ಬೆಂಗಳೂರಿನಲ್ಲಿ ಮಹಿಳೆಯ ಭಯಾನಕ ಕೊಲೆ: ಶವವನ್ನ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಪರಾರಿ
ಬೆಂಗಳೂರಿನ ಚನ್ನಮ್ಮನಕೆರೆ ಸಮೀಪ ಕಸದ ಲಾರಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಆಟೋದಲ್ಲಿ ಶವವನ್ನು ತಂದಿದ್ದ ದುಷ್ಕರ್ಮಿಗಳು ಕಸದ ಲಾರಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಚನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಗುರುತು ಪತ್ತೆ ಆಗಿಲ್ಲ.

ಬೆಂಗಳೂರು, ಜೂನ್ 29: ನಗರದಲ್ಲಿ ಮಹಿಳೆಯ (woman) ಭಯಾನಕ ಮರ್ಡರ್ (kill) ನಡೆದಿದೆ. ಮಹಿಳೆಯನ್ನ ಕೊಲೆಗೈದು ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಎಸ್ಕೇಪ್ ಆಗಿರುವಂತಹ ಘಟನೆ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ನಡೆದಿದೆ. ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಾಗಿದೆ.
ನಿನ್ನೆ ತಡರಾತ್ರಿ ಆಟೋದಲ್ಲಿ ಮಹಿಳೆ ಶವ ತಂದಿದ್ದ ದುಷ್ಕರ್ಮಿಗಳು, ಮೈದಾನದ ಬಳಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿಟ್ಟು ಪರಾರಿ ಆಗಿದ್ದಾರೆ. 30 ರಿಂದ 35 ವರ್ಷದ ಮಹಿಳೆ ಗುರುತು ಪತ್ತೆಗಾಗಿ ಪೊಲೀಸರಿಂದ ತನಿಖೆ ನಡೆದಿದ್ದು, ಅಪರಿಚಿತ ಮಹಿಳೆ ಶವ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ
ಶನಿವಾರ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕಲು ಬಂದಿದ್ದರು. ಈ ವೇಳೆ ಯುವತಿಯ ತಲೆ ಕೂದಲು ಕಾಣಿಸಿದೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಶವದ ವಿಚಾರ ಬೆಳಕಿಗೆ ಬಂದಿದೆ. ಸದ್ಯ ರಸ್ತೆಯ ಇಕ್ಕೆಲಗಳ ಸಿಸಿಟಿವಿ ಪರಿಶೀಲನೆ ಮಾಡಿದ್ದು, ಒಬ್ಬನೇ ದುಷ್ಕರ್ಮಿ ಆಟೋದಲ್ಲಿ ಬಾಡಿ ತಂದು ಬಿಸಾಡಿರುವುದು ತಿಳಿದುಬಂದಿದೆ. ಹಂತಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ PSI ಚಿಕಿತ್ಸೆ ಫಲಿಸದೆ ಸಾವು
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿಎಸ್ಐ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬೆಂಗಳೂರಿನ ತಲಘಟ್ಟಪುರ ಪಿಎಸ್ ಮೆಹಬೂಬ್ ಗುಡ್ಡಳ್ಳಿ(40) ಮೃತ ವ್ಯಕ್ತಿ. ಜೂ.24ರ ರಾತ್ರಿ ಗಾಂಜಾ ಕೇಸ್ ಆರೋಪಿಗಳನ್ನು ಬಂಧಿಸಿ ಅತ್ತಿಬೆಲೆಯಿಂದ ಬೆಂಗಳೂರು ಕಡೆ ಕರೆತರುತ್ತಿದ್ದಾಗ ಟೈರ್ ಕಳಚಿ ನಡುರಸ್ತೆಯಲ್ಲಿ ಪಿಎಸ್ಐ ಕಾರು ನಿಂತಿತ್ತು. ಪರಿಶೀಲನೆ ನಡೆಸಲು ಮೆಹಬೂಬ್ ಕಾರಿನಿಂದ ಕೆಳಗಿಳಿದಿದ್ದು, ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಕೊಪ್ಪಳ: ಮೂರನೇ ಪತ್ನಿಯ ಕೊಲೆ ಮಾಡಿ ಬಸ್ನಲ್ಲಿ ಲಗೇಜ್ ಎಂದು ಕಳುಹಿಸಿ ಪರಾರಿಯಾಗಿದ್ದ ವೃದ್ಧ 23 ವರ್ಷಗಳ ಬಳಿಕ ಅರೆಸ್ಟ್
ಮೆಹಬೂಬ್ ಗುಡ್ಡಳ್ಳಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೊಡಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ತಾಯಿಯನ್ನೇ ಕೊಂದ ಕಟುಕ ಮಗ: ಬಳಿಕ ಹೆತ್ತಕರುಳಿಗೆ ಕೊಳ್ಳಿ ಇಟ್ಟು ಎಸ್ಕೇಪ್ ಆಗಿದ್ದವ ಉಡುಪಿಯಲ್ಲಿ ಸಿಕ್ಕ
ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಗಾಂಜಾ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಇಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:03 pm, Sun, 29 June 25



