ಮಂಡ್ಯ: ಸ್ನೇಹಿತರ ದಿನವೇ ಕುಚಿಕು ಗೆಳಯನ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳ ಬಂಧನ
Mandya News: ಅವರಿಬ್ಬರೂ ಒಂದೇ ಗ್ರಾಮದವರು. ಒಬ್ಬರಿಗೊಬ್ಬರು ಪ್ರಾಣ ಕೊಡುವಷ್ಟು ಸ್ನೇಹಿತರು. ವಿಕೇಂಡ್ಲ್ಲಿ ಪಾರ್ಟಿ ಮಾಡುತ್ತ ಹಾಯಾಗಿದ್ದರು. ಅದೇ ರೀತಿ ಅವತ್ತು ಸ್ನೇಹಿತರ ದಿನ ಬೇರೆ, ಅಲ್ಲದೆ ವಿಕೆಂಡ್ ಬೇರೆ ಇತ್ತು. ಹೀಗಾಗಿ ಎಣ್ಣೆ ಹೊಡೆಯಲು ಶುರು ಮಾಡಿದ್ದರು. ಆದರೆ, ಇಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಗಲಾಟೆ ಆರಂಭವಾಗಿ, ಕೊಲೆಯಲ್ಲಿ ಅಂತ್ಯವಾಗಿತ್ತು. ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಂಡ್ಯ, ಆ.23: ಸ್ನೇಹಿತರ ದಿನದಂದೆ ಕ್ಷುಲಕ್ಕ ಕಾರಣಕ್ಕೆ ಗೆಳೆಯನನ್ನು(Friend) ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಕೆರೆಗೊಡು ಪೊಲೀಸರು ಬಂಧಿಸಿದ್ದಾರೆ. ಕೀರ್ತಿ, ನಾಗೇಶ್, ದರ್ಶನ್ ಬಂಧಿತ ಆರೋಪಿಗಳು. ಇನ್ನು ಆಗಸ್ಟ್ 6ರಂದು ಮಂಡ್ಯ(Mandya) ತಾಲೂಕಿನ ಕೀಲಾರ ಗ್ರಾಮದ ಕಾರ್ಪೆಂಟರ್ ಅಂಗಡಿಯಲ್ಲಿಯೇ ಜಯಂತ್(23) ಎಂಬಾತನನ್ನು ಗೆಳೆಯನಾದ ಆರೋಪಿ ಕೀರ್ತಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ. ಆರೋಪಿ ಕೀರ್ತಿಗೆ ಸ್ನೇಹಿತರಾದ ನಾಗೇಶ್ ಹಾಗೂ ದರ್ಶನ್ ಸಾಥ್ ನೀಡಿದ್ದರು. ಇನ್ನು ಕೊಲೆಗೈದು ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇದೀಗ ಮೂವರು ಆರೋಪಿಗಳು ಚಿತ್ರದುರ್ಗದ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕುಚಿಕು ಗೆಳೆಯರಾಗಿದ್ದ ಇಬ್ಬರು
ಹೌದು, ಕೊಲೆಯಾದ ಜಯಂತ್ ಹಾಗೂ ಆರೋಪಿ ಕೀರ್ತಿ ಇಬ್ಬರು ಕೀಲಾರ ಗ್ರಾಮದವರು. ಜೊತೆಗೆ ಚಿಕ್ಕವಯಸ್ಸಿನಿಂದ ಪ್ರಾಣ ಸ್ಣೇಹಿತರು. ಪ್ರತಿವಾರ ವಿಕೆಂಡ್ ಬಂತು ಅಂದರೆ ಸಾಕು ಪಾರ್ಟಿ ಮಾಡುತ್ತಿದ್ದರು. ಜಯಂತ್ ಗಾರೆ ಕೆಲಸ ಮಾಡುತ್ತಿದ್ದರೇ, ಆರೋಪಿ ಕೀರ್ತಿ ಗ್ರಾಮದಲ್ಲಿಯೇ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಹೀಗಾಗಿ ಆಗಸ್ಟ್ 6ರಂದು ಭಾನುವಾರ ಆಗಿದ್ದರಿಂದ ಜೊತೆಗೆ ಅವತ್ತೆ ಸ್ನೇಹಿತರ ದಿನ ಇರುವ ಕಾರಣ ಇಬ್ಬರು ಎಣ್ಣೆ ಹೊಡೆಯಲು ಮುಂದಾಗಿದ್ದರು.
ಇದನ್ನೂ ಓದಿ:ಚಿಕ್ಕಮಗಳೂರು: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ; ಕೊಲೆಗೆ ಕಾರಣವಾಯ್ತಾ ಪ್ರಿಯಕರನ ಮದುವೆ?
ಕ್ಷುಲ್ಲಕ ಕಾರಣಕ್ಕೆ ಕೊಲೆ
ಇವರ ಜೊತೆಗೆ ನಾಗೇಶ್ ಹಾಗೂ ದರ್ಶನ್ ಕೂಡ ಸಾಥ್ ನೀಡುತ್ತಾರೆ. ಆದರೆ, ಎಣ್ಣೆ ನಶೆಯಲ್ಲಿದ್ದ ಕೀರ್ತಿ ಅದೊಬ್ಬನಿಗೆ ಅವಾಜ್ ಹಾಕಲು ಹೋಗೋಣಾ ಎಂದು ಹೇಳುತ್ತಾನೆ. ಇದಕ್ಕೆ ಜಯಂತ್ ಒಪ್ಪುವುದಿಲ್ಲ. ಹೀಗಾಗಿ ಜಯಂತ್ ಹಾಗೂ ಕೀರ್ತಿ ನಡುವೆ ಗಲಾಟೆ ಆರಂಭವಾಗುತ್ತದೆ. ಇದೇ ವೇಳೆ ನಾಗೇಶ್ ಎಂಬಾತ ಬೆಂಗಳೂರಿನಿಂದ ಚಾಕುವೊಂದನ್ನು ಕೂಡ ತಂದಿರುತ್ತಾನೆ. ಗಲಾಟೆ ವೇಳೆ ಕೀರ್ತಿ, ನಾಗೇಶ್ ತಂದಿದ್ದ ಚಾಕುವನ್ನು ತೆಗೆದು ಜಯಂತ್ ಹೊಟ್ಟೆ ಭಾಗಕ್ಕೆ ಚುಚ್ಚುತ್ತಾನೆ.
ಹೀಗಾಗಿ ಜಯಂತ್ ಸ್ಥಳದಲ್ಲೇ ಸಾವನಪ್ಪುತ್ತಾನೆ. ಕೂಡಲೇ ಮೂವರು ಘಟನಾ ಸ್ಥಳದಿಂದ ಪರಾರಿಯಾಗಿ ಹತ್ತಾರು ದಿನಗಳ ಕಾಲ ತಲೆ ಮರೆಸಿಕೊಳ್ಳುತ್ತಾರೆ. ಇನ್ನು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟಾರೆ ಸ್ನೇಹಿತರನ್ನೇ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ