ಹೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ: ಅಧಿಕಾರಿಗಳಿಬ್ಬರ ವಿರುದ್ಧ ಗುತ್ತಿಗೆದಾರರ ತೀವ್ರ ಆಕ್ರೋಶ

TV9 Digital Desk

| Edited By: ಗಂಗಾಧರ​ ಬ. ಸಾಬೋಜಿ

Updated on: May 26, 2022 | 12:19 PM

ಈ ಮುಂಚೆ ಶಾಸಕರು, ಸಚಿವರ ವಿರುದ್ಧ ಆರೋಪ ಮಾಡಿದ್ದು, ಈಗ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರು ಆಕ್ರೋಶಗೊಂಡಿದ್ದಾರೆ. ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಎದುರು ಗುತ್ತಿಗೆದಾರರು ಪ್ರತಿಭಟನೆ ಮಾಡಲಾಗಿದೆ.

ಹೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ: ಅಧಿಕಾರಿಗಳಿಬ್ಬರ ವಿರುದ್ಧ ಗುತ್ತಿಗೆದಾರರ ತೀವ್ರ ಆಕ್ರೋಶ
ಹೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ

ಬೆಳಗಾವಿ: ಕರ್ನಾಟಕ ರಾಜ್ಯ ಅನುಮತಿ ವಿದ್ಯುತ್ ಗುತ್ತಿಗೆದಾರ ಸಂಘ ಹೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದೆ. ಈ ಮುಂಚೆ ಶಾಸಕರು, ಸಚಿವರ ವಿರುದ್ಧ ಆರೋಪ ಮಾಡಿದ್ದು, ಈಗ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರು ಆಕ್ರೋಶಗೊಂಡಿದ್ದಾರೆ. ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಎದುರು ಗುತ್ತಿಗೆದಾರರು ಪ್ರತಿಭಟನೆ ಮಾಡಲಾಗಿದೆ. ಬೆಳಗಾವಿ ಸಿಎಸ್‌ಡಿ – 1 ಎಇಇ ಅರವಿಂದ ಗದಗಕರ್, ಸೆಕ್ಷನ್ ಆಫೀಸರ್ ಸಿದ್ದಲಿಂಗಪ್ಪ ಅಂಗಡಿ ವಿರುದ್ಧ ಆರೋಪ ಮಾಡಿದ್ದು, ಗ್ರಾಹಕರ ಬಳಿ ನೇರವಾಗಿ ಮೀಟರ್ ಕನೆಕ್ಷನ್‌ಗೆ 40 ರಿಂದ 50 ಸಾವಿರ ಡಿಮ್ಯಾಂಡ್ ಆರೋಪ ಕೇಳಿಬಂದಿದೆ. ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ಅವಕಾಶ ನೀಡದೇ ಗ್ರಾಹಕರ ನೇರ ಸಂಪರ್ಕ ಆರೋಪಿಸಲಾಗಿದೆ. ಏನು ಕೆಲಸ ಮಾಡದೇ ಒಂದು ಸಹಿ ಮಾಡಲು ಐವತ್ತರಿಂದ ಒಂದು ಲಕ್ಷ ರೂ. ಪಡೆಯುತ್ತಾರೆ.

ಇದನ್ನೂ ಓದಿ: Family Conflict: ಮಕ್ಕಳ ಮುಂದೆ ಜಗಳವಾಡುವುದು ಕಡಿಮೆ ಮಾಡಿ ಮಾನಸಿಕ ಆರೋಗ್ಯ ಕಾಪಾಡಿ

ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಸರ್ಕಾರಕ್ಕೆ ಕೆಟ್ಟು ಹೆಸರು ಬಂದಿದೆ. ಹೆಸ್ಕಾಂ ಅಧಿಕಾರಿಗಳು 40 ಪರ್ಸೆಂಟ್ ಅಂತಾ ಅಲ್ಲ ಹಂಡ್ರೆಡ್ ಪರ್ಸೆಂಟ್ ಲೆಕ್ಕಕ್ಕೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಬಹುಮಹಡಿ ಕಟ್ಟಡಗಳಿಗೆ ತಾವೇ ಹೋಗಿ ಗ್ರಾಹಕರ ಕರೆದು ಡೀಲ್ ಮಾಡಿ ಒಂದೇ ದಿನದಲ್ಲಿ ಪರ್ಮಿಷನ್ ಕೊಡುತ್ತಾರೆ. ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ವಿದ್ಯುತ್ ಗುತ್ತಿಗೆದಾರರು ಹೇಳಿದರು. ಇಂಧನ ಸಚಿವ ಸುನಿಲ್ ಕುಮಾರ್ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಅನಿಲ್ ಬೆನಕೆ ಭರವಸೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada