಮಹಿಳೆ ಚಾಕುವಿನಿಂದ ಇರಿದುಕೊಂಡು ಮೃತಪಟ್ಟಿದ್ದು ಹೇಮಾವತಿ.

ಇದನ್ನೂ ಓದಿ: ಕೂಲಿ ಹಣ ನೀಡದಿದ್ದಕ್ಕೆ ಮಹಿಳೆಯ ಬರ್ಬರ ಹತ್ಯೆ; ಆರೋಪಿ ಅರೆಸ್ಟ್​

ಹೇಮಾವತಿ ಮನೆ ಬಾಗಿಲನ್ನು ತೆಗೆದು ನೋಡಿದಾಗ, ಗುಪ್ತಾಂಗ ಸೇರಿದಂತೆ ಮೂರು ಕಡೆ ಚಾಕುವನಿಂದ ಇರಿದು ಕೊಲೆ ಮಾಡಿರುವ ದೃಶ್ಯ ಕಂಡು ಬಂದಿದೆ. ಅಲ್ಲದೆ ಹೇಮಾವತಿ ಮೃತದೇಹದ ಬಳಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನ ಕಲೆ ಹಾಕಿದ ಪೊಲೀಸರು ನಂತರ ಮಹಿಳೆಯ ಮೃತದೇಹವನ್ನ ಹೊಸಕೋಟೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ಬಳಿಕ ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ, ವಿಚಾರ ಬಯಲಾಗಿದೆ. ವೇಣು ಹೇಮಾವತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಜೂ.24ರ ರಾತ್ರಿ ಹೇಮಾವತಿ ಮನೆಗೆ ಬಂದ ವೇಣು ಆಕೆಯನ್ನು ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂಬುವುದು ತಿಳಿದಿದೆ. ನಂತರ ಪೊಲೀಸರು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೇಣು ಅನ್ನು ಚಿಕ್ಕಬಳ್ಳಾಪುರ ಆಸ್ವತ್ರೆ ಆಸ್ವತ್ರೆಯಲ್ಲಿ ಬಂಧಿಸಿದ್ದಾರೆ.

ಒಟ್ಟಾರೆ ಮಹಿಳೆಗೆ ಬಾಳು ಕೊಡುತ್ತೇನೆ ಅಂತ ಆಂಧ್ರದಿಂದ ಹೊಸಕೋಟೆಗೆ ಕರೆತಂದು ಬಾಡಿಗೆ ಮನೆ ಮಾಡಿಸಿದ್ದ ಭೂಪ ಬರ್ಬರವಾಗಿ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು, ಪ್ರಕರಣ ದಾಕಲಿಸಿಕೊಂಡಿರುವ ಹೊಸಕೋಟೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ವಿಚಾರಣೆ ಬಳಿಕ ಕೊಲೆ ಹಿಂದಿನ ರಹಸ್ಯ ಬೆಳಕಿಗೆ ಬರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:49 am, Wed, 26 June 24