ಬೆಂಗಳೂರು: ಕುಂಭಮೇಳ ಪ್ರವಾಸದ ಹೆಸರಲ್ಲಿ ಅಮಾಯಕರಿಗೆ ಲಕ್ಷಾಂತರ ರೂ. ವಂಚನೆ

ಬೆಂಗಳೂರಿನ ಗೋವಿಂದರಾಜನಗರ ಪೊಲೀಸರು ಕುಂಭಮೇಳ ಪ್ರವಾಸದ ಹೆಸರಿನಲ್ಲಿ 70 ಲಕ್ಷ ರೂಪಾಯಿಗಳ ವಂಚನೆ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ. ರಾಘವೇಂದ್ರ ರಾವ್ ಎಂಬಾತ 100ಕ್ಕೂ ಹೆಚ್ಚು ಜನರಿಂದ ಹಣ ಪಡೆದು ವಂಚಿಸಿದ್ದಾನೆ. ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿ, ಯಾತ್ರಾರ್ಥಿಗಳನ್ನು ಆಕರ್ಷಿಸಿ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಕುಂಭಮೇಳ ಪ್ರವಾಸದ ಹೆಸರಲ್ಲಿ ಅಮಾಯಕರಿಗೆ ಲಕ್ಷಾಂತರ ರೂ. ವಂಚನೆ
ಆರೋಪಿ ರಾಘವೇಂದ್ರ ರಾವ್​

Updated on: Mar 10, 2025 | 12:30 PM

ಬೆಂಗಳೂರು, ಮಾರ್ಚ್​ 10: ಕುಂಭಮೇಳ (Kumbh Mela) ಪ್ರವಾಸ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ರಾವ್ ಬಂಧಿತ ಆರೋಪಿ. ಪಾಂಚಜನ್ಯ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್​ನಿಂದ ಅಯೋಧ್ಯೆ, ಕಾಶಿ, ಪ್ರಯಾಗ್​ರಾಜ್ (Prayagraj), ವಾರಣಾಸಿ ಸೇರಿಂದತೆ ವಿವಿಧ ತೀರ್ಥ ಕ್ಷೇತ್ರಗಳಿಗೆ 14 ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಫೇಸ್​ಬುಕ್​ನಲ್ಲಿ ಜಾಹೀರಾತು ನೀಡಿದ್ದಾನೆ.

ಇದನ್ನು ನಂಬಿದ ಯಾತ್ರಾರ್ಥಿಗಳು ರಾಘವೇಂದ್ರ ರಾವ್​ನನ್ನು ಸಂಪರ್ಕಿಸಿದ್ದಾರೆ. ಆಗ, ಆರೋಪಿ ರಾಘವೇಂದ್ರ ರಾವ್, ಏಳು ದಿನಗಳ ಪ್ಯಾಕೇಜ್​ಗೆ ತಲಾ 49 ಸಾವಿರ ರೂ. ಪಡೆದಿದ್ದಾನೆ.​ ಹೀಗೆ, ಪ್ರವಾಸದ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ 70 ಲಕ್ಷ ರೂ. ಪಡೆದಿದ್ದಾನೆ. ಬಳಿಕ, ರಾಘವೇಂದ್ರ ರಾವ್ ಎರಡು ರೀತಿ ವಂಚನೆ ಎಸಗಿದ್ದಾನೆ.

ಕೆಲವರಿಗೆ ಟಿಕೆಟ್ ಬುಕ್ ಮಾಡಿ, ನಂತರ ರದ್ದು ಮಾಡಿದ್ದಾನೆ. ರದ್ದು ಮಾಡಿದ ಬಳಿಕ ವಾಪಸ್​ ಆದ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ
ವಂಚನೆ ಆರೋಪ: ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ಎಫ್​ಐಆರ್
ಹೈಕೋರ್ಟ್ ಆದೇಶವನ್ನೇ ನಕಲಿ ಮಾಡಿ ಲಕ್ಷಾಂತರ ರೂ. ವಂಚನೆ: ಇಬ್ಬರ ಬಂಧನ
ಬೈಜುಸ್​ಗೆ ಅಮೆರಿಕನ್ ಕೋರ್ಟ್ ಕಂಟಕ; ತನಿಖೆಗೆ ಬೈಜು ಒತ್ತಾಯ
2.40 ಕೋಟಿ ವಂಚನೆ ಪ್ರಕರಣ: ತಮನ್ನಾ ಭಾಟಿಯಾ, ಕಾಜಲ್​ಗೆ ಪೊಲೀಸರ ನೊಟೀಸ್

ಇನ್ನು ಕೆಲವರಿಗೆ, ಪ್ರಯಾಗ್ ರಾಜ್​ಗೆ ಯಾತ್ರಿಕರು ತಲುಪಿದ ನಂತರ ಅವರ ರಿಟರ್ನ್ ಟಿಕೆಟ್ ರದ್ದು ಮಾಡಿದ್ದಾನೆ. ವಾಪಸ್​ ಆದ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಟಿಕೆಟ್ ರದ್ದಾದ ಬಳಿಕ ರಾಘವೇಂದ್ರ ರಾವ್​ ಮೊಬೈಲ್ ಸ್ವಿಚ್​ ಆಫ್ ಮಾಡಿದ್ದಾನೆ. ಈ ಬಗ್ಗೆ ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ 20 ಕ್ಕೂ ಹೆಚ್ಚು ಜನರು ದೂರು‌ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ರಾಘವೇಂದ್ರ ರಾವ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಅಭಿಮಾನಿಗಳ ಪರವಾಗಿ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ

ವಂಚಿಸಿ ಪಡೆದಿದ್ದ ಹಣದಲ್ಲಿ ರಾಘವೇಂದ್ರ ರಾವ್ ಬೆಟ್ಟಿಂಗ್ ಆಡಿ ಸೋತಿದ್ದಾನೆ. ರಾಂಘವೇಂದ್ರ ರಾವ್​ ಬೆಟ್ಟಿಂಗ್ ಆ್ಯಪ್​ನಲ್ಲಿ ಹಣ ಹಾಕಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಗೋವಿಂದರಾಜನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ