ಮನೆಗಳ್ಳತನ ಮಾಡುವಾಗ ಏನೂ ಸಿಗದಿದ್ದರೆ ಮನೆಗೆ ಬೆಂಕಿ ಹಚ್ಚುತ್ತಿದ್ದ ಕಳ್ಳರು ನಂಬರ್​ಪ್ಲೇಟ್ ಇಲ್ಲದ  ಬೈಕ್​ನಿಂದ ಸಿಕ್ಕಿಬಿದ್ದರು!

ಕಳ್ಳತನದ ವೇಳೆ‌ ಹೆಚ್ವಿನ ಮೌಲ್ಯದ ಹಣ ಸಿಗಲಿಲ್ಲ ಎಂದು ಮನೆಗೆ ಬೆಂಕಿ ಹಚ್ಚುತ್ತಿದ್ದ ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿ ಬಂಧಿತರಿಂದ 11 ಲಕ್ಷ ಮೌಲ್ಯದ ಚಿನ್ನಾಭರಣ, 770 ಗ್ರಾಂ‌ ಬೆಳ್ಳಿ ಸೇರಿದಂತೆ 4 ಬೈಕ್‌ ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮನೆಗಳ್ಳತನ ಮಾಡುವಾಗ ಏನೂ ಸಿಗದಿದ್ದರೆ ಮನೆಗೆ ಬೆಂಕಿ ಹಚ್ಚುತ್ತಿದ್ದ ಕಳ್ಳರು ನಂಬರ್​ಪ್ಲೇಟ್ ಇಲ್ಲದ  ಬೈಕ್​ನಿಂದ ಸಿಕ್ಕಿಬಿದ್ದರು!
ಬಂಧಿತ ಆರೋಪಿಗಳು
TV9kannada Web Team

| Edited By: guruganesh bhat

Jul 19, 2021 | 10:00 PM

ನೆಲಮಂಗಲ: ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಸರಗಳ್ಳತನ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸರಗಳ್ಳತನಗಳನ್ನು ನಿಲ್ಲಿಸಲು ಬಾಗಲಗುಂಟೆ ಪೊಲೀಸರು ಆಯಕಟ್ಟಿನ ಪ್ರದೇಶಗಳಲ್ಲಿ ಬ್ಯಾರಿಕೇಟ್‌ಗಳನ್ನ ಅಳವಡಿಸಿಕೊಂಡು ಬೈಕ್‌ಗಳ ತಪಾಸಣೆ ನಡೆಸುತ್ತಿದ್ದರು, ಈ ವೇಳೆ ನಂಬರ್‌ ಪ್ಲೇಟ್ ಇಲ್ಲದೆ ಬೈಕ್‌ನಲ್ಲಿ ಬಂದ ಆರೋಪಿಗಳು ಪೊಲೀಸರು ವಿಚಾರಣೆ ನಡೆಸಿದಾಗ ಕದ್ದಿರುವ ಬೈಕ್ ಎಂದು ತಿಳಿದುಬಂದಿದೆ. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಮನೆಗಳ್ಳತನ ಪ್ರಕರಣಗಳ ಆರೋಪಿಗಳು ಸೆರೆಸಿಕ್ಕಿದ್ದಾರೆ. 

ಬಾಗಲಗುಂಟೆಯ ಐದು ಪ್ರಕರಣಗಳು, ಮಾದನಾಯಕನಹಳ್ಳಿ ತಾವರೆಕೆರೆ ಗೊಂಡನಹಳ್ಳಿಯಲ್ಲಿ ತಲಾ ಒಂದರಂತೆ ಬರೋಬ್ಬರಿ 8 ಪ್ರಕರಣಗಳ ಭಾಗಿಯಾಗಿದ್ದ ಆರೋಪಿಗಳನ್ನು ಬಾಗಲಗುಂಟೆ ಇನ್ಸ್​ಪೆಕ್ಟರ್ ಸುನೀಲ್ ನೇತೃತ್ವದ ತಂಡ ಬಂಧಿಸಿದೆ. ಬೆಂಗಳೂರಿನ ಹುಸ್ಕೂರು ಮೂಲದ 22 ವರ್ಷದ ನಾಗೇಶ್ ಹಾಗೂ ತಮಿಳುನಾಡಿನ ಹೊಸೂರು ಮೂಲದ 19 ವರ್ಷದ ನಿತೀಶ್ ಅಲಿಯಾಸ್ ಜಬ್ಬರ್ ಸದ್ಯ ಪೊಲೀಸರಿಗೆ ಸೆರೆ ಸಿಕ್ಕಿಬಿದ್ದಾರೆ.

ಆರೋಪಿಗಳು ಮನೆಗಳ್ಳತನ ಮಾಡಲು 4 ಬೈಕ್​ಗಳನ್ನು ಕದ್ದಿದ್ದರು. ಕದ್ದ ಬೈಕ್‌ನಲ್ಲಿ ಬೀಗ ಹಾಕಿದ ಮನೆಗಳನ್ನು ಹುಡುಕಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಬಾಗಲಗುಂಟೆ ಪೊಲೀಸ್ ಠಾಣ ವ್ಯಾಪ್ತಿಯ ಥಾಮಸ್ ಎನ್ನುವವರ ಮನೆಗೆ ಕನ್ನ ಹಾಕಿ 2 ಲಕ್ಷದ 10 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಅಲ್ಲದೇ ಬಾಗಲಗುಂಟೆಯ ವೃದ್ದೆ ಲತಾ ಮನೆಯಲ್ಲಿ‌ ಕಳತನಕ್ಕೆ ಇಳಿದಿದ್ದ ವೇಳೆ 50 ರೇಷ್ಮೆ ಸೀರೆ ದೋಚಿ ಮನೆಯಲ್ಲಿ ನಗದು ಚಿನ್ನಾಭರಣ ಇಲ್ಲದಕ್ಕೆ ಆಕ್ರೋಶಗೊಂಡು ಮನೆಯ ಒಳಾಂಗಣಕ್ಕೆ ಬೆಂಕಿ ಇಡುವ ಮೂಲಕ ಕ್ರೂರತ್ವ ಮೆರೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸಂಬಂಧ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಒಟ್ಟಾರೆ ಕಳ್ಳತನದ ವೇಳೆ‌ ಹೆಚ್ವಿನ ಮೌಲ್ಯದ ಹಣ ಸಿಗಲಿಲ್ಲ ಎಂದು ಮನೆಗೆ ಬೆಂಕಿ ಹಚ್ಚುತ್ತಿದ್ದ ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿ ಬಂಧಿತರಿಂದ 11 ಲಕ್ಷ ಮೌಲ್ಯದ ಚಿನ್ನಾಭರಣ, 770 ಗ್ರಾಂ‌ ಬೆಳ್ಳಿ ಸೇರಿದಂತೆ 4 ಬೈಕ್‌ ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

ಇದನ್ನೂ ಓದಿ: 

ಪೊಲೀಸರು ಅಪರಾಧಿಗಳನ್ನು ಹೀಗೂ ಕರೆದೊಯ್ಯುತ್ತಾರಾ?

(Bengaluru police arrest thieves who set fire to the house when they did not find anything to do with theft were caught on a bike without a number plate)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada