ಮಾಸ್ಕ್ ತಪಾಸಣೆ ವೇಳೆ ಸಿಕ್ಕಿಬಿದ್ದರು.. ಖೋಟಾ ನೋಟು ದಂಧೆಕೋರರು!

ಬೆಂಗಳೂರು: ಮಾಸ್ಕ್​ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸುವ ಬಿಬಿಎಂಪಿ ಮಾರ್ಷಲ್​ಗಳು ಮತ್ತು ಪೊಲೀಸರನ್ನು ಕಂಡರೆ ಕೆಲವರ ಕಣ್ಣು ಕೆಂಪಾಗುತ್ತದೆ. ಅಯ್ಯೋ, ಆ ಹಾಳಾದ ಮಾಸ್ಕ್​ನ ಎಲ್ಲಿಟ್ಟೆ. ಬೇಗ ಹಾಕೋ ಬೇಕು.. ಇಲ್ಲಾಂದ್ರೆ ಇವರು ಫೈನ್​ ಜಡೀತಾರೆ ಅಂತಾ ಸಿಟ್ಟುಮಾಡಿಕೊಳ್ಳೋರೆ ಹೆಚ್ಚು. ಆದರೆ, ಮಾಸ್ಕ್ ತಪಾಸಣೆ ವೇಳೆ ಅಂತರ್ ರಾಜ್ಯ ಖೋಟಾ ನೋಟು ದಂಧೆಕೋರರು ಮೈಕೋಲೇಔಟ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಸುಮನ್(36), ದೇವರಾಜನ್ (31), ಹಾಗೂ ಮುನಿಶೇಖರ್ (29) […]

ಮಾಸ್ಕ್ ತಪಾಸಣೆ ವೇಳೆ ಸಿಕ್ಕಿಬಿದ್ದರು.. ಖೋಟಾ ನೋಟು ದಂಧೆಕೋರರು!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Nov 14, 2020 | 2:01 PM

ಬೆಂಗಳೂರು: ಮಾಸ್ಕ್​ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸುವ ಬಿಬಿಎಂಪಿ ಮಾರ್ಷಲ್​ಗಳು ಮತ್ತು ಪೊಲೀಸರನ್ನು ಕಂಡರೆ ಕೆಲವರ ಕಣ್ಣು ಕೆಂಪಾಗುತ್ತದೆ. ಅಯ್ಯೋ, ಆ ಹಾಳಾದ ಮಾಸ್ಕ್​ನ ಎಲ್ಲಿಟ್ಟೆ. ಬೇಗ ಹಾಕೋ ಬೇಕು.. ಇಲ್ಲಾಂದ್ರೆ ಇವರು ಫೈನ್​ ಜಡೀತಾರೆ ಅಂತಾ ಸಿಟ್ಟುಮಾಡಿಕೊಳ್ಳೋರೆ ಹೆಚ್ಚು. ಆದರೆ, ಮಾಸ್ಕ್ ತಪಾಸಣೆ ವೇಳೆ ಅಂತರ್ ರಾಜ್ಯ ಖೋಟಾ ನೋಟು ದಂಧೆಕೋರರು ಮೈಕೋಲೇಔಟ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಸುಮನ್(36), ದೇವರಾಜನ್ (31), ಹಾಗೂ ಮುನಿಶೇಖರ್ (29) ಬಂಧಿತ ಆರೋಪಿಗಳು. ಪ್ರೊಬೇಷನರಿ PSI ರಾಜ್ ಕುಮಾರ್ ಹಾಗೂ ಹೆಡ್ ಕಾನ್​ಸ್ಟೇಬಲ್​ ಪ್ರಮೋದ್ ಸಮಯಪ್ರಜ್ಞೆಯಿಂದ ಈ ಬೃಹತ್​ ಖೋಟಾ ನೋಟು ಜಾಲ ಪತ್ತೆಯಾಗಿದೆ.

ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಆರೋಪಿಗಳು ತಮಿಳುನಾಡು ನೊಂದಣಿಯ ಕಾರಿನಲ್ಲಿ ಖೋಟಾ ನೋಟುಗಳನ್ನು ನಗರದಲ್ಲಿ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಇದೇ ವೇಳೆ, ಆರೋಪಿಗಳು ಮಾಸ್ಕ್ ಧರಿಸದ ಕಾರಣ ಅವರ ಕಾರನ್ನ PSIರಾಜ್ ಕುಮಾರ್ ತಡೆದಿದ್ದಾರೆ.

ಪರಿಶೀಲನೆ ವೇಳೆ ಆರೋಪಿಗಳ ವರ್ತನೆ ಸಂಶಯಾಸ್ಪದವಾಗಿ ಕಂಡುಬಂದಾಗ ಪೊಲೀಸರು ವಾಹನದ ತಪಾಸಣೆಗೆ ಮುಂದಾದರು. ಈ ವೇಳೆ, ಕಾರ್​ನಲ್ಲಿ ಕಂತೆ ಕಂತೆ ಖೋಟಾ ನೋಟು ಪತ್ತೆಯಾಗಿದೆ. ಅಸಲಿ ನೋಟುಗಳನ್ನು ಖದೀಮರು ಕಲರ್ ಜೆರಾಕ್ಸ್ ಮಾಡಿ ಚಲಾಯಿಸಲು ನಗರಕ್ಕೆ ತರುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ, ಬಂಧಿತರಿಂದ 2 ಸಾವಿರ ಹಾಗೂ 500 ರೂ. ಮುಖಬೆಲೆಯ 7 ಲಕ್ಷದ 78 ಸಾವಿರ ರೂ ನೋಟು ಹಾಗೂ 1 ಕಾರನ್ನು ಜಪ್ತಿ ಮಾಡಿದ್ದಾರೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್