Kollegal Police: ಪ್ರೀತಿಯ ಹೆಸರಿನಲ್ಲಿ ವಿಧವೆಯನ್ನ ಮಸಣ ಸೇರಿಸಿದ್ದವ ಕೊನೆಗೂ ಅರೆಸ್ಟ್ ಆದ
ತಿಂಗಳ ಹಿಂದೆ ರೇಖಾಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಅಸಹಜ ಸಾವಲ್ಲ, ಪಕ್ಕಾ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ರು. ನಾಗೇಂದ್ರನೆ ಕೊಲೆಗೈದು ಪರಾರಿಯಾಗಿದ್ದಾನೆ ಎಂದೂ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಕೊಳ್ಳೆಗಾಲ ಪೊಲೀಸರು ಈಗ ಕ್ರಿಮಿಯನ್ನ ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆಕೆ ಪತಿಯ ಸಾವಿನ ಬಳಿಕ ಇನಿಯನ ತೆಕ್ಕೆಗೆ ಬಿದ್ದಿದ್ಲು. ಮದ್ವೆ ಆಗಿ ಹೊಸ ಬಾಳ ಪಯಣ ಸಾಗಿಸೊ ಸಂತಸದಲ್ಲಿದ್ಲು. ನಾನೇ ರೋಮಿಯೊ ನೀನೆ ಜ್ಯುಲಿಯೆಟ್ ಅಂತ ಪ್ರಿಯತಮ ಕಥೆ ಕಟ್ಟಿ ಆ ವಿಧವೆಗೆ ಮಂಕು ಬೂದಿ ಎರಚಿ ಪ್ರತ್ಯೇಕ ಮನೆ ಕೂಡ ಮಾಡಿ ಕೊಟ್ಟಿದ್ದ. ಇನ್ನೇನು ಬಾಳ ಪಯಣದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸೊ ಹೆಬ್ಬಯಕೆಯಲ್ಲಿದ್ದಾಕೆಯನ್ನ ಆಕೆಯ ಇನಿಯನೆ ಕೊಲೆಗೈದು ಎಸ್ಕೇಪ್ ಆಗಿದ್ದ. ಕೊಲೆ ನಡೆದ ಒಂದು ತಿಂಗಳ ಬಳಿಕ ಈಗ ಪ್ರೀತಿ ಕೊಂದ ಕೊಲೆಗಾರ ಖಾಕಿ ಕೈಯಲ್ಲಿ ಸೆರೆಯಾದ ರೋಚಕ ಕ್ರೈಂ ಕಹಾನಿ ನಿಮ್ಮ ಮುಂದೆ.
ಕ್ರಿಮಿನಲ್ ಅದೆಷ್ಟೇ ಕ್ಲವರ್ ಆಗಿ ಕ್ರೈಂ ಮಾಡಿ ಗಾಯಬ್ ಆಗಿದ್ರು.. ತಿಂಗಳುಗಳ ಗಟ್ಲೆ ಖಾಕಿ ಕಣ್ತಪ್ಪಿಸಿ ಓಡಾಡ್ತಿದ್ದರೂ ಒಂದಲ್ಲಾ ಒಂದು ದಿನ ತಗಲಾಕಿ ಕೊಳ್ಳಲೇ ಬೇಕು ಅನ್ನೋದಕ್ಕೆ ಈ ಪ್ರಕರಣವೇ ಸೂಕ್ತ ಉದಾಹರಣೆಯಾಗಿದೆ. ಇದು ಕೊಳ್ಳೆಗಾಲದ ಒಂಟಿ ಮಹಿಳೆ ರೇಖಾಳ ಕೊಲೆ ಕಹಾನಿ.
ರೇಖಾಳನ್ನ ಕೊಂದ ಹಂತಕ ನಾಗೇಂದ್ರ ಖಾಕಿ ಖೆಡ್ಡಾಗೆ ಬಿದ್ದಿದ್ದು ಪೊಲೀಸರ ಇನ್ಟ್ರಾಗೇಷನ್ ವೇಳೆ ಸ್ಪೋಟಕ ಮಾಹಿತಿ ರಿವೀಲ್ ಆಗಿದೆ. ಹೌದು ಡಿ.19 ರ ಭಾನುವಾರ ಕೊಳ್ಳೆಗಾಲ ಟೌನ್ ಪೊಲೀಸ್ ಠಾಣೆಗೆ ಒಂದು ಕರೆ ಬಂದಿತ್ತು. ಆದರ್ಶನಗರದ ಮನೆಯೊಂದರ ಎರಡನೇ ಮಹಡಿಯಲ್ಲಿ ಒಂಟಿ ಮಹಿಳೆಯಿದ್ದಳು. ಆದರೆ ಕಳೆದೊಂದು ವಾರದಿಂದ ಬಾಗಿಲು ತೆರೆದಿಲ್ಲ ಜೊತೆಗೆ ಈಗ ಕೆಟ್ಟ ವಾಸನೆ ಬರ್ತಾಯಿದೆ ಅಂತ.
ಸ್ಟಾಟ್ ಗೆ ದೌಡಾಯಿಸಿದ ಪೊಲೀಸರು ಮನೆ ಬೀಗ ಮುರಿದು ಒಳ ಹೊಕ್ಕಿದಾಗ ರೇಖಾಳ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಅಸಹಜ ಸಾವಲ್ಲ, ಇದು ಪಕ್ಕಾ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ರು. ನಾಗೇಂದ್ರನೆ ಕೊಲೆಗೈದು ಪರಾರಿಯಾಗಿದ್ದಾನೆಂದು ದೂರು ನೀಡಿದ್ರು. ಅವರ ಊಹೆಯಂತೆ ನಾಗೇಂದ್ರ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಗಾಯಬ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡ ಖಾಕಿ ಈಗ ಕ್ರಿಮಿಯನ್ನ ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ – ಪತಿಯ ಬಿಟ್ಟು ಓಡಿಹೋಗಿದ್ದ ಮಹಿಳೆ, ಆಕೆಯ ಪ್ರಿಯಕರನ ಬರ್ಬರ ಕೊಲೆ
ಇನ್ನು ನಾಗೇಂದ್ರನನ್ನ ಹಾಗೂ ಪತಿಯನ್ನ ಕಳೆದು ಕೊಂಡಿದ್ದ ರೇಖಾಳ ನಡುವೆ ಲವ್ವಿಡವ್ವಿ ನಡಿತಾಯಿತ್ತು. ಆಕೆಯನ್ನ ಮದ್ವೆ ಆಗ್ತೀನಿ ಎಂದು ನಾಗೇಂದ್ರ ಆಕೆಯನ್ನ ಬಳಸಿಕೊಂಡಿದ್ದ. ಆದ್ರೆ ನಾಗೇಂದ್ರ ಬರುಬರುತ್ತಾ ರೇಖಾಳ ಜತೆ ಸಣ್ಣ ಪುಟ್ಟ ವಿಚಾರಕ್ಕು ಕಿರಿಕ್ ಮಾಡ್ತಾಯಿದ್ದ. ಮನೆಯಲ್ಲಿ ಬೇರೆ ಸಂಬಂಧ ನೋಡಿದ್ದಾರೆ ಅವರ ಜೊತೆ ಮದ್ವೆ ಆಗ್ತೀನಿ ಅಂತಿದ್ದ. ಈ ವಿಚಾರಕ್ಕೆ ಪದೇ ಪದೇ ನಾಗೇಂದ್ರ ರೇಖಾಳ ಜೊತೆ ಹಲ್ಲೆ ಮಾಡ್ತಾಯಿದ್ದ. ಡಿಸೆಂಬರ್ 11 ರಂದು ರೇಖಾಳನ್ನ ಕತ್ತು ಹಿಸುಕಿ ಕೊಂದು ಮುಗಿಸಿ ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡ ಖಾಕಿ ಈಗ ಮೈಸೂರಿನಲ್ಲಿ ಆರೋಪಿಯನ್ನ ಬಂಧಿಸಿ ಈಗ ಜೈಲಿಗಟ್ಟಿದ್ದಾರೆ.
ಇನ್ನು ಹಂತಕ ನಾಗೇಂದ್ರ ಪೊಲೀಸರಿಗೆ ಟೆಕ್ನಿಕಲ್ ಎವಿಡೆನ್ಸ್ ಸಿಗ್ಲೆ ಬಾರ್ದು ಅಂತ ಡಿಸೈಡ್ ಮಾಡಿದ್ದ. ಮೊಬೈಲ್ ಪೋನ್ ಪೇ ಗೂಗಲ್ ಪೇ ಸಹ ಬಳಸ್ಥ ಇರ್ಲಿಲ್ಲ. ಅಷ್ಟೇ ಯಾಕೆ ತಮಿಳುನಾಡು, ಮೈಸೂರು ಸೇರಿದಂತೆ ದಿನಕ್ಕೊಂದು ಊರಿಗೆ ಹೋಗಿ ಅಲೆದಾಡುತ್ತಿದ್ದ. ಕೊನೆಗೆ ಮೈಸೂರಿನ ಸಬರ್ ಬಸ್ ನಿಲ್ಧಾಣದಲ್ಲಿ ಸೆರೆಯಾದ ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಈಗ ನಾಗೇಂದ್ರನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಅದೇನೆ ಹೇಳಿ ಪ್ರೀತಿ ಪ್ರೇಮದ ಕಥೆ ಕಟ್ಟಿ ವಿಧವೆಯನ್ನ ಕೊಂದು ಆಕೆಯ ಮಗಳನ್ನ ಅನಾಥಳನ್ನಾಗಿ ಮಾಡಿದ್ದು ಮಾತ್ರ ದುರಂತವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 am, Wed, 31 January 24