AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ ಏರ್​​ಪೋರ್ಟ್ ರಸ್ತೆಯಲ್ಲಿ ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ, ಕಾರಣವೇನು?

ಕಾರಿನಲ್ಲಿ ಬರ್ಬರವಾಗಿ ಕೊಲೆಯಾಗಿರುವ ವ್ಯಕ್ತಿಯ ಹೆಸರು ಕೃಷ್ಣ ಯಾದವ್. ಮೂಲತಃ ಆಂಧ್ರದವನಾದ ಕೃಷ್ಣ ಯಲಹಂಕದ ಮಾರುತಿ ನಗರದಲ್ಲಿ ವಾಸವಾಗಿದ್ದು ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದ. ಜೊತೆಗೆ ಎಂದಿನಂತೆ ರಾತ್ರಿ ಮನೆಯಿಂದ ಹೊರಗಡೆ ಹೋಗಿದ್ದ ಕೃಷ್ಣ ರಾತ್ರಿ 09:30 ರಲ್ಲಿ ಮನೆಗೆ ಕರೆ ಮಾಡಿದ್ದವನೆ ಮನೆಗೆ ಊಟಕ್ಕೆ ಬರ್ತಿರುವುದಾಗಿ ಹೇಳಿದ್ನಂತೆ.

ದೇವನಹಳ್ಳಿ ಏರ್​​ಪೋರ್ಟ್ ರಸ್ತೆಯಲ್ಲಿ ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ, ಕಾರಣವೇನು?
ಏರ್​​ಪೋರ್ಟ್ ರಸ್ತೆಯಲ್ಲಿ ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​|

Updated on: Mar 12, 2024 | 5:40 PM

Share

ಕೆಂಪೇಗೌಡ ಏರ್ಪೋಟ್ ರಸ್ತೆಯ (Devanahalli Airport Road) ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಥಾಣದ ಬಳಿ ಕಾರೊಂದು ನಿಂತಿದ್ದು ಎಲ್ಲರೂ ಎಂದಿನಂತೆ ಯಾರೊ ನಿಲ್ಲಿಸಿದ್ದಾರೆ ಅಂದುಕೊಂಡಿದ್ರು. ಆದ್ರೆ ಪೊಲೀಸರು ಅಲ್ಲಿಗೆ ಎಂಟ್ರಿ ಕೊಡ್ತಿದ್ದಂತೆ ಎಲ್ಲರಿಗೂ ಒಂದು ಕ್ಷಣ ಶಾಕ್ ಆಗಿತ್ತು. ನಿಂತಿದ್ದ ಕಾರಿನಲ್ಲಿ ನೆತ್ತರು ಕಂಡು ಬೆಚ್ಚಿ ಬಿದ್ದಿದ್ರು (murder). ಹಾಗಾದ್ರೆ ಅಷ್ಟಕ್ಕೂ ಆ ಕಾರಲ್ಲಿ ಕಂಡಿದ್ದಾದ್ರು ಏನು ಅನ್ನೂದರ ವಿವರ ಇಲ್ಲಿದೆ. ಇಂದು ಮಂಗಳವಾರ ಬೆಳಗ್ಗೆ 09.30 ರ ಸಮಯ ಎಲ್ಲರೂ ಕೆಲಸಗಳತ್ತ ತೆರಳಲು ಮುಂದಾಗ್ತಿದ್ರೆ ಬಿಳಿ ಬಣ್ಣದ ಕಾರೊಂದು ಅನಾಥವಾಗಿ ನಿಂತಿದ್ರೆ ಪೊಲೀಸರು ಎಲ್ಲೆಡೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೋ ಅಪಘಾತವಾಗಿರಬೇಕು ಅಂತ ಜನರು ಹತ್ತಿರ ಹೋಗಿ ನೋಡಿದ್ರೆ ರಕ್ತಸಿಕ್ತವಾಗಿ ಸ್ಕ್ರೂ ಡ್ರೈವರ್ ನಿಂದ ಕೊಲೆ ಮಾಡಿದ ಸ್ಥಿತಿಯಲ್ಲಿ ಕಾರಿನ ಮಾಲೀಕನ ಶವ ಕಂಡಿದೆ (real estate businessman). ಇನ್ನು ಶವ ಸಿಕ್ಕಿರುವ ವಿಚಾರ ಗೊತ್ತಾಗ್ತಿದ್ದಂತೆ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿ ಬಂದಿದ್ದು ಆಕ್ರಂದನ ಮುಗಿಲು ಮುಟ್ಟಿದೆ. ಅಂದಹಾಗೆ ಇಂದು ಮಂಗಳವಾರ ಬೆಳ್ಳಂಬೆಳಗ್ಗೆ ಇಂತಹ ಭೀಕರ ದೃಶ್ಯಗಳೆಲ್ಲ ಕಂಡು ಬಂದಿದ್ದು ಯಲಹಂಕದ ಬಾಗಲೂರು ಕ್ರಾಸ್ ನಲ್ಲಿ.

ಅಂದಹಾಗೆ ಈ ರೀತಿ ಕಾರಿನಲ್ಲಿ ಬರ್ಬರವಾಗಿ ಕೊಲೆಯಾಗಿರುವ ವ್ಯಕ್ತಿಯ ಹೆಸರು ಕೃಷ್ಣ ಯಾದವ್. ಮೂಲತಃ ಆಂಧ್ರದವನಾದ ಕೃಷ್ಣ ಯಲಹಂಕದ ಮಾರುತಿ ನಗರದಲ್ಲಿ ವಾಸವಾಗಿದ್ದು ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದ. ಜೊತೆಗೆ ಎಂದಿನಂತೆ ರಾತ್ರಿ ಮನೆಯಿಂದ ಹೊರಗಡೆ ಹೋಗಿದ್ದ ಕೃಷ್ಣ ರಾತ್ರಿ 09:30 ರಲ್ಲಿ ಮನೆಗೆ ಕರೆ ಮಾಡಿದ್ದವನೆ ಮನೆಗೆ ಊಟಕ್ಕೆ ಬರ್ತಿರುವುದಾಗಿ ಹೇಳಿದ್ನಂತೆ.

ಆದ್ರೆ ಹಾಗೆ ಹೇಳಿದ ನಂತರ ಎಷ್ಟೊತ್ತಾದ್ರು ಮನೆಗೆ ಬರದಿದ್ದು ಮನೆಯವರು ಕರೆ ಮಾಡಿದ್ರೆ ಪೋನ್ ಸ್ವಿಚ್ ಆಫ್​​ ಆಗಿದೆ. ಹೀಗಾಗಿ ಎಲ್ಲೋ ಹೋಗಿರಬೇಕು ಬೆಳಗ್ಗೆ ಬರ್ತಾನೆ ಅಂತ ಆತಂಕದಲ್ಲೆ ಕುಟುಂಬಸ್ಥರು ಕಾಲ ಕಳೆದಿದ್ದಾರೆ. ಬೆಳಗ್ಗೆ 09 ಗಂಟೆ ಸುಮಾರಿಗೆ ಬಾಗಲೂರು ಕ್ರಾಸ್ ಬಳಿ ವೈಟ್ ಕಾರು ಅನಾಮಧೇಯವಾಗಿ ನಿಂತಿರುವುದನ್ನ ಕಂಡ ಸ್ಥಳೀಯರು ಕಾರಿನ ಒಳಗಡೆ ಇಣುಕಿ ನೋಡಿದ್ದಾರೆ. ಈ ವೇಳೆ ಕಾರಿನ ಒಳಗಡೆ ರಕ್ತಸಿಕ್ತವಾಗಿ ಡ್ರೈವರ್ ಸೀಟಿನ ಪಕ್ಕದಲ್ಲಿ ಕೃಷ್ಣ ಯಾದವ್ ಶವವಾಗಿ ಕಂಡಿದ್ದು ಸ್ಥಳೀಯರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

Also Read: ಉಡುಪಿ ಕಡಲ ತೀರದಲ್ಲಿ ಅಕ್ರಮ ಚಟುವಟಿಕೆ? ನೈತಿಕ ‌ಪೊಲೀಸ್ ಗಿರಿ ಚುರುಕು, ಸ್ಥಳೀಯ ವ್ಯಾಪಾರಿಗಳ ಪಾಡೇನು?

ಕಾರಿನಲ್ಲಿ ಮೃತದೇಹ ಇರುವುದು ಗೊತ್ತಾಗ್ತಿದ್ದಂತೆ ನೂರಾರು ಜನ ಕಾರನ್ನ ಸುತ್ತುವರೆದಿದ್ದು ಸ್ಥಳಕ್ಕೆ ಯಲಹಂಕ ಪೊಲೀಸರು ಸಹ ದೌಡಾಯಿಸಿ ಬಂದಿದ್ರು. ಜೊತೆಗೆ ಕಾರಿನ ಲಾಕ್ ಆನ್ ಮಾಡಿ ಒಳಗಡೆ ಪರಿಶೀಲನೆ ನಡೆಸಿದ ಪೊಲೀಸರು ನಂತರ ಮೃತದೇಹವನ್ನ ಬೆಂಗಳೂರಿನ ಅಂಬೇಡ್ಕರ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ರು.

ಮೃತ ಕೃಷ್ಣ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದು ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹೋಗಿದ್ದು ಜೊತೆಯಲ್ಲಿ ನಾಲ್ವರು ಸ್ನೇಹಿತರು ಇದ್ದ ಬಗ್ಗೆಯು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಮೃತ ದೇಹದ ಮೇಲೆ ಗಾಯಗಳು ಇದ್ದು ಕಾರು ಎಲ್ಲೆಲ್ಲಿ ಹೋಗಿದೆ, ಶವ ಸಿಕ್ಕ ಸ್ಥಳಕ್ಕೆ ಕಾರನ್ನ ಯಾರು ತಂದ್ರು ಅನ್ನೂ ಬಗ್ಗೆಯೂ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ತನಿಖೆ ಮುಂದುವರೆಸುತ್ತಿದ್ದು ಶೀಘ್ರವಾಗಿ ಆರೋಪಿಗಳನ್ನ ಪತ್ತೆ ಹಚ್ಚುವುದಾಗಿ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

Also Read: ಹುಡುಗಿ ಗ್ರಾಮದ ಈ ರೈತ ಯಾವುದೇ ಕೃಷಿ ಪದವಿ ಪಡೆದಿಲ್ಲ, ಆದರೂ ಕೃಷಿ ಆತನ ಕೈಹಿಡಿದಿದೆ!

ಒಟ್ಟಾರೆ ರಾತ್ರಿ ಮನೆಯಿಂದ ಕಾರಿನಲ್ಲಿ ಹೊರಗಡೆ ಹೋಗಿದ್ದ ಮಾಲೀಕ ಕಾರಿನಲ್ಲೆ ಹತ್ಯೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಈ ಬಗ್ಗೆ ಯಲಹಂಕ ಪೊಲೀಸರು ತನಿಖೆ ಮುಂದುವರೆಸಿದ್ದು ತನಿಖೆಯ ನಂತರವಷ್ಟೆ ಕೊಲೆ ಹಿಂದಿನ ಅಸಲಿ ಸತ್ಯ ಬೆಳಕಿಗೆ ಬರಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ