8 Years of Modi Government ಜನರಿಂದ ಅಭಿಪ್ರಾಯ ಪಡೆಯಲು ಕೇಂದ್ರ ಸರಕಾರ ತೆರದಿರುವ ಕೆಲವು ವೆಬ್​ಸೈಟ್​ಗಳು ಇಲ್ಲಿವೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಧ್ಯಮ, ಪತ್ರಿಕೆ, ಸಾಮಾಜಿಕ ಜಾಲತಾಣ ಮತ್ತು  ರೇಡಿಯೋ ಮಾತ್ರವಲ್ಲದೇ ವೆಬ್​ಸೈಟ್​ಗಳ ಮೂಲಕವು ಜನರಿಂದ ಸಮಸ್ಯೆ, ಸಲಹೆಗಳನ್ನು ಪಡೆಯಲು ಕೆಲವು ವೆಬ್​ಸೈಟ್​ಗಳನ್ನು ಪ್ರಾರಂಭಿಸಿದ್ದಾರೆ.

8 Years of Modi Government ಜನರಿಂದ ಅಭಿಪ್ರಾಯ ಪಡೆಯಲು ಕೇಂದ್ರ ಸರಕಾರ ತೆರದಿರುವ ಕೆಲವು ವೆಬ್​ಸೈಟ್​ಗಳು ಇಲ್ಲಿವೆ
ನರೇಂದ್ರ ಮೋದಿ
Follow us
TV9 Web
| Updated By: ವಿವೇಕ ಬಿರಾದಾರ

Updated on:May 26, 2022 | 11:45 AM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ 8 ವರ್ಷಗಳು ಕಳೆದಿವೆ. ಇವರು 2001 ರಿಂದ 2014ರವರೆಗೆ ಗುಜರಾತ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ನಂತರ  2014ರಲ್ಲಿ ಪ್ರಧಾನ ಮೊದಲ ಭಾರಿಗೆ ಮಂತ್ರಿಯಾದರು. ನಂತರ 2019 ಮತ್ತೆ ಎರಡನೇ ಭಾರಿಗೆ ಪ್ರಧಾನ ಮಂತ್ರಿಯಾದರು. ತಮ್ಮ ಈ 8 ವರ್ಷದ ಅಧಿಕಾರವದಿಯಲ್ಲಿ ದೇಶದ ಅಭಿವೃದ್ಧಿ ಕುರಿತು ಅನೇಕ ಕಾರ್ಯಗಳನ್ನು ಮಾಡಿದ್ಧಾರೆ.  ಮಾಧ್ಯಮ, ಪತ್ರಿಕೆ, ಸಾಮಾಜಿಕ ಜಾಲತಾಣ ಮತ್ತು  ರೇಡಿಯೋ ಮೂಲಕ ನಿರಂತರ ಜನರ ಸಂಪರ್ಕದಲ್ಲಿರುವ ಪ್ರಧಾನಿಯವರು ಜನರಿಂದ ಸಮಸ್ಯೆ, ಸಲಹೆಗಳನ್ನು ಪಡೆಯುತ್ತಾರೆ. ಅದನ್ನು ಸಲಹೆಗಳನ್ನು ಕಾರ್ಯ ರೂಪಕ್ಕೆ ತರಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸುತ್ತಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಧ್ಯಮ, ಪತ್ರಿಕೆ, ಸಾಮಾಜಿಕ ಜಾಲತಾಣ ಮತ್ತು  ರೇಡಿಯೋ ಮಾತ್ರವಲ್ಲದೇ ವೆಬ್​ಸೈಟ್​ಗಳ ಮೂಲಕವು ಜನರಿಂದ ಸಮಸ್ಯೆ, ಸಲಹೆಗಳನ್ನು ಪಡೆಯಲು ಕೆಲವು ವೆಬ್​ಸೈಟ್​ಗಳನ್ನು ಪ್ರಾರಂಭಿಸಿದ್ದಾರೆ.  ಅವು ಈ ಕೆಳಗಿನಂತಿವೆ

  1. CPGRAMS (Centralized Public Grievance Redress and Monitoring System)  https://pgportal.gov.in/Home/LodgeGrievanceಈ ವೆಬ್​ಸೈಟ್ ಮೂಲಕ ಜನರು ಸಲಹೆ, ಸಮಸ್ಯೆಗಳನ್ನು ಕೇಂದ್ರ ಸರಕಾರ ಅಥವಾ ಪ್ರಾಧನ ಮಂತ್ರಿಗಳಿಗೆ ಹೇಳಬಹುದು.  ಅದಕ್ಕೆ ನೀವು ವೆಬ್​ಸೈಟ್​ನಲ್ಲಿGrievanceಗೆ ಹೋಗಿ Lodge Public Grievance ಕ್ಲಿಕ್ ಮಾಡಿದ ನಂತರ ನೀವು ಈಗಾಗಲೇ  ವೈಬ್​ಸೈಟ್​ನಲ್ಲಿ ಸೈನ್​ಇನ್ ಆಗಿದ್ದರೇ ನೇರವಾಗಿ ನಿಮ್ಮ ಅಭಿಪ್ರಾಯ ಹೇಳಿಕೊಳ್ಳಬಹುದು ಇಲ್ಲವಾದಲ್ಲಿ ಮೊದಲು ನೀವು ಸೈನ್​ಇನ್​ ಆಗಬೇಕು ನಂತರ ನೀವು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
  2. My Gov https://www.mygov.in/feedback/ ವೆಬ್​ಸೈಟ್ ನಲ್ಲೂ ಕೂಡಾ ನೀವು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹದು. ಅದು My Gov ವೆಬ್​ಸೈಟ್​ಗೆ ಹೋಗಿ ಅಲ್ಲಿ Feedback ಗೆ ಹೋದರೆ ಅಲ್ಲಿ ನಿಮ್ಮ ಹೆಸರು, ಇಮೇಲ್, ದೂರವಾಣಿ ಸಂಖ್ಯೆ ನಮೂದಿಸಿ ನೀವು ಯಾವುದರ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಿರಿ ಎಂಬುವುದನ್ನು ಆಯ್ದು 500 ಪದಗಳಲ್ಲಿ ನೀವು ನಿಮ್ಮ ಅಭಿಪ್ರಾಯವನ್ನು ಹೇಳಬಹುದು.
  3. Press Information Bureau ವೆಬ್​ಸೈಟ್ ನಲ್ಲೂ ಕೂಡಾ ನೀವು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹದು.  ಅದು Press Information Bureau ಗೆ ಹೋಗಿ Public Grievance officer ಕ್ಲಿಕ್ ಮಾಡಿದರೆ ಅಲ್ಲಿ ನೀವು ಅಭಿಪ್ರಾಯಗಳನ್ನು ಅಂಚೆ ಮೂಲಕ ಹೇಗೆ ಕಳುಹಿಸಬಹದು ಎಂದು ಕಚೇರಿಯ ವಿಳಾಸ ತಿಳಿಸಿದ್ದಾರೆ. ಈ ಮೂಲಕ ನೀವು ತಿಳಿಸಬಹದು.

  4. NATIONAL GOVERNMENT SERVICES PORTAL ವೆಬ್​ಸೈಟ್ ನಲ್ಲೂ ಕೂಡಾ ನೀವು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹದು. ನೀವು NATIONAL GOVERNMENT SERVICES PORTAL ಗೆ ಹೋಗಿ ಕೆಳಗಡೆ Feedback option ಕ್ಲಿಕ್ ಮಾಡಿದರೆ ನಿಮಗೆ Feedback ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಹೆಸರು, ಇಮೇಲ್ ಐಡಿ, ದೂರವಾಣಿ ಸಂಖ್ಯೆ ಹಾಕಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹದು.

 ಈ ಎಲ್ಲವೂ ಮುಖಾಂತರ ಕನರು ಕೇಂದ್ರ ಸರಕಾರ ಮತ್ತು ಪ್ರಾಧಾನ ಮಂತ್ರಿಗಳಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 11:43 am, Thu, 26 May 22