ಕೆ.ಆರ್ ಪುರಂ ಪೊಲೀಸರ ಕಾರ್ಯಾಚರಣೆ; ಖತರನಾಕ ಕಳ್ಳನ ಬಂಧನ
ರಾತ್ರಿ ವೇಳೆಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆ.ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ರಾತ್ರಿ ವೇಳೆಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆ.ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ರಫೀಕ್ ಬಂಧಿತ ಆರೋಪಿ. ಆರೋಪಿ ರಫೀಕ್ ಕೆ.ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿ ಒಂದರಲ್ಲೇ ಮೂರು ಮನೆಗಳ್ಳತನ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಯಿಂದ 9.5 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಹಗಲು ಆಟೋ ಚಾಲನೆ, ರಾತ್ರಿ ಕಳ್ಳತನ ಮಾಡುತ್ತಿದ್ದ ಆರೋಪಿಯ : ಹಗಲೆಲ್ಲ ಆಟೋ ಚಾಲನೆ ಮಾಡಿ, ರಾತ್ರಿ ಆದರೆ ಸಾಕು ಅದೇ ಆಟೋದಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಸೈಯದ್ ವಾಜೀದ್ (49) ಬಂಧಿತ ಆರೋಪಿ. ಆರೋಪಿ ಇದೇ ತಿಂಗಳು ಮತ್ತಿಕೆರೆಯಲ್ಲಿ ಆಲ್ ಮಕ್ಕೀಸ್ ರೆಸ್ಟೋರೆಂಟ್ನ ಶಟರ್ ಮುರಿದು ಕಳ್ಳತನ ಮಾಡಿದ್ದನು
ರೆಸ್ಟೋರೆಂಟ್ನಲ್ಲಿದ್ದ ನಗದು ಹಣ ಕದ್ದು ಆಟೋದಲ್ಲಿ ಪರಾರಿಯಾಗಿದ್ದನು. ಶಟರ್ ಮುರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಶವಂತಪುರ ಪೊಲೀಸರಿಂದ ಆರೋಪಿಯ ತನಿಖೆ ಮುಂದುವರೆದಿದೆ.
ಅಕ್ರಮವಾಗಿ ಗಂಧದ ಮರ ಸಾಗಾಣೆ ಮಾಡುತ್ತಿದ್ದ ಆರೋಪಿಯ ಬಂಧನ
ಮೈಸೂರು: ಅಕ್ರಮವಾಗಿ ಗಂಧದ ಮರ ಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 50 ಕೆ.ಜಿ ತೂಕದ ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶ್ರೀಗಂಧದ ಮರದ ತುಂಡುಗಳು ಮೈಸೂರಿನ ಮುನೇಶ್ವರ ನಗರದ ಮನೆಯಲ್ಲಿದ್ದವು. ಶ್ರೀಗಂಧದ ಮರದ ತುಂಡಗಳನ್ನು ಕಳ್ಳತನ ಮಾಡಿ ಆರೋಪಿ ಬೇರೆ ಕಡೆಗೆ ಸಾಗಾಣೆ ಮಾಡುತ್ತಿದ್ದನು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 am, Wed, 21 September 22