ನಾಸಾ ಹಳೇ ತಾಮ್ರದ ಚೊಂಬು ಖರೀದಿಸುತ್ತದಂತೆ.. ಮೂವರು ಅಂದರು!

ಬೆಂಗಳೂರು: ಬಾಹ್ಯಾಕಾಶ ವಿಜ್ಞಾನಿಗಳ ಸೋಗಿನಲ್ಲಿ ಕೋಟಿ ಕೋಟಿ ವಂಚಿಸಿದ್ದ ಆರೋಪಿಗಳಿಗೆ ತಿಲಕ್ ನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಅಕ್ರಂ, ಆರ್ಯ ಪ್ರಧಾನ್ ಮತ್ತು ರಾಜೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಸಾ ಹೆಸರಲ್ಲಿ ವಂಚನೆ:  ಆರೋಪಿಗಳು ಸೈಯದ್ ಸಲೀಂ ಎಂಬ ಉದ್ಯಮಿಯನ್ನ ಭೇಟಿಯಾಗಿದ್ದರು. ರೈಸ್ ಪುಲ್ಲಿಂಗ್​ ಆರ್ಟಿಕಲ್​ಗೆ ನಾಸಾದಲ್ಲಿ‌ ಭರ್ಜರಿ‌ ಬೇಡಿಕೆಯಿದೆ ಎಂದು ನಂಬಿಸಿದ್ದರು. ತಾಮ್ರದ ತಂಬಿಗೆ, ರಾಸಾಯನಿಕಗಳು ಹಾಗೂ ಡೂಪ್ಲಿಕೇಟ್ ಬಾಹ್ಯಾಕಾಶ ಬಟ್ಟೆಯ ಮೂಲಕ ವಂಚನೆ ಮಾಡಿದ್ದಾರೆ. […]

ನಾಸಾ ಹಳೇ ತಾಮ್ರದ ಚೊಂಬು ಖರೀದಿಸುತ್ತದಂತೆ.. ಮೂವರು ಅಂದರು!
ಸಾಧು ಶ್ರೀನಾಥ್​

Updated on: Nov 20, 2019 | 3:37 PM

ಬೆಂಗಳೂರು: ಬಾಹ್ಯಾಕಾಶ ವಿಜ್ಞಾನಿಗಳ ಸೋಗಿನಲ್ಲಿ ಕೋಟಿ ಕೋಟಿ ವಂಚಿಸಿದ್ದ ಆರೋಪಿಗಳಿಗೆ ತಿಲಕ್ ನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಅಕ್ರಂ, ಆರ್ಯ ಪ್ರಧಾನ್ ಮತ್ತು ರಾಜೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಸಾ ಹೆಸರಲ್ಲಿ ವಂಚನೆ: 
ಆರೋಪಿಗಳು ಸೈಯದ್ ಸಲೀಂ ಎಂಬ ಉದ್ಯಮಿಯನ್ನ ಭೇಟಿಯಾಗಿದ್ದರು. ರೈಸ್ ಪುಲ್ಲಿಂಗ್​ ಆರ್ಟಿಕಲ್​ಗೆ ನಾಸಾದಲ್ಲಿ‌ ಭರ್ಜರಿ‌ ಬೇಡಿಕೆಯಿದೆ ಎಂದು ನಂಬಿಸಿದ್ದರು. ತಾಮ್ರದ ತಂಬಿಗೆ, ರಾಸಾಯನಿಕಗಳು ಹಾಗೂ ಡೂಪ್ಲಿಕೇಟ್ ಬಾಹ್ಯಾಕಾಶ ಬಟ್ಟೆಯ ಮೂಲಕ ವಂಚನೆ ಮಾಡಿದ್ದಾರೆ.

ತಾಮ್ರದ ತಂಬಿಗೆ ಇದ್ರೆ ಅದೃಷ್ಟ!
ರೈಸ್ ಪುಲ್ಲಿಂಗ್ ತಾಮ್ರದ ತಂಬಿಗೆ ಇಟ್ಟುಕೊಂಡರೆ ಅದೃಷ್ಟ ಖುಲಾಯಿಸುತ್ತೆ. ಹಳೆಯದಾದಷ್ಟೂ ತಾಮ್ರದ ಚೊಂಬಿಗೆ ಬೇಡಿಕೆ ಜಾಸ್ತಿಯಿದೆ. ನಂತರ ನಾಸಾ ಇದನ್ನು ಖರೀದಿಸುತ್ತದೆ ಎಂದು ನಂಬಿಸಿ ಕೋಟಿ ಕೋಟಿ ಹಣ ವಸೂಲಿ ಮಾಡಿದ್ದಾರೆ.

ಸದ್ಯ ತಿಲಕ ನಗರ ಪೊಲೀಸರ ಬಲೆಗೆ ಮೂವರು ಆರೋಪಿಗಳು ಬಿದ್ದಿದ್ದು, ಇದೇ ರೀತಿ ಹಲವರಿಗೆ ವಂಚಿಸಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ 20 ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Published On - 3:36 pm, Wed, 20 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us