AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; 12 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

1,019ಕ್ಕೂ ಹೆಚ್ಚು ಪುಟಗಳ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, 10 ಜನರ ವಿರುದ್ಧ ಅತ್ಯಾಚಾರ ಆರೋಪದಡಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಇಬ್ಬರು ಯುವತಿಯರ ವಿರುದ್ಧ ಅಕ್ರಮ ವಲಸೆ ಆರೋಪದಡಿಯೂ ಸಾಕ್ಷ್ಯಾಧಾರಗಳ ಸಹಿತ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಬಾಂಗ್ಲಾದೇಶಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; 12 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 06, 2021 | 5:01 PM

Share

ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರಿಂದ 12 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 1,019ಕ್ಕೂ ಹೆಚ್ಚು ಪುಟಗಳ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, 10 ಜನರ ವಿರುದ್ಧ ಅತ್ಯಾಚಾರ ಆರೋಪದಡಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಇಬ್ಬರು ಯುವತಿಯರ ವಿರುದ್ಧ ಅಕ್ರಮ ವಲಸೆ ಆರೋಪದಡಿಯೂ ಸಾಕ್ಷ್ಯಾಧಾರಗಳ ಸಹಿತ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಯಡಿ ಮೇ 27ರಂದು ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ದೌರ್ಜನ್ಯ ನಡೆದಿದ್ದು, ಕೇವಲ 5 ವಾರಗಳಲ್ಲೇ ಪ್ರಕರಣದ ಚಾರ್ಜ್‌ಶೀಟ್‌ ಸಲ್ಲಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಅರೋಪಿಗಳು ಹಾಗು ಸಂತ್ರಸ್ತೆ ಎಲ್ಲರೂ ಬಾಂಗ್ಲಾದೇಶದವರು. ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು ಎನ್ನುವುದು ಬಹಿರಂಗವಾಗಿದೆ. ಹಣದ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ ಮಾಡಿ ಕೃತ್ಯವೆಸಗಿದ್ದಾರೆ.  ತನಿಖೆ ವೇಳೆ ಒಟ್ಟು ಮೂವತ್ತಕ್ಕು ಹೆಚ್ಚು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಈ ಪೈಕಿ ಆರು ಜನ ಪ್ರತ್ಯಕ್ಷ ಸಾಕ್ಷಿಗಳಿಂದ 164 ಹೇಳಿಕೆಗಳನ್ನು ದಾಖಲು ಮಾಡಿಸಲಾಗಿದೆ. ಕೃತ್ಯ ನಡೆದ ಸ್ಥಳ ಹಾಗು ವಿಡಿಯೋದಲ್ಲಿ ಪ್ರಮುಖ ಸಾಕ್ಷಿಗಳು ಪತ್ತೆ ಎಲ್ಲರು ಕೃತ್ಯ ನಡೆದ ಸಮಯದಲ್ಲಿ ಒಟ್ಟಿಗೆ ಇದ್ದರು ಎಂಬುದಕ್ಕೆ ವಿಡಿಯೋ ಹಾಗು ಮೊಬೈಲ್ ನೆಟ್ವರ್ಕ್​ನಿಂದ ಖಚಿತವಾಗಿದೆ. ಎಲ್ಲರೂ ಬಾಂಗ್ಲಾದೇಶದವರೆ ಎಂಬುದಕ್ಕೆ ದಾಖಲೆಗಳು ಲಭ್ಯವಾಗಿದೆ. ಅರೋಪಿಗಳು ಬಾಂಗ್ಲಾದೇಶದಲ್ಲಿ ಇರುವವರ ಜೊತೆಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದರು. ಯುವತಿಗೆ ನಡೆಸಿದ್ದ ಮೆಡಿಕಲ್ ಟೆಸ್ಟ್ ಹಾಗು ಅರೋಪಿತರಿಗೆ ನಡೆಸಿದ್ದ ಮೆಡಿಕಲ್ ಟೆಸ್ಟ್​ನಲ್ಲಿ ಕೃತ್ಯ ನಡೆದಿರುವುದು ಖಚಿತವಾಗಿದೆ. ಕೂದಲು, ರಕ್ತ, ಉಗುರಿನ ಮಾದರಿಗಳನ್ನು ಕಲೆ ಹಾಕಲಾಗಿತ್ತು. ಕಲೆ ಹಾಕಿದ್ದ ಮಾದರಿಗಳಿಂದಲು ಅತ್ಯಾಚಾರ ನಡೆದಿರುವುದು ಹಾಗು ನಡೆಸಿರುವ ಅರೋಪಿಗಳು ಇವರೆ ಎಂಬುದು ಪಕ್ಕಾ ಆಗಿದೆ.

ಇದನ್ನೂ ಓದಿ: 

ಭಾರತದ ಸುಂದರ್​ಬನ್ಸ್​ನಲ್ಲಿದ್ದ ಹುಲಿಯು ನಾಪತ್ತೆಯಾದ ನಾಲ್ಕು ತಿಂಗಳ ನಂತರ ಬಾಂಗ್ಲಾದೇಶದ ದ್ವೀಪವೊಂದರಲ್ಲಿ ಪತ್ತೆಯಾಯಿತು!

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ 11 ಜನ ವಿದ್ಯಾರ್ಥಿಗಳ ಬಂಧನ; ಉತ್ತರ ವಿಭಾಗದ ಪೊಲೀಸರಿಂದ ವಿಚಾರಣೆ

(Bangladeshi young woman gangrape case Charge sheet submission against 12 accused by Bengaluru Police)

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ