ಮಡಕೇರಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು
ವಿದ್ಯುತ್ ಸ್ಪರ್ಶಿಸಿಸಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ವೀರಭದ್ರ ಮುನೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಕೊಡಗು: ವಿದ್ಯುತ್ ಸ್ಪರ್ಶಿಸಿಸಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ವೀರಭದ್ರ ಮುನೇಶ್ವರ ದೇವಸ್ಥಾನದಲ್ಲಿ ನಡೆದಿದೆ. ತಮಿಳುನಾಡು ಮೂಲದ ಕಾರ್ಮಿಕ ರಮೇಶ್ ಕದಿರ್ವೇಲು ಮೃತ ದುರ್ದೈವಿ. ರಮೇಶ್ ಕದಿರ್ವೇಲು ದೇವಸ್ಥಾನದ ಪ್ರವೇಶದ್ವಾರಕ್ಕೆ ಬಣ್ಣ ಬಳಿಯುತ್ತಿದ್ದರು. ಇದೇ ವೇಳೆಗೆ ಅಲ್ಲೇ ಇದ್ದ ಕಬ್ಬಿಣದ ರಾಡ್ಗೆ ವಿದ್ಯುತ್ ಸ್ಪರ್ಶವಾಗಿತ್ತು. ಬಣ್ಣ ಬಳಿಯುತ್ತ ಕಬ್ಬಿಣ ರಾಡ್ನ್ನು ಸ್ಪರ್ಶಿಸಿದ್ದರಿಂದ ರಮೇಶ್ ಸಾವನ್ನಪ್ಪಿರಬಹುದಾಗಿದೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದ ರೀತಿಯಲ್ಲಿ ಗರ್ಭಿಣಿ ಶವ ಪತ್ತೆ
ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಬೈನಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗರ್ಭಿಣಿ ಶವ ಪತ್ತೆಯಾಗಿದೆ. ಕುಟಂಬಸ್ಥರೇ ಗರ್ಭಿಣಿಯನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಆಂದ್ರ ಮೂಲದ ಅನಿತಾ (28) ಎಂಬುವರ ಶವ ಪತ್ತೆಯಾಗಿದೆ. ಪತ್ನಿ ಅನಿತಾಳನ್ನು ಪತಿ ಆನಂದ್ ಕುಮಾರ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆನಂದ್ ಹಾಗೂ ಅನಿತಾ ಕಳೆದ ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾಗಿ ದಂಪತಿಗಳು ಆಂದ್ರದಿಂದ ಬೈನಹಳ್ಳಿ ಗ್ರಾಮದ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ತಡರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಗಂಡನೆ ಕೊಲೆ ಮಾಡಿದ್ದಾನೆ ಅಂತ ಅನಿತಾ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಈ ನಡುವೆ ತೋಟದ ಮಾಲೀಕರು ಕಿರುಕುಳ ನೀಡ್ತಿದ್ದರು ಅಂತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೊಲೆ ಆರೋಪ ಹೊತ್ತಿರೋ ಆನಂದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರೋಡೆಗೆ ಸಂಚು ರೂಪಿಸ್ತಿದ್ದ ರೌಡಿಶೀಟರ್, ಗ್ಯಾಂಗ್ ಬಂಧನ: ದರೋಡೆಗೆ ಸಂಚು ರೂಪಿಸ್ತಿದ್ದ ರೌಡಿಶೀಟರ್ ಗ್ಯಾಂಗ್ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಕೋಳಿ ಫಯಾಸ್ನ ನಾಲ್ವರು ಸಹಚರರನ್ನು ಬಂಧಿಸಲಾಗಿದೆ. ಬಂಧಿತರಿಂದ ಪೊಲೀಸರು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಎರಡು ಪ್ರತ್ಯೇಕ ಅಪಘಾತ-ಇಬ್ಬರು ಸಾವು
ಕೋಲಾರ: ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬೆತ್ತಲನಗರದ ಬಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಫಯಾಜ್ ಎಂಬಾತ ಸಾವನ್ನಪ್ಪಿದ್ದಾನೆ. ಸಲೀಂ ಎಂಬಾತನಿಗೆ ಗಾಯವಾಗಿದೆ. ಮತ್ತೊಂದೆಡೆ ಇಂಡಿಯನ್ ಪಬ್ಲಿಕ್ ಶಾಲೆ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕ್ಯಾಲನೂರು ಗ್ರಾಮದ ಚೇತನ್ ಸ್ಥಳದಲ್ಲೇ ಮೃತನಾಗಿದ್ದಾನೆ. ಶ್ರೀಧರ್, ನಿಖಿಲ್ ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Sat, 24 September 22