ವರದಕ್ಷಿಣೆ ಬೇಕೆಂದು ಪತ್ನಿ ಕೈಗೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟ ಪತಿ

ಪತ್ನಿ ವರದಕ್ಷಿಣೆ ನೀಡಲಿಲ್ಲ ಎಂದು ಪತಿಯೊಬ್ಬ ಆಕೆಯ ಕೈಗೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತವರುಮನೆಯಿಂದ ಐದು ಲಕ್ಷ ರೂ. ವರದಕ್ಷಿಣೆ ತರುತ್ತೇನೆ ಎಂದು ಹೇಳುವವರೆಗೂ ಮೇಲಕ್ಕೆತ್ತುವುದಿಲ್ಲ ಎಂದು ಚಿತ್ರಹಿಂಸೆ ನೀಡಿದ್ದಾನೆ. ಈ ಘಟನೆ ಆಗಸ್ಟ್ 20 ರಂದು ನೀಮಚ್‌ನಲ್ಲಿ ಸಂಭವಿಸಿದೆ.

ವರದಕ್ಷಿಣೆ ಬೇಕೆಂದು ಪತ್ನಿ ಕೈಗೆ ಹಗ್ಗ ಕಟ್ಟಿ ಬಾವಿಗೆ  ಇಳಿಬಿಟ್ಟ ಪತಿ
ಮಹಿಳೆ
Image Credit source: India Today

Updated on: Sep 06, 2023 | 9:53 AM

ಪತ್ನಿ ವರದಕ್ಷಿಣೆ ನೀಡಲಿಲ್ಲ ಎಂದು ಪತಿಯೊಬ್ಬ ಆಕೆಯ ಕೈಗೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ತವರುಮನೆಯಿಂದ ಐದು ಲಕ್ಷ ರೂ. ವರದಕ್ಷಿಣೆ ತರುತ್ತೇನೆ ಎಂದು ಹೇಳುವವರೆಗೂ ಮೇಲಕ್ಕೆತ್ತುವುದಿಲ್ಲ ಎಂದು ಚಿತ್ರಹಿಂಸೆ ನೀಡಿದ್ದಾನೆ. ಈ ಘಟನೆ ಆಗಸ್ಟ್ 20 ರಂದು ನೀಮಚ್‌ನಲ್ಲಿ ಸಂಭವಿಸಿದೆ.

ವಿವರಗಳ ಪ್ರಕಾರ, ರಾಕೇಶ್ ಕಿರ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ಪತ್ನಿ ಉಷಾಳ ಕೈಗಳನ್ನು ಕಟ್ಟಿ ಬಾವಿಯಲ್ಲಿ ತೂಗುಹಾಕಿದ್ದ.
ಬಳಿಕ ವಿಡಿಯೋವನ್ನು ಪತ್ನಿಯ ಸಂಬಂಧಿಕರಿಗೆ ಕಳುಹಿಸಿದ್ದು, ಬಳಿಕ ಗ್ರಾಮದ ಕೆಲವರನ್ನು ಸಂಪರ್ಕಿಸಿ ಮಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ರಾಕೇಶ್‌ನನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಆರೋಪಿ ವರದಕ್ಷಿಣೆಗಾಗಿ 3 ರಿಂದ 5 ಲಕ್ಷ ರೂ. ಸದಾ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: Viral: ಈ ಬಂಧನ ವರದಕ್ಷಿಣೆ ಕೇಳಿದ ವರನಿಗೆ ಹಗ್ಗದ ಅನುಬಂಧನ

ಉಷಾ ಅವರಿಗೆ 3 ವರ್ಷಗಳ ಹಿಂದೆ ಮಧ್ಯಪ್ರದೇಶದ ಜಾವಾದ್‌ನ ಕಿರ್ಪುರ ನಿವಾಸಿ ರಾಕೇಶ್ ಕೀರ್ ಎಂಬುವವರೊಂದಿಗೆ ವಿವಾಹವಾಗಿತ್ತು. ಅಂದಿನಿಂದ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಆಗುತ್ತಿರುವ ಈ 40 ಸೆಕೆಂಡ್​ಗಳ ವಿಡಿಯೋದಲ್ಲಿ ಮಹಿಳೆ ತನ್ನನ್ನು ರಕ್ಷಿಸುವಂತೆ ಮನವಿ ಮಾಡಿದ್ದಾಳೆ.

 

ಕ್ರೈಂ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published On - 9:53 am, Wed, 6 September 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us