ಬೆಂಗಳೂರಿನಲ್ಲಿ ವಿಡಿಯೋ ಗೇಮ್ಸ್ ಅಡ್ಡೆ ಮೇಲೆ ಸಿಸಿಬಿ ದಾಳಿ: ಇಬ್ಬರು ಮ್ಯಾನೇಜರ್ ಸೇರಿ 11 ಜನರ ಬಂಧನ
ಬೆಂಗಳೂರಿನ ರಾಜರಾಜೇಶ್ವರಿನಗರದ ರಘು ಆರ್ಕೆಡ್ ಬಿಲ್ಡಿಂಗ್ ಮೇಲೆ ಸಿಸಿಬಿ ರೇಡ್ ಮಾಡಿದ್ದು, 23 ವಿಡಿಯೋ ಗೇಮ್ಸ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, 23 ವಿಡಿಯೋ ಗೇಮ್ ಯಂತ್ರಗಳ ಸಮೇತ 1.74 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ಇಬ್ಬರು ಮ್ಯಾನೇಜರ್ ಸೇರಿದಂತೆ 11 ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಫೆಬ್ರವರಿ 16: ನಗರದಲ್ಲಿ ವಿಡಿಯೋ ಗೇಮ್ಸ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ (CCB raid) ಮಾಡಿದ್ದು, ಬಂಧಿತರಿಂದ 23 ಲಕ್ಷ ಮೌಲ್ಯದ 23 ವಿಡಿಯೋ ಗೇಮ್ ಯಂತ್ರಗಳ ಸಮೇತ 1.74 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ರಾಜರಾಜೇಶ್ವರಿನಗರದ ರಘು ಆರ್ಕೆಡ್ ಬಿಲ್ಡಿಂಗ್ ಮೇಲೆ ಸಿಸಿಬಿ ರೇಡ್ ಮಾಡಿದ್ದು, ಇಬ್ಬರು ಮ್ಯಾನೇಜರ್ ಸೇರಿದಂತೆ 11 ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಡಿಯೋ ಗೇಮ್ಸ್ ಅಡ್ಡೆ ಮ್ಯಾನೇಜರ್ಗಳಾದ ನಿಖಿತ್, ಕೃಷ್ಣ ಬಂಧಿತರು. ಪ್ರಮುಖ ಆರೋಪಿಗಳಾದ ಪಂಚಲಿಂಗಯ್ಯ, ಆದರ್ಶನಿಗಾಗಿ ಹುಡುಕಾಟ ನಡೆಸಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರೇಸ್ಕೋರ್ಸ್ ಮೇಲೆ ಸಿಸಿಬಿ ಪೊಲೀಸ್ ದಾಳಿ
ಇತ್ತೀಚೆಗೆ ರೇಸ್ಕೋರ್ಸ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ 3 ಕೋಟಿ 47 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದರು. ರೇಸ್ಕೋರ್ಸ್ ಮೇಲೆ ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಸಿಸಿಬಿ ಅಧಿಕಾರಿಗಳು ಬುಕ್ಕಿಂಗ್ ಕೌಂಟರ್ ಮೇಲೆ ರೇಡ್ ಮಾಡಿದ್ದರು. ಸಿಬ್ಬಂದಿ ಹೊರ ಹೋಗದಂತೆ ಲಾಕ್ ಹಾಕಿ, ಪರಿಶೀಲನೆ ನಡೆಸಿದ್ದರು. ರೇಸ್ಕೋರ್ಸ್ ಸಿಬ್ಬಂದಿ ಜಿಎಸ್ಟಿ ಕಟ್ಟದೆ ವಂಚನೆ ಮಾಡಿದ್ದಾರೆ ಎನ್ನಲಾಗಿತ್ತು.
ಸ್ಪಾ ಮೇಲೆ ಸಿಸಿಬಿ ದಾಳಿ
ಬೆಂಗಳೂರಿನಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 34 ಆರೋಪಿಗಳನ್ನ ಬಂಧಿಸಿದ್ದರು. ನಗರದ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಸ್ಪಾ ಮೇಲೆ ಸಿಸಿಬಿ ದಾಳಿ ನಡೆಸಿದ್ದರು. ಸ್ಪಾ ಹೆಸರಿಲ್ಲಿ ವೇಶ್ಯಾವಾಟಿಗೆ ನಡೆಸ್ತಿದ್ದದ್ದು ಬೆಳಕಿಗೆ ಬಂದಿತ್ತು. ಹೊರ ರಾಜ್ಯ ಮತ್ತು ವಿದೇಶದ ಯುವತಿಯರನ್ನ ಕರೆಸಿ ಇಲ್ಲಿ ದಂಧೆ ನಡೆಸಲಾಗ್ತಿತ್ತು. ದಾಳಿ ವೇಳೆ ಒಟ್ಟು 44 ಯುವತಿಯರನ್ನ ರಕ್ಷಣೆ ಮಾಡಲಾಗಿದ್ದು, 34 ಆರೋಪಿಗಳನ್ನ ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದ ವೇಳೆ ಸಿಕ್ತು ನಕಲಿ ದಾಖಲೆ ಸೃಷ್ಟಿಸುತ್ತಿದ್ದವರ ಸುಳಿವು !
ನಿರ್ವಾಣ ಸ್ಪಾ ಹೆಸರಿನಲ್ಲಿ ಕಟ್ಟಡದ 1 ಮತ್ತು 6ನೇ ಫ್ಲೋರ್‌ನಲ್ಲಿ ದಂಧೆ ನಡೀತಿತ್ತು. ಈ ಖಚಿತ ಮಾಹಿತಿ ಪಡೆದ ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ದಾಳಿ ನಡೆಸಿತ್ತು. ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಸ್ಪಾ ನಡೆಸ್ತಿದ್ದ ಆರೋಪಿ ಅನಿಲ್‌ನನ್ನ ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
ಲೋಕಾಯುಕ್ತ ಬಲೆಗೆ ಬಿದ್ದ ಮುಖ್ಯ ಶಿಕ್ಷಕ
ಬೀದರ್: ನಗರದ ಶಹಪುರ ಗೇಟ್ ಬಳಿ ಇರುವ ಸ್ವಾಮೀ ವಿವೇಕಾನಂದ ಶಾಲೆಯ ಮುಖ್ಯ ಶಿಕ್ಷಕ ಲಂಚ ಸ್ವಿಕರಿಸುವಾಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದ ಶಶಿಕಲಾರಿಂದ ಪೆನಷನ್ ಮಂಜೂರಿಗೆ ಫೈಲ್ ಮೂವ್ ಮಾಡಲು 3 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದ ಮುಖ್ಯ ಶಿಕ್ಷಕ ತುಕಾರಾಮ್ ಕಾಂಬ್ಳೆ.
ಇದನ್ನೂ ಓದಿ: ಅವಧಿ ಮುಗಿದ ಆಹಾರ ಪದಾರ್ಥಗಳನ್ನ ಮಾರಾಟ ಮಾಡ್ತಿದ್ದ ಅಂಗಡಿ ಮೇಲೆ ಸಿಸಿಬಿ ದಾಳಿ
50 ಸಾವಿರ ರೂಪಾಯಿ ಹಣ ಹಾಗೂ ಒಂದು ಲಕ್ಷ ರೂಪಾಯಿ ಚೇಕ್ ಪಡೆದುಕೊಳ್ಳುವಾಗಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ. ಓಲೇಕಾರ್ ನೆತೃತ್ವದಲ್ಲಿ ದಾಳಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.