ಮಾರಕಾಸ್ತ್ರಗಳಿಂದ ಕೊಚ್ಚಿ ಸಮಾಜ ಸೇವಕ, ಬಿಜೆಪಿ ಕಾರ್ಯಕರ್ತನ ಭೀಕರ ಹತ್ಯೆ
ಶಿವಮೊಗ್ಗ: ನಗರದ ಕುವೆಂಪು ಬಡಾವಣೆಯಲ್ಲಿ ತಡರಾತ್ರಿ ಮತ್ತೊಂದು ಮರ್ಡರ್ ಆಗಿದೆ. ಕುಖ್ಯಾತ ರೌಡಿ ಹಂದಿ ಅಣ್ಣನ ತಮ್ಮ ಗಿರೀಶ್ ಮರ್ಡರ್ ಆಗಿ ಇನ್ನೂ ನಾಲ್ಕೈದು ದಿನ ಆಗಲಿಲ್ಲ. ಅಷ್ಟರೊಳಗೆ ಮತ್ತೊಂದು ಕೊಲೆಯಾಗಿದೆ. ಈ ಬಾರಿ ಯಾವುದೋ ರೌಡಿ ಶೀಟರ್ ಕೊಲೆಯಲ್ಲ. ಸಮಾಜ ಸೇವಕ, ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ. ಬಿಜೆಪಿ ಕಾರ್ಯಕರ್ತ ನಾಗರಾಜ್ ಅಲಿಯಾಸ್ ಟೈಲ್ಸ್ ನಾಗನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಎಸ್ಕೇಪ್ ಆಗಿದ್ದಾರೆ. ಮರ್ಡರ್ ಆದ ಸ್ಥಳದಿಂದ ಟೈಲ್ಸ್ ನಾಗನ ಮನೆ ಬಹಳ ದೂರವೇನು ಇರಲಿಲ್ಲ. ಕುವೆಂಪು […]
ಶಿವಮೊಗ್ಗ: ನಗರದ ಕುವೆಂಪು ಬಡಾವಣೆಯಲ್ಲಿ ತಡರಾತ್ರಿ ಮತ್ತೊಂದು ಮರ್ಡರ್ ಆಗಿದೆ. ಕುಖ್ಯಾತ ರೌಡಿ ಹಂದಿ ಅಣ್ಣನ ತಮ್ಮ ಗಿರೀಶ್ ಮರ್ಡರ್ ಆಗಿ ಇನ್ನೂ ನಾಲ್ಕೈದು ದಿನ ಆಗಲಿಲ್ಲ. ಅಷ್ಟರೊಳಗೆ ಮತ್ತೊಂದು ಕೊಲೆಯಾಗಿದೆ. ಈ ಬಾರಿ ಯಾವುದೋ ರೌಡಿ ಶೀಟರ್ ಕೊಲೆಯಲ್ಲ. ಸಮಾಜ ಸೇವಕ, ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ.
ಬಿಜೆಪಿ ಕಾರ್ಯಕರ್ತ ನಾಗರಾಜ್ ಅಲಿಯಾಸ್ ಟೈಲ್ಸ್ ನಾಗನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಎಸ್ಕೇಪ್ ಆಗಿದ್ದಾರೆ. ಮರ್ಡರ್ ಆದ ಸ್ಥಳದಿಂದ ಟೈಲ್ಸ್ ನಾಗನ ಮನೆ ಬಹಳ ದೂರವೇನು ಇರಲಿಲ್ಲ. ಕುವೆಂಪು ಬಡಾವಣೆಯ ಎರಡನೇ ತಿರುವಿನಲ್ಲಿ ಈತನ ಮನೆ ಇದೆ. ಮನೆಯ ಸಮೀಪದಲ್ಲೇ ಟೈಲ್ಸ್ ನಾಗನ ಕೊಲೆ ನಡೆದಿದೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಶಾಂತಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.