AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ತಂದೆಯನ್ನೇ ಕೊಂದು ತಿಂದ, ಪೊಲೀಸರನ್ನು ನೋಡಿ ಸಿಕ್ಕಿ ಬಿದ್ದ..!

crime story in kannada; ನಾನು ತಂದೆಯನ್ನು ಕೊಲೆ ಮಾಡಿದ್ದೇನೆ. ಶವ ಮನೆಯಲ್ಲಿರುವುದಾಗಿ ತಿಳಿಸಿದ್ದ. ಇದನ್ನು ಕೇಳಿದ ಪೊಲೀಸರು ಖಾಲಿದ್​ನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ತಕ್ಷಣವೇ ನೇರವಾಗಿ ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

Crime News: ತಂದೆಯನ್ನೇ ಕೊಂದು ತಿಂದ, ಪೊಲೀಸರನ್ನು ನೋಡಿ ಸಿಕ್ಕಿ ಬಿದ್ದ..!
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 13, 2022 | 9:57 PM

Share

ಕೆಲ ದಿನಗಳ ಹಿಂದೆ ನ್ಯೂಯಾರ್ಕ್​ ನಗರದಲ್ಲಿ ಒಂದೇ ದಿನ ಐದು ಕೊಲೆಗಳಾಗಿರುವ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿತ್ತು. ಆದರೆ ಈ ಕೊಲೆಗಳಿಗೆ ಒಂದಕ್ಕೊಂದು ಸಂಬಂಧವಿರಲಿಲ್ಲ. ಇದಾಗ್ಯೂ ಇದರಲ್ಲಿ ಒಂದು ಕೊಲೆಯ ಸುದ್ದಿ ಕೇಳಿ ಪೊಲೀಸರೇ ದಂಗಾಗಿದ್ದರು. ಏಕೆಂದರೆ ಈ ಕೊಲೆ ಮಾಡಿದವನೇ ಬಂದು ತಾನು ಕೊಲೆಗಾರ ಎಂದಿದ್ದ. ನ್ಯೂಯಾರ್ಕ್​ನ ಬ್ರೂಕ್ಲಿನ್​ನ 26 ವರ್ಷ ಖಾಲಿದ್ ಅಹ್ಮದ್ ಕೊಲೆ ಆರೋಪಿ. ಈತ ಶಾಪ್​ನಲ್ಲಿ ನಿಂತಿದ್ದ ಪೊಲೀಸ್ ಅಧಿಕಾರಿಗಳನ್ನು ನೋಡಿ ನಾನು ಕೊಲೆ ಮಾಡಿರುವುದಾಗಿ ಹೋಗಿ ಹೇಳಿದ್ದಾನೆ.

ಇದನ್ನು ಕೇಳಿದ ಪೊಲೀಸರು ಅಚ್ಚರಿಗೊಂಡರು. ಏಕೆಂದರೆ ಖಾಲಿದ್ ಮೇಲೆ ಪೊಲೀಸರಿಗೆ ಯಾವುದೇ ಸಂಶಯ ಇರಲಿಲ್ಲ. ಇದಾಗ್ಯೂ ಆತ ಪೊಲೀಸರನ್ನು ನೋಡಿ ಹೆದರಿದ್ದ. ತನ್ನನ್ನೇ ಹಿಡಿಯಲು ಬಂದಿದ್ದಾರೆ ಎಂದು ಅನುಮಾನಗೊಂಡು ನೇರವಾಗಿ ಪೊಲೀಸರ ಬಳಿ ಹೋಗಿ ನಾನು ತಂದೆಯನ್ನು ಕೊಲೆ ಮಾಡಿದ್ದೇನೆ. ಶವ ಮನೆಯಲ್ಲಿರುವುದಾಗಿ ತಿಳಿಸಿದ್ದ. ಇದನ್ನು ಕೇಳಿದ ಪೊಲೀಸರು ಖಾಲಿದ್​ನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ತಕ್ಷಣವೇ ನೇರವಾಗಿ ಖಾಲಿದ್​ನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, 57 ವರ್ಷದ ಇಮಾದ್ ಅಹ್ಮದ್ ಪ್ರಜ್ಞಾಹೀನ ಮತ್ತು ಚಲನರಹಿತವಾಗಿ ಬಿದ್ದಿರುವುದು ಕಂಡಿದ್ದಾರೆ. ಅಲ್ಲದೆ ಆತನ ದೇಹದ ಮೇಲೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿತ್ತು. ಅಷ್ಟೇ ಅಲ್ಲದೆ ಇಡೀ ದೇಹವನ್ನು ವಿರೂಪಗೊಳಿಸಲಾಗಿತ್ತು. ಇನ್ನು ದೇಹದ ಅನೇಕ ಭಾಗಗಳು ಕಾಣೆಯಾಗಿದ್ದವು.

ಇದನ್ನೂ ಓದಿ
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
T20 World Cup: ಟಿ20 ವಿಶ್ವಕಪ್​ನಲ್ಲಿ 20 ತಂಡಗಳ ನಡುವೆ ಸೆಣಸಾಟ..!
Image
Railway Recruitment 2022: SSLC ಪಾಸಾದವರಿಗೆ ಸುರ್ವಣಾವಕಾಶ: ರೈಲ್ವೆಯಲ್ಲಿದೆ ಉದ್ಯೋಗಾವಕಾಶ
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಈ ಭೀಕರ ಹತ್ಯೆಯನ್ನು ನೋಡಿದ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು, ‘ನಾನು ನೋಡಿದ ಅತ್ಯಂತ ಕೆಟ್ಟ ಅಪರಾಧ ದೃಶ್ಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ. ಅಂದರೆ ಖಾಲಿದ್ ಸ್ವಂತ ತಂದೆಯನ್ನು ಯಾವ ರೀತಿಯಾಗಿ ಕೊಲೆ ಮಾಡಿದ್ದ ಎಂಬುದನ್ನು ಊಹಿಸಬಹುದು. ಇನ್ನು ಖಾಲಿದ್​ನನ್ನು ಬಂಧಿಸಿದ ಪೊಲೀಸಿರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಈ ವೇಳೆ 26 ವರ್ಷದ ಖಾಲಿದ್ ಅಹ್ಮದ್ ನಿರುದ್ಯೋಗಿ ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಭಾವನಾತ್ಮಕವಾಗಿ ವಿಚಲಿತನಾಗಿದ್ದ. ಜೊತೆಗೆ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ. ಹೀಗಾಗಿ ತಂದೆಯ ಜೊತೆ ವೈಮನಸ್ಸು ಹೊಂದಿದ್ದನು. ಹೀಗೆ ತಂದೆಯ ಜೊತೆ ಜಗಳವಾಡಿ ಆತನನ್ನು ಕೊಲೆ ಮಾಡಿದ್ದಾನೆ. ಅಲ್ಲದೆ ತಂದೆಯ ದೇಹದ ಕೆಲ ಭಾಗವನ್ನು ಆತ ತಿಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ