ಚಪ್ಪಲಿ ನುಡಿಯಿತು ಸಾಕ್ಷಿ! ಪೊಲೀಸರು ಆ ಸರಗಳ್ಳ ಯುವಕನನ್ನು ಕಂಬಿ ಹಿಂದೆ ಬಿಟ್ಟುಬಂದರು! ರೋಚಕ ಸ್ಟೋರಿ ಇಲ್ಲಿದೆ ನೋಡಿ

Channarayapatna Police: ಆದರೆ ಆತನ ಕಾಲಿನಲ್ಲಿದ್ದ ಚಪ್ಪಲಿ ಮಾತ್ರ ಆತ ಯಾರು ಎನ್ನೋದನ್ನ ಸಾರಿ ಹೇಳ್ತಿತ್ತು. ಚಪ್ಪಲಿ ಗುರುತು ಆಧರಿಸಿ ಪೊಲೀಸರು ಕಾರ್ಯಚರಣೆಗಿಳಿದಾಗ ಚನ್ನರಾಯಪಟ್ಟಣ ತಾಲ್ಲೂಕಿನ ವಡ್ಡರಹಳ್ಳಿ ಬಳಿ ಪಲ್ಸರ್ ಬೈಕ್ ನಲ್ಲಿ ಕುಳಿತಿದ್ದ ಯುವಕನನ್ನ ಪೊಲೀಸರು ಗಮನಿಸಿದ್ದರು.

ಚಪ್ಪಲಿ ನುಡಿಯಿತು ಸಾಕ್ಷಿ! ಪೊಲೀಸರು ಆ ಸರಗಳ್ಳ ಯುವಕನನ್ನು ಕಂಬಿ ಹಿಂದೆ ಬಿಟ್ಟುಬಂದರು! ರೋಚಕ ಸ್ಟೋರಿ ಇಲ್ಲಿದೆ ನೋಡಿ
ಚಪ್ಪಲಿ ನುಡಿಯಿತು ಸಾಕ್ಷಿ! ರೋಚಕ ಸ್ಟೋರಿ ಇಲ್ಲಿದೆ
Follow us
|

Updated on: Jun 02, 2023 | 1:35 PM

ಅವ ಖತರ್ನಾಕ್ ಖದೀಮ… ಒಂಟಿ ಮಹಿಳೆಯರನ್ನ ಸದ್ದಿಲ್ಲದೇ ಟಾರ್ಗೆಟ್ ಮಾಡೋದು… ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಸಿಕ್ಕರೆ ಅವರ ಕೊರಳಿಗೆ ಕೈ ಹಾಕಿ ಚಿನ್ನದ ಸರ ಎಗರಿಸಿ ಎಸ್ಕೇಪ್ ಆಗೋದು.. ಹೆಲ್ಮೆಟ್ ಧರಿಸೋದಿಲ್ಲ… ಯಾರ ಸಹಾಯವನ್ನೂ ಪಡೆಯೋದಿಲ್ಲ. ಕ್ಷಣ ಮಾತ್ರದಲ್ಲಿ ಬಂದು ಪಲ್ಸರ್ ಬೈಕ್ ನಲ್ಲಿ ಮಿಂಚಿ ಮಾಯವಾಗ್ತಿದ್ದ! ಆ ಚಾಲಾಕಿ ಎರಡೇ ತಿಂಗಳಲ್ಲಿ 9 ಕಡೆ ಸರ ಎಗರಿಸಿದ್ದ. ಯಾರ ಕೈಗೂ ಸಿಗದೆ ಸಿಸಿ ಕ್ಯಾಮೆರಾ ಇಲ್ಲದಿರೋ ಸ್ಥಳಗಳನ್ನೇ ಆಯ್ಕೆಮಾಡಿಕೊಂಡು ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದವನನ್ನು ಬಲೆಗೆ ಕೆಡವಲೇ ಬೇಕೆಂದು ಕಾರ್ಯಾಚರಣೆಗಿಳಿದ ಪೊಲೀಸರಿಗೆ (Channarayapatna Police) ಸಾಕ್ಷಿ ಹೇಳಿದ್ದು ಅವನ ಚಪ್ಪಲಿ.. ಯಾವುದೇ ಹಳೆ ಕೇಸಿಲ್ಲ.. ಸರ ಕಿತ್ತುಕೊಳ್ಳೋ ಸಿಸಿ ಕ್ಯಾಮೆರಾಗಳ ವಿಡಿಯೋ ಕೂಡ ಇಲ್ಲ. ಆದ್ರೆ ಕೃತ್ಯ ಮಾಡಿ ಎಸ್ಕೇಪ್ ಆಗೋ ಸಮಯದ ಸಿಸಿ ಕ್ಯಾಮೆರಾ ತೆಗೆದ್ರೆ ಮುಖ ಕಾಣ್ತಿಲ್ಲ. ಬೈಕ್ ನಂಬರ್ ಗೊತ್ತಾಗ್ತಿಲ್ಲ. ಆದ್ರೆ ನಖ ಶಿಖಾಂತ ದುರ್ನೀನು ಹಾಕಿಕೊಂಡು, ಜೂಮ್ ಮಾಡಿ ನೋಡಿದಾಗ ಕಾಲಲ್ಲಿದ್ದ ಚಪ್ಪಲಿ (slipper evidence) ಸುಳಿವು ನೀಡತೊಡಗಿತು. ಅದನ್ನೇ ಆಧರಿಸಿ ಆರೋಪಿಯನ್ನ ಖೆಡ್ಡಾಕೆ ಕೆಡವಿರೋ ಪೊಲೀಸರು ಮಹಿಳೆಯರ ಸರಗಳನ್ನ (Chain snatcher) ಪತ್ತೆ ಮಾಡಿದ ರೋಚಕ ಸ್ಟೋರಿ ಇಲ್ಲಿದೆ ನೋಡಿ…

ಎರಡು ತಿಂಗಳಲ್ಲಿ 9 ಕಡೆ ಸರಗಳ್ಳತನ… ಹಾಸನ ಜಿಲ್ಲೆಯ ಗಡಿಭಾಗ ಹಾಗೂ ಮಂಡ್ಯದ ಕೆಲವೆಡೆ ಆತಂಕ ಸೃಷ್ಟಿ ಮಾಡಿದ್ದ ಖತರ್ನಾಕ್ ಸರಗಳ್ಳನನ್ನ ಖೆಡ್ಡಾಕ್ಕೆ ಕೆಡವಿದ ಪೊಲೀಸರು.. ಐಷಾರಾಮಿ ಜೀವನಕ್ಕಾಗಿ ಕಳ್ಳತನದ ಹಾದಿ.. ಹಾಕಿದ ಚಪ್ಪಲಿಯಿಂದಲೇ ತಗ್ಲಾಕಿಕೊಂಡ ಖತರ್ನಾಕ್ ಚೋರ… ಹೌದು ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರೋ ಸರಗಳ್ಳತನ ಒಂಟಿ ಮಹಿಳೆಯರನ್ನ ಆತಂಕಕ್ಕೆ ದೂಡಿದೆ. ವಾರದ ಹಿಂದೆ ಹಾಸನ ನಗರದ ಮಹಾವೀರ ಕಲ್ಯಾಣ ಮಂಟಪದ ಸಮೀಪ ಮಹಿಳೆಯ ಸರ ಎಗರಿಸಿ ಎಸ್ಕೇಪ್ ಆಗಿದ್ದ ಇಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿರುವುದರ ನಡುವೆಯೇ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ 7 ಕಡೆ ಹಾಗೂ ಮಂಡ್ಯ ಜಿಲ್ಲೆಯ ಒಂದು ಕಡೆ ಸೇರಿ ಪಟ್ಟು 9 ಕಡೆಗಳಲ್ಲಿ ಸರಗಳ್ಳತನ ಮಾಡಿದ್ದ ಖತರ್ನಾಕ್ ಆರೋಪಿಯನ್ನ ಹಿರಿಸಾವೆ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಮಾಳೇನಹಳ್ಳಿಯ 23 ವರ್ಷದ ಯುವಕ ಎಂ.ಕೆ. ಸುಧಾಕರ್ ಬಂಧಿತ ಆರೋಪಿ. ಬೇಗನೆ ಹಣ ಮಾಡಬೇಕು, ಐಷಾರಾಮಿ ಜೀವನ ನಡೆಸಬೇಕು ಅನ್ನೋ ಗೀಳಿಗೆ ಬಿದ್ದಿದ್ದ ಈತ, ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಒಂದೇ ಏಟಿಗೆ ಲಕ್ಷ ಲಕ್ಷದ ಚಿನ್ನಾಭರಣ ಚೋರಿ ಮಾಡಿ ಹಣ ಮಾಡೋ ದಾರಿಯನ್ನ. ತನ್ನ ಪಲ್ಸರ್ ಬೈಕ್ ನಲ್ಲಿ ಬರೋದು ನಿರ್ಜನ ಪ್ರದೇಶ ಮತ್ತು ಸಿಸಿ ಕ್ಯಾಮೆರಾ ಇಲ್ಲದ ಏರಿಯಾಗಳನ್ನ ಆಯ್ಕೆ ಮಾಡಿ, ಅಲ್ಲಿ ಹೊಂಚು ಹಾಕಿ ಕಾಯೋದು, ಅಲ್ಲಿ ಬರುವ ಒಂಟಿ ಮಹಿಳೆಯರ ಬಳಿ ಚಿನ್ನದ ಸರ ಇದ್ದರೆ ಅದನ್ನ ಕಿತ್ತು ಪರಾರಿಯಾಗೋದು ಈತನ ಚಾಳಿಯಾಗಿತ್ತು.

ಹೀಗೆ ಒಂದರ ಹಿಂದೆ ಒಂದರಂತೆ ಕೇವಲ 2 ತಿಂಗಳಲ್ಲಿ ಬರೊಬ್ಬರಿ 9 ಕಡೆ ಸರಗಳ್ಳತನ ಮಾಡಿದ್ದ ಪಾಪಿ, ತನ್ನನ್ನ ಯಾರೂ ಹಿಡಿಯೋಕೆ ಆಗ್ತಿಲ್ಲ ಎಂದು ಮತ್ತೊಂದು ಕೃತ್ಯಕ್ಕೆ ಹೊಂಚು ಹಾಕಿ ಕಾಯೋ ವೇಳೆ ಆತನ ಚಪ್ಪಲಿಯ ಗುರುತು ಆಧರಿಸಿ ಪೊಲೀಸರು ಖತರ್ನಾಕ್ ಚೋರನನ್ನ ಬಂಧಿಸಿದ್ದಾರೆ. ಬರೊಬ್ಬರಿ 12 ಲಕ್ಷದ 23 ಸಾವಿರ ಮೌಲ್ಯದ 211 ಗ್ರಾಂ ತೂಕದ 7 ಮಾಂಗಲ್ಯ ಸರಗಳನ್ನ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನ ಜೈಲಿಗಟ್ಟಿದ್ದಾರೆ.

ಮೊಬೈಲ್ ತರೋದಿಲ್ಲ, ಸಿಸಿ ಕ್ಯಾಮೆರಾ ಇಲ್ಲದ ಸ್ಥಳಗಳನ್ನೇ ಆಯ್ಕೆ ಮಾಡೋದು… ನಿರ್ಜನ ಪ್ರದೇಶದಲ್ಲಿ ಸರ ಎಗರಿಸೋದು ಹೀಗೆ ಅತ್ಯಂತ ಚಾಣಾಕ್ಷತೆಯಿಂದ ಕೃತ್ಯ ಎಸಗುತ್ತಿದ್ದ ಪಾಪಿ ಯಾರ ಕೈಗೂ ಸಿಗ್ತಿರಲಿಲ್ಲ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಹಿರಿಸಾವೆ ಪೊಲೀಸ್ ಠಾಣೆ ಹಾಗು ಮಂಡ್ಯ ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್ ಗಳನ್ನ ಮಾಡಿ ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದರು.

ಸರಗಳ್ಳತನ ನಡೆದಿರುವ ಪ್ರದೇಶಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಇದ್ದ ಸಿಸಿ ಕ್ಯಾಮೆರಾಗಳನ್ನ ಪರಿಶೀಲನೆ ನಡೆಸಿದ್ರು. ಕೃತ್ಯ ನಡೆದ ಸಮಯದ ಹಿಂದೆ ಮುಂದಿನ ಸಮಯದಲ್ಲಿ ದಾಖಲಾದ ವೀಡಿಯೋಗಳನ್ನ ಪರಿಶೀಲನೆ ನಡೆಸಿದಾಗ ಓರ್ವ ಯುವಕ ಪಲ್ಸರ್ ಬೈಕ್ ನಲ್ಲಿ ಹೋಗೋದು ಕಂಡರೂ ಆತನ ಮುಖ ಚಹರೆಯಾಗಲಿ ಬೈಕ್ ನಂಬರ್ ಆಗಲಿ ಪತ್ತೆಯಾಗಿರಲಿಲ್ಲ.

ಆದರೆ ಆತನ ಕಾಲಿನಲ್ಲಿದ್ದ ಚಪ್ಪಲಿ ಮಾತ್ರ ಆತ ಯಾರು ಎನ್ನೋದನ್ನ ಸಾರಿ ಹೇಳ್ತಿತ್ತು. ಚಪ್ಪಲಿ ಗುರುತು ಆಧರಿಸಿ ಪೊಲೀಸರು ಕಾರ್ಯಚರಣೆಗಿಳಿದಾಗ ಚನ್ನರಾಯಪಟ್ಟಣ ತಾಲ್ಲೂಕಿನ ವಡ್ಡರಹಳ್ಳಿ ಬಳಿ ಪಲ್ಸರ್ ಬೈಕ್ ನಲ್ಲಿ ಕುಳಿತಿದ್ದ ಯುವಕನನ್ನ ಪೊಲೀಸರು ಗಮನಿಸಿದ್ದರು. ಸರಗಳ್ಳತನ ಆದಾಗ ಸೆರೆಯಾಗಿದ್ದ ಸಿಸಿ ಕ್ಯಾಮೆರಾಗಳ ದೃಶ್ಯದಲ್ಲಿ ಬಂದು ಹೋಗುವ ಬೈಕ್ ಸವಾರ ಧರಿಸಿದ್ದ ಚಪ್ಪಲಿಯನ್ನೇ ಈ ಯುವಕನೂ ಧರಿಸಿದ್ದಾನೆ ಎಂದು ಅನುಮಾನಗೊಂಡು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಆಗ ಕೃತ್ಯ ಬಯಲಾಗಿದ್ದು ಜಿಲ್ಲೆಯಲ್ಲಿ ಆತಂಕ ಸೃಷ್ಟಿ ಮಾಡಿದ್ದ ಸರಗಳ್ಳತನದ ಆರೋಪಿ ಖೆಡ್ಡಾಕ್ಕೆ ಬಿದ್ದಿದ್ದಾನೆ. ಕೊರೋನಾ ಬಳಿಕ ಕೆಲಸ ಇಲ್ಲದೆ ಅಲೆಯುತ್ತಿರುವ ಹಲವರು ಬೇಗನೆ ಹಣ ಮಾಡಬೇಕು ಅನ್ನೋ ಆಸೆಗೆ, ಐಷಾರಾಮಿ ಜೀವನದ ಗೀಳಿಗೆ ಬಿದ್ದು ಇಂತಹ ಕೃತ್ಯದಲ್ಲಿ ತೊಡಗುತ್ತಿದ್ದಾರೆ. ಹಾಗಾಗಿಯೇ ಮಾಮೂಲಿಯಾಗಿ ಸರಗಳ್ಳತನ ಅಂದ್ರೆ ಒಬ್ಬನೇ ವ್ಯಕ್ತಿ ಹಲವು ಬಾರಿ ಕೃತ್ಯ ಎಸಗೋದು ಇರ್ತಿತ್ತು. ಆದರೆ ಈಗ ಯಾವುದೇ ಹಿನ್ನೆಲೆ ಇಲ್ಲದ ಕೆಲ ಕಿಡಿಗೇಡಿ ಯುವಕರೂ ಸಹ ಇಂತಹ ಕೃತ್ಯ ಮಾಡುತ್ತಿದ್ದಾರೆ.

ಹಾಗಾಗಿ ಜನರು ಕೂಡ ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿರೋ ಪೊಲೀಸರು ಜಿಲ್ಲೆಯಲ್ಲಿ ಕಳೆದ ವರ್ಷ ನಡೆದಿದ್ದ ಎಲ್ಳಾ ಸರಗಳ್ಳತನ ಪ್ರಕರಣವನ್ನ ಬೇಧಿಸಿದ್ದು, ಈ ವರ್ಷ ಕೂಡ ಎಲ್ಲಾ ಪ್ರಕರಣಗಳನ್ನ ಬೇಧಿಸೋದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಂಗಲ್ಯ ಸರ ಕಸಿಯೋದು ಅದರಲ್ಲಿನ ಮಾಂಗಲ್ಯವನ್ನು ಕೆರೆಗೋ, ಇಲ್ಲವೇ ಕಾಲುವೆಗೋ ಬಿಸಾಡಿ ಸರವನ್ನ ಕೊಂಡೊಯ್ದು ಅಡವಿಟ್ಟು ಹಣ ಪಡೆದು ಎಂಜಾಯ್ ಮಾಡೋದು ಮಾಡ್ತಿದ್ದ ಈ ಯುವಕ ಇದೀಗ ಕಂಬಿ ಹಿಂದೆ ಸರಿದಿದ್ದಾನೆ.

ಒಟ್ನಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರೋ ಸರಗಳ್ಳತನ ಜನರನ್ನ ದಿಗಿಲುಗೊಳ್ಳುವಂತೆ ಮಾಡಿದೆ. ಪೊಲೀಸರು ಕೂಡ ಮಿಂಚಿನ ಕಾರ್ಯಚಾರಣೆ ನಡಸಿ ಆರೋಪಿಗಳನ್ನ ಪತ್ತೆ ಮಾಡುತ್ತಾರಾದರೂ ಹಲವು ಪ್ರಕರಣಗಳಲ್ಲಿ ಚಿನ್ನದ ಸರ ಕೀಳೋ ಯತ್ನದಲ್ಲಿ ಮಹಿಳೆಯರು ಪ್ರಾಣಾಪಾಯಕ್ಕೆ ಸಿಲುಕುತ್ತಿರೋದು ಮಹಿಳೆಯರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇಂತಹ ಕೃತ್ಯ ಎಸಗೋ ನೀಚರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿ ಎನ್ನೋದು ಜನರ ಒತ್ತಾಯ.

ವರದಿ: ಮಂಜುನಾಥ್ ಕೆ.ಬಿ, ಟಿವಿ 9, ಹಾಸನ 

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ