ಮಹಿಳೆಯರು ಸ್ನಾನ ಮಾಡುತ್ತಿರುವಾಗ ಬಾತ್ರೂಮ್‌ಗೆ ಇಣುಕಿದ ಹಾಸ್ಟೆಲ್ ಕ್ಯಾಂಟೀನ್‌ ಉದ್ಯೋಗಿಯ ಬಂಧನ

ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಹಿಳಾ ಹಾಸ್ಟೆಲ್ ಕ್ಯಾಂಟೀನ್‌ನ ಉದ್ಯೋಗಿಯೊಬ್ಬ ಮಹಿಳೆಯರ ಬಾತ್ರೂಮ್‌ಗೆ ಇಣುಕಿ ನೋಡಿದಾಗ ಸಿಕ್ಕಿಬಿದ್ದಿದ್ದಾರೆ. ನಂತರ ಆ ವ್ಯಕ್ತಿಯನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರು ಸ್ನಾನ ಮಾಡುತ್ತಿರುವಾಗ ಬಾತ್ರೂಮ್‌ಗೆ ಇಣುಕಿದ  ಹಾಸ್ಟೆಲ್ ಕ್ಯಾಂಟೀನ್‌ ಉದ್ಯೋಗಿಯ ಬಂಧನ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 20, 2022 | 5:26 PM

ಬಾಂಬೆ: ಈ ಹಿಂದೆ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯಂತೆ ಇದೀಗ ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮಹಿಳಾ ಹಾಸ್ಟೆಲ್ ಕ್ಯಾಂಟೀನ್‌ನ ಉದ್ಯೋಗಿಯೊಬ್ಬ ಮಹಿಳೆಯರ ಬಾತ್ರೂಮ್‌ಗೆ ಇಣುಕಿ ನೋಡಿದಾಗ ಸಿಕ್ಕಿಬಿದ್ದಿದ್ದಾರೆ. ನಂತರ ಆ ವ್ಯಕ್ತಿಯನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ತಮ್ಮ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಎಂಬ ಮಹಿಳಾ ವಿದ್ಯಾರ್ಥಿಗಳ ಆರೋಪಿಸಿದ್ದಾರೆ.

ಕಿಟಕಿಯ ಸೀಳಿನ ಮೂಲಕ ಹಾಸ್ಟೆಲ್ ಕ್ಯಾಂಟೀನ್‌ ಸಿಬ್ಬಂದಿಗಳು ಬಾತ್ರೂಮ್‌ಗೆ ಇಣುಕಿ ನೋಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬಳು ಅಲಾರಾಂ ಮಾಡಿದ್ದಾರೆ. ಅಂದು ಭಾನುವಾರ ಆ ಕಾರಣಕ್ಕೆ ಕ್ಯಾಂಟೀನ್ ಅನ್ನು ಮುಚ್ಚಲಾಗಿತ್ತು ಆದರೆ ಆ ಸಮಯದಲ್ಲಿ ಕಾರ್ಮಿಕರು ಹಾಸ್ಟೆಲ್ ಆವರಣದಲ್ಲಿದ್ದರು. ಹಾಸ್ಟೆಲ್ ಕಟ್ಟಡದ ಬಾತ್ರೂಮ್‌​ಗಳು ನೆಲ ಮಹಡಿಯಿಂದ ಪೈಪ್‌ಗಳೊಂದಿಗೆ ಪ್ಲಾಟ್‌ಫಾರ್ಮ್ ತರಹದ ಪ್ರದೇಶದಲ್ಲಿ ಕಿಟಕಿಗಳನ್ನು ಹೊಂದಿವೆ ಎಂದು ಐಐಟಿ ವಿದ್ಯಾರ್ಥಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೈಪ್ ಡಕ್ಟ್ ಏರಿಕೊಂಡು ಬಂದು ಮಹಿಳೆಯರು ಸಾನ್ನ ಮಾಡುವ ವಿಡಿಯೋಗಳನ್ನು ಮಾಡಿದ್ದಾರೆ. ಇದೀಗ ಆರೋಪಿಗಳ ಬಂಧಿಸಿದ್ದು ಆರೋಪಿಗಳಿಂದ ವಶಪಡಿಸಿಕೊಂಡ ಫೋನ್‌ಗಳಲ್ಲಿ ಯಾವುದೇ ದೃಶ್ಯಾವಳಿಗಳು ಕಂಡುಬಂದಿಲ್ಲ ಎಂದು ಹೇಳಲಾಗಿದೆ. ಆರಂಭಿಕ ತನಿಖೆಗಳು ಯಾವುದೇ ದಾಖಲೆಗಳು ಕಂಡು ಬಂದಿಲ್ಲ. ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Published On - 5:26 pm, Tue, 20 September 22