ಸೈಬರ್ ಕ್ರೈಂ ತಡೆಯಲು ಬೆಂಗಳೂರು ಪೊಲೀಸರು ಯಶಸ್ವಿ; ವಂಚಕರ ಖಾತೆಗೆ ಹೋಗಬೇಕಿದ್ದ 48 ಕೋಟಿ ರೂಪಾಯಿ ವಾಪಸ್!

2020ರ ಡಿಸೆಂಬರ್​ 22ರಂದು ICR ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೋಲ್ಡನ್​ ಹವರ್ ಕಾನ್ಸೆಪ್ಟ್​ ಜಾರಿಗೊಳಿಸಿದ್ದರು.

ಸೈಬರ್ ಕ್ರೈಂ ತಡೆಯಲು ಬೆಂಗಳೂರು ಪೊಲೀಸರು ಯಶಸ್ವಿ; ವಂಚಕರ ಖಾತೆಗೆ ಹೋಗಬೇಕಿದ್ದ 48 ಕೋಟಿ ರೂಪಾಯಿ ವಾಪಸ್!
ಸೈಬರ್ ಕ್ರೈಂ

ಬೆಂಗಳೂರು: ಸೈಬರ್​ ಕ್ರೈಂ​ ಇನ್ಸಿಡೆಂಟ್​ ರಿಪೋರ್ಟ್​ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವಿಧಾನದ ಮೂಲಕ ಸೈಬರ್​ ವಂಚಕರ ಖಾತೆಗೆ ಹೋಗಬೇಕಿದ್ದ ಹಣ ವಾಪಸ್ ಪಡೆಯಲಾಗಿದೆ. ಕಳೆದ ತಿಂಗಳಲ್ಲಿ ಬರೋಬ್ಬರಿ 48 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ. 48 ಕೋಟಿ ಹಣ ಹಿಂಪಡೆದಿರುವ ಬೆಂಗಳೂರು ಪೊಲೀಸರು, ವಂಚಕರ ಖಾತೆಗೆ ಹೋಗಬೇಕಿದ್ದ ಹಣವನ್ನು ಉಳಿಸಿದ್ದಾರೆ. ದಾಖಲಾದ ಒಟ್ಟು 3175 ಪ್ರಕರಣಗಳ ಪೈಕಿ ವಂಚಕರ 1312 ಬ್ಯಾಂಕ್​ ಖಾತೆ ಫ್ರೀಜ್ ಮಾಡಲಾಗಿದೆ.

2020ರ ಡಿಸೆಂಬರ್​ 22ರಂದು ICR ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೋಲ್ಡನ್​ ಹವರ್ ಕಾನ್ಸೆಪ್ಟ್​ ಜಾರಿಗೊಳಿಸಿದ್ದರು. ಅದರಂತೆ ಸೈಬರ್​ ವಂಚನೆಯಾದ 1 ಗಂಟೆ ಅವಧಿ ಗೋಲ್ಡನ್​ ಹವರ್ ಆಗಿರಲಿದೆ. ಆ ಅವಧಿಯಲ್ಲಿ 112 ಸಂಖ್ಯೆಯ ಮೂಲಕ ಸೈಬರ್​ ವಂಚನೆ ದೂರು ನೀಡಬೇಕು. 112 ಸಂಖ್ಯೆಗೆ ಕರೆ ಮಾಡಿ ಸೂಕ್ತ ಮಾಹಿತಿ ನೀಡಿದರೆ ಸಾಕು. ಖಾತೆಯಿಂದ ಯಾವುದೇ ಹಣ ವರ್ಗಾವಣೆಯಾಗದಂತೆ ತಡೆ ನೀಡಲಾಗುತ್ತದೆ.

ಈ ಕ್ರಮದಿಂದ ವರ್ಗಾವಣೆಯಾದ ಹಣ ವಂಚಕರ ಖಾತೆಯಿಂದ ವಾಪಸ್ ಮೋಸಕ್ಕೆ ಒಳಗಾದವರ ಖಾತೆಗೆ ಬರುತ್ತದೆ. ಗೋಲ್ಡನ್ ಹವರ್​ ಸದ್ಬಳಕೆ ಮಾಡಿಕೊಂಡರೆ ವಂಚನೆಗೆ ತಡೆ ಒಡ್ಡಬಹುದು. ಇದರಿಂದ ಸೈಬರ್​ ವಂಚನೆಗೊಳಗಾಗುವುದನ್ನು ತಗ್ಗಿಸಲು ಸಾಧ್ಯವಿದೆ. ಹೀಗೆ ಈ ವಿಧಾನದ ಮೂಲಕ ಬರೋಬ್ಬರಿ 48 ಕೋಟಿ ರೂಪಾಯಿಯನ್ನು ವಾಪಸ್ ಪಡೆಯಲಾಗಿದೆ. ಇದರಿಂದ ICR ವ್ಯವಸ್ಥೆ ಪ್ರಾಯೋಗಿಕ ಹಂತದಲ್ಲೇ ಯಶಸ್ಸು ಸಾಧಿಸಿದಂತಾಗಿದೆ.

ಗೋಲ್ಡನ್ ಹವರ್ ವ್ಯವಸ್ಥೆ ಬಳಸುವುದು ಹೀಗೆ:

– ನಿಮಗೆ ಯಾವುದೇ ರೀತಿಯ ಸೈಬರ್ ವಂಚನೆಯಾದರೆ. ನೀವು ನಿಮ್ಮ ಖಾತೆಯಿಂದ ಅಪರಿಚಿತರಿಗೆ ಹಣ ಕಳುಹಿಸಿದರೆ, ಮೋಸದ ಜಾಲಕ್ಕೆ ಬಿದ್ದರೆ ಕೂಡಲೇ ಎಚ್ಚರವಾಗಿ
– ನಿಮಗೆ ವಂಚನೆಯಾದ ನಂತರದ 1 ಗಂಟೆಯ ಅವಧಿ ಗೋಲ್ಡನ್ ಹವರ್ ಎಂದು ಪರಿಗಣಿಸಲ್ಪಡುತ್ತದೆ
– ಆ ಅವಧಿಯಲ್ಲಿ 112 ಸಂಖ್ಯೆಗೆ ಡಯಲ್ ಮಾಡಿ
– 112 ಸಂಖ್ಯೆಯ ಮೂಲಕ ಸೈಬರ್ ವಂಚನೆಯಾದ ಬಗ್ಗೆ ದೂರು ನೀಡಬೇಕು
– 112 ಸಂಖ್ಯೆಗೆ ಸೂಕ್ತ ಮಾಹಿತಿಗಳನ್ನು ಒದಗಿಸಿದರೆ ಸಾಕು
– ನಿಮ್ಮ ಖಾತೆಯಿಂದ ಯಾವುದೇ ಹಣ ವರ್ಗಾವಣೆ ಆಗದಂತೆ ತಡೆಯಲಾಗುತ್ತದೆ
– ಈ ಕ್ರಮದಿಂದ ವರ್ಗಾವಣೆಯಾದ ಹಣ ವಂಚಕರ ಖಾತೆಯಿಂದ ವಾಪಸ್ ಮೋಸಕ್ಕೆ ಒಳಗಾದವರ ಖಾತೆಗೆ ಬರುತ್ತದೆ

ಇದನ್ನೂ ಓದಿ: ಆರ್​ಬಿಐ ಹೆಸರಲ್ಲಿ ಸುಮಾರು 2 ಕೋಟಿ ವಂಚನೆ ಮಾಡಿದ್ದ ಯುವತಿ, ಕೃತ್ಯಕ್ಕೆ ಸಹಕರಿಸುತ್ತಿದ್ದ ನಟ ಬಂಧನ

ನೀವು ಈ ಅಪ್ಲಿಕೇಷನ್​ಗಳನ್ನು ಬಳಸುತ್ತಿದ್ದರೆ ಕೂಡಲೇ ಡಿಲೀಟ್ ಮಾಡಿ; ಮಾಹಿತಿ ಸೋರಿಕೆಯಿಂದ ಪಾರಾಗಿ!