ತನಿಖೆಗೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನ: ದರೋಡೆಕೋರನ ಕಾಲಿಗೆ ಖಾಕಿ ಫೈರಿಂಗ್
ರಾಮನಗರ: ಚನ್ನಪಟ್ಟಣ ತಾಲೂಕಿನ ಚಿಕ್ಕಮಳೂರು ಗ್ರಾಮದ ಬಳಿ ದರೋಡೆಕೋರನ ಮೇಲೆ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ದರೋಡೆಕೋರ ರಮೇಶ್ ಅಲಿಯಾಸ್ ಜಾಕಿ ಮೇಲೆ ಫೈರಿಂಗ್ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಾ.8ರಂದು ಚನ್ನಪಟ್ಟಣದ KHB ಕಾಲೋನಿಯಲ್ಲಿ ಮನೆಗೆ ನುಗ್ಗಿ ಆರೋಪಿ ದರೋಡೆ ಮಾಡಿದ್ದ. ಇದೇ ಪ್ರಕರಣ ಸಂಬಂಧ ಆರೋಪಿ ರಮೇಶ್ನನ್ನು ಬಂಧಿಸಲಾಗಿತ್ತು. ಹೆಚ್ಚಿನ ತನಿಖೆಗೆ ಆರೋಪಿಯನ್ನ ಪೊಲೀಸರು ಕರೆದೊಯ್ಯುತ್ತಿದ್ದರು. ಈ ವೇಳೆ ಮುಖ್ಯಪೇದೆ ನಾಗರಾಜ್ ಮೇಲೆ ಹಲ್ಲೆ ಮಾಡಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಶರಣಾಗುವಂತೆ ಆರೋಪಿಗೆ […]
ರಾಮನಗರ: ಚನ್ನಪಟ್ಟಣ ತಾಲೂಕಿನ ಚಿಕ್ಕಮಳೂರು ಗ್ರಾಮದ ಬಳಿ ದರೋಡೆಕೋರನ ಮೇಲೆ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ದರೋಡೆಕೋರ ರಮೇಶ್ ಅಲಿಯಾಸ್ ಜಾಕಿ ಮೇಲೆ ಫೈರಿಂಗ್ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮಾ.8ರಂದು ಚನ್ನಪಟ್ಟಣದ KHB ಕಾಲೋನಿಯಲ್ಲಿ ಮನೆಗೆ ನುಗ್ಗಿ ಆರೋಪಿ ದರೋಡೆ ಮಾಡಿದ್ದ. ಇದೇ ಪ್ರಕರಣ ಸಂಬಂಧ ಆರೋಪಿ ರಮೇಶ್ನನ್ನು ಬಂಧಿಸಲಾಗಿತ್ತು. ಹೆಚ್ಚಿನ ತನಿಖೆಗೆ ಆರೋಪಿಯನ್ನ ಪೊಲೀಸರು ಕರೆದೊಯ್ಯುತ್ತಿದ್ದರು. ಈ ವೇಳೆ ಮುಖ್ಯಪೇದೆ ನಾಗರಾಜ್ ಮೇಲೆ ಹಲ್ಲೆ ಮಾಡಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಶರಣಾಗುವಂತೆ ಆರೋಪಿಗೆ ಪೊಲೀಸರು ಸೂಚಿಸಿದ್ರೂ ಕೇಳದ ಹಿನ್ನೆಲೆಯಲ್ಲಿ ರಮೇಶ್ ಕಾಲಿಗೆ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ಫೈರಿಂಗ್ ನಡೆಸಿದ್ದಾರೆ. ಆರೋಪಿ ರಮೇಶ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮುಖ್ಯಪೇದೆ ನಾಗರಾಜ್ ಚನ್ನಪಟ್ಟಣ ಆಸ್ಪತ್ರೆಗೆ ದಾಖಲಾಗಿದ್ದಾರೆ.