ಬಾಗಲಕೋಟೆ: ಮದುವೆ ಮನೆಯಲ್ಲಿ ರಕ್ತದೋಕುಳಿ; ರಾಡ್​ನಿಂದ ‌ಹೊಡೆದು ಯುವಕನ ಭೀಕರ ಕೊಲೆ‌

ಆ ಊರಲ್ಲಿ ನಿನ್ನೆ ಮದುವೆ ಸಂಭ್ರಮ ಮನೆ ಮಾಡಿತ್ತು. ಆದರೆ, ಅದೇ ಮದುವೆ ಮನೆ ಇಳಿ ಸಂಜೆಯಾಗುವಷ್ಟರಲ್ಲಿ ರಣಾಂಗಣವಾಗಿತ್ತು. ಹಳೆ ದ್ವೇಷ, ಬೈಕ್ ಅಪಘಾತದ ಸಣ್ಣ ಜಗಳದಲ್ಲಿ ವಿಕೋಪಕ್ಕೆ ತಿರುಗಿತ್ತು. ಇದರಲ್ಲಿ ಮದುವೆ ಮನೆಯ ಒಬ್ಬ ಯುವಕನ ಕೊಲೆ‌ ಮಾಡಿದ್ದಾರೆ. ಮದುವೆ ಅರಿಷಿಣದ ಬದಲು ರಕ್ತ ಹರಿಸಿದ್ದಾರೆ‌.

ಬಾಗಲಕೋಟೆ: ಮದುವೆ ಮನೆಯಲ್ಲಿ ರಕ್ತದೋಕುಳಿ; ರಾಡ್​ನಿಂದ ‌ಹೊಡೆದು ಯುವಕನ ಭೀಕರ ಕೊಲೆ‌
ಮೃತ ಯುವಕ
Edited By:

Updated on: Feb 27, 2024 | 4:15 PM

ಬಾಗಲಕೋಟೆ, ಫೆ.27: ಜಿಲ್ಲೆಯ ಬೀಳಗಿ(Bilgi) ತಾಲ್ಲೂಕಿನ ಹೆಗ್ಗೂರು ಗ್ರಾಮದಲ್ಲಿ ನಿನ್ನೆ(ಫೆ.26) ರಾತ್ರಿ ಸಿದ್ದು ಇಂಡಿ ಎಂಬ 21 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಮುಖ ಹಾಗೂ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಮಂಜು ಖೈರವಾಡಗಿ ಎಂಬಾತನಿಗೂ ಗಂಭೀರ ಗಾಯವಾಗಿದ್ದುಮ, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ ಬೈಕ್ ಟಚ್ ಆಯಿತು ಎಂಬ ನೆಪದಲ್ಲಿ ಜೊತೆಗೆ ಹಳೆ ರಾಜಕೀಯ ದ್ವೇಷ ಉಕ್ಕಿ ಅದೇ ಊರಿನವರೇ ಆದ ಸಾಗರ ಕಿರಸ್ಯಾಳ, ಯಮನಪ್ಪ ಕಿರಸ್ಯಾಳ, ಶಾಂತಪ್ಪ, ಶಿವಾನಂದ, ಪರಶು ಸೇರಿದಂತೆ ಇತರರು ಸೇರಿ ಮಾರಾಮಾರಿ ನಡೆಸಿ ಕೊಲೆಗೈದಿದ್ದಾರೆ. ಈಗ ಮಗನನ್ನು ಕಳೆದುಕೊಂಡ ತಾಯಿ ಒಂದೇ ಸಮನೆ ಗೋಳಾಡುತ್ತಿದ್ದಾಳೆ.

ಮದುವೆ ಮನೆಯ ಮುಂದೆಯೇ ಭೀಕರ ಕೊಲೆ

ಹೆಗ್ಗೂರು ಗ್ರಾಮದ‌ ಮದುವೆ ಮನೆ ಮುಂದೆ ಇಂತಹ ಭೀಕರ ಕೊಲೆ ನಡೆದಿದೆ. ಕೊಲೆ‌ ಮಾಡಿದವರು ಮದುವೆ ಮನೆಯವರೇ ಎಂಬುದು ವಿಪರ್ಯಾಸ. ನಿನ್ನೆ ಗ್ರಾಮದಲ್ಲಿ ಯಮನಪ್ಪ ಕಿರಸ್ಯಾಳ ಮದುವೆಯಿತ್ತು. ಅದೇ ಮುಹೂರ್ತದಲ್ಲಿ ಗಿರಿಸಾಗರ ಗ್ರಾಮದಲ್ಲಿ ಸಿದ್ದು ಇಂಡಿ ಅವರ ಆಪ್ತರ ಮದುವೆ ಕೂಡ ಇತ್ತು. ಹೀಗಾಗಿ ಆತ ಗಿರಿಸಾಗರಕ್ಕೆ ಮದುವೆಗೆ ಹೋಗಿ ವಾಪಸ್ ಬರುತ್ತಿದ್ದ. ಈ ವೇಳೆ ಮದುವೆ ಮನೆಯವರಲ್ಲಿ ಒಬ್ಬನಾದ ಪರಶು ಹಾಗೂ ಸಿದ್ದು ಬೈಕ್ ಅಪಘಾತವಾಗಿವೆ‌. ಇದರಿಂದ ಸ್ಥಳದಲ್ಲಿ ಸ್ವಲ್ಪ‌ ಜಗಳವಾಗಿದೆ. ಆಗ ಸ್ಥಳದಲ್ಲಿ ಇದ್ದವರು ಜಗಳ ಬಿಡಿಸಿ ಕಳಿಸಿದ್ದಾರೆ. ನಂತರ ಸಿದ್ದು ಮನೆ ಕಡೆ ಬಂದಿದ್ದಾನೆ, ನಂತರ ರಾತ್ರಿ 8.30 ರ ವೇಳೆಗೆ ಸಿದ್ದು ತಮ್ಮ, ಮನೆಗೆ ಹೋಗಲು ಸಾಗರ ಮನೆ ಮುಂದೆಯೇ ಹೋಗಬೇಕು. ಈ ವೇಳೆ ಸಿದ್ದು ಹಾಗೂ ಚಿಕ್ಕಪ್ಪನ ಮಗ ಮಂಜು ಮೇಲೆ‌‌ ಮನಬಂದಂತೆ ಹಲ್ಲೆ ಮಾಡಿ ಕೊಲೆ‌ ಮಾಡಿದ್ದಾರೆ. ಮದುವೆ ಸಂಭ್ರಮದಲ್ಲಿ ಇದ್ದವರೇ ಅರಿಷಿಣದ ಬದಲು ರಕ್ತದೋಕುಳಿಯಾಡಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಸಾಲ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತನ ಕೊಲೆ; ಮೂವರ ಬಂಧನ

ಈ ಬಗ್ಗೆ ಬೀಳಗಿ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಎಫ್​ಐಆರ್ ಆಗಿದೆ. ಬೀಳಗಿ ಪೊಲೀಸರು ಕ್ರೈಮ್ ಅಫ್ ಸೀನ್ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಪ್ರಮುಖ ಆರೋಪಿಗಳಾದ ಸಾಗರ, ಶಿವಾನಂದ, ಯಮನಪ್ಪ, ಶಾಂತಪ್ಪ, ಪರಶು ಸೇರಿದಂತೆ ಪ್ರಮುಖ ಐವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಯಾವುದೇ ಗಲಾಟೆ ಆಗಬಾರದು ಎಂದು ಪೊಲೀಸ್ ಭದ್ರತೆ ಕಲ್ಪಿಸಿದ್ದು, ತನಿಖೆ ಮುಂದುವರೆದಿದೆ. ಒಟ್ಟಿನಲ್ಲಿ ಹಳೆ ದ್ವೇಷ, ಬೈಕ್ ಅಪಘಾತದ‌ ಮೂಲಕ ಉಕ್ಕಿ ಹರಿದಿದ್ದು, ಓರ್ವನ ಬಲಿ ಪಡೆದಿದೆ. ಇನ್ನೊಬ್ಬನ ಸ್ಥಿತಿ‌ ಗಂಭೀರವಾಗಿದ್ದು, ಮೃತನ ಕುಟುಂಬಸ್ಥರು ಕಣ್ಣೀರಲ್ಲಿ‌ಕೈ ತೊಳೆಯುತ್ತಿದ್ದರೆ, ಮದುವೆ ಮನೆಯಲ್ಲಿ ಸಂಭ್ರಮದ ಬದಲು ಸ್ಮಶಾನ ಮೌನ ಆವರಿಸಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Tue, 27 February 24

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us