ಉಡುಪಿ: ಚಿನ್ಮಯೀ ಆಸ್ಪತ್ರೆ (Chinmayee Hospital) ಮಾಲೀಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ (Udupi) ಜಿಲ್ಲೆ ಕುಂದಾಪುರ (Kundapur) ಪಟ್ಟಣದಲ್ಲಿ ನಡೆದಿದೆ. ಕುಂದಾಪುರ ಪಟ್ಟಣದಲ್ಲಿರುವ ಚಿನ್ಮಯಿ ಆಸ್ಪತ್ರೆ ಮಾಲಿಕ ಕಟ್ಟೆ ಭೋಜಣ್ಣ (80) ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಳಹಳ್ಳಿ ಗಣೇಶ್ ಶೆಟ್ಟಿ ಮನೆ ಎದುರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿನ್ಮಯಿ ಆಸ್ಪತ್ರೆ ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಸರುವಾಸಿಯಾಗಿತ್ತು. ಭೂಮಿ, ಹಣಕಾಸಿನ ವ್ಯವಹಾರ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕುಂದಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆಸ್ತಿ ವಿಚಾರಕ್ಕೆ ದಾಯಾದಿಗಳ ಮಧ್ಯೆ ಕಲಹ ಓರ್ವ ಬಲಿ
ಮೈಸೂರು: ಆಸ್ತಿ ವಿಚಾರಕ್ಕೆ ದಾಯಾದಿಗಳ ಮಧ್ಯೆ ಕಲಹ ಉಂಟಾಗಿ ಓರ್ವ ಸಾವನ್ನಪ್ಪಿರುವ ಘಟನೆ ಸೂರು ತಾಲ್ಲೂಕು ಜಯಪುರ ಹೋಬಳಿಯ ಕರಡಿ ಮರಯ್ಯನ ಹುಂಡಿಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ನಂಜುಂಡ (54)ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆಸ್ತಿ ವಿಚಾರಕ್ಕೆ ದಾಯಾದಿಗಳ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದೆ ಆಗ ದಾಯಾದಿಗಳು ನಂಜುಂಡನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಂಜುಂಡನನ್ನು ಕೂಡಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಂಜುಂಡ ಸಾವನ್ನಪ್ಪಿದ್ದಾನೆ. ದಯಾದಿಗಳಾದ ಮಾಲೇಗೌಡರ ಮಕ್ಕಳಾದ ಶಿವಣ್ಣ, ಕೃಷ್ಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಮಥುರಾ ಕೋರ್ಟ್ನಿಂದ ಇಂದು ಕೃಷ್ಣ ಜನ್ಮಭೂಮಿ ಪ್ರಕರಣದ ವಿಚಾರಣೆ
ಮದುವೆ ನಿರಾಕರಿಸಿದ್ದಕ್ಕೆ ಸೋದರಮಾವನ ಮಕ್ಕಳಿಂದ ಯುವತಿಯ ಯುವತಿಯನ್ನು ಅಪಹರಿಸಲು ಯತ್ನ
ಬೆಂಗಳೂರು: ಮದುವೆ ನಿರಾಕರಿಸಿದ್ದಕ್ಕೆ ಸೋದರಮಾವನ ಮಕ್ಕಳೇ ಯುವತಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಯುವತಿ ಇನ್ನು ವಿದ್ಯಾಭ್ಯಾಸ ಮಾಡುತ್ತಿದ್ದು, ಮಾವನ ಮಗನ ಜೊತೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾಳೆ. ಹೀಗಾಗಿ ಮಾವನ ಮಕ್ಕಳಾದ ಕೊತ್ತನೂರಿನ ಚಂದ್ರಶೇಖರ್, ಮಂಜುನಾಥ್ ಹಾಗೂ ಭೈರೇಂದ್ರ ಯುವತಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ದುರುಳರು ಯುವತಿಯ ಮನೆಗೆ ಹೋಗಿ ಅವಾಜ್ ಹಾಕಿ ಯುವತಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆಗ ಅಕ್ಕಪಕ್ಕದವರು ಯುವತಿಯ ಮನೆಯವರ ಸಹಾಯಕ್ಕೆ ಬರುತ್ತಿದ್ದಂತೆ ಯುವತಿಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಹೋಗುವಾಗ ಯಾವುದೇ ಕಾರಣಕ್ಕೂ ನಿನ್ನ ಮಗಳನ್ನ ಬಿಡುವುದಿಲ್ಲ, ಎತ್ತಿಹಾಕ್ಕೊಂಡ್ ಹೋಗಿ ಮದುವೆ ಆಗತೀನಿ ಅಂತ ಚಂದ್ರಶೇಖರ್ ಎಂಬಾತನಿಂದ ಅತ್ತೆ ಮಗಳು ಹಾಗೂ ಮಾವನಿಗೆ ಬೆದರಿಕೆ ಹಾಕಿದ್ದಾನೆ. ಯುವತಿ ಹಾಗೂ ಕುಟುಂಬಸ್ಥರು ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ.
ಊಟ ಇಲ್ಲ ಅಂದಿದ್ದಕ್ಕೆ ಹೋಟೆಲ್ಗೆ ಬೆಂಕಿಯಿಟ್ಟಿ ಕಿಡಿಗೇಡಿಗಳು
ಕೊಪ್ಪಳ: ಊಟ ಇಲ್ಲ ಅಂದಿದ್ದಕ್ಕೆ ಕಿಡಿಗೇಡಿಗಳು ಹೋಟೆಲ್ಗೆ ಬೆಂಕಿಯಿಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ಗುಡಿಸಲು ಮಾದರಿಯಲ್ಲಿದ್ದ ಹೋಟೆಲ್ನ 11 ಕೋಣೆಗಳಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಸಿಬ್ಬಂದಿ ಹೋಟೆಲ್ನಿಂದ ಹೊರಬಂದಿದ್ದಾರೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಿಡಗೇಡಿಗಳು ನಿನ್ನೆ ರಾತ್ರಿ 11 ಗಂಟೆ ಬಳಿಕ ಊಟಕ್ಕೆಂದು ಬಂದಿದ್ದರು. ಈ ವೇಳೆ ಹೋಟೆಲ್ ಸಿಬ್ಬಂದಿ ಊಟ ಇಲ್ಲ ಅಂದಿದ್ದಕ್ಕೆ ದುಷ್ಕೃತ್ಯ ಎಸಗಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: 8 Years of Modi Government ಜನರಿಂದ ಅಭಿಪ್ರಾಯ ಪಡೆಯಲು ಕೇಂದ್ರ ಸರಕಾರ ತೆರದಿರುವ ಕೆಲವು ವೆಬ್ಸೈಟ್ಗಳು ಇಲ್ಲಿವೆ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Thu, 26 May 22