Crime News: ಹುಟ್ಟುಹಬ್ಬಕ್ಕೆ ಪ್ರೇಯಸಿಗೆ ಐಫೋನ್ ನೀಡಲು ತಾಯಿಯ ಚಿನ್ನದ ಸರ ಕದ್ದ 9ನೇ ತರಗತಿ ವಿದ್ಯಾರ್ಥಿ!

|

Updated on: Aug 07, 2024 | 9:48 PM

9ನೇ ಕ್ಲಾಸ್​ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಪ್ರೇಮಿಗೆ ಐಫೋನ್ ಉಡುಗೊರೆ ನೀಡುವ ಸಲುವಾಗಿ ಮನೆಯಲ್ಲಿದ್ದ ತಾಯಿಯ ಚಿನ್ನದ ಸರವನ್ನೇ ಕದ್ದಿದ್ದಾನೆ. ಆ ಬಾಲಕನ ತಾಯಿ ಅಪರಿಚಿತ ವ್ಯಕ್ತಿ ತನ್ನ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿತು. ನಂತರ ಈ ಕುರಿತು ತನಿಖೆಯನ್ನು ಪ್ರಾರಂಭಿಸಲಾಯಿತು.

Crime News: ಹುಟ್ಟುಹಬ್ಬಕ್ಕೆ ಪ್ರೇಯಸಿಗೆ ಐಫೋನ್ ನೀಡಲು ತಾಯಿಯ ಚಿನ್ನದ ಸರ ಕದ್ದ 9ನೇ ತರಗತಿ ವಿದ್ಯಾರ್ಥಿ!
ಸಾಂದರ್ಭಿಕ ಚಿತ್ರ
Image Credit source: istock
Follow us on

ನವದೆಹಲಿ: ನೈಋತ್ಯ ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯ ಬರ್ತಡೇ ಪಾರ್ಟಿಗೆ ಉಡುಗೊರೆ ನೀಡಲು ಆಕೆಗೆ ಐಫೋನ್ ಖರೀದಿಸಲು ನಿರ್ಧರಿಸಿದ್ದ. ಹೀಗಾಗಿ, ಅದಕ್ಕೆ ಹಣ ಹೊಂದಿಸಲು ತನ್ನ ತಾಯಿಯ ಚಿನ್ನವನ್ನು ಕದ್ದಿದ್ದಾನೆ. ತಮ್ಮ ಮನೆಯಿಂದ ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿರುವ ಬಗ್ಗೆ ಆ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ತನಿಖೆಯ ವೇಳೆ ಅವರ ಮಗನೇ ಸರ ಕದ್ದಿರುವ ವಿಷಯ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಆರೋಪಿಯು ತನ್ನ ತಾಯಿಯ ಚಿನ್ನದ ಕಿವಿಯೋಲೆ, ಚಿನ್ನದ ಉಂಗುರ ಮತ್ತು ಚಿನ್ನದ ಸರವನ್ನು ಕಾಕ್ರೋಲಾ ಪ್ರದೇಶದಲ್ಲಿ ಎರಡು ವಿಭಿನ್ನ ಅಕ್ಕಸಾಲಿಗರಿಗೆ ಮಾರಾಟ ಮಾಡಿದ್ದಾನೆ. ಆ ಹಣವನ್ನು ಆತ ಹುಡುಗಿಗೆ ಐಫೋನ್ ಖರೀದಿಸಲು ಬಳಸಿದ್ದಾನೆ. ಆಕೆಯನ್ನು 9ನೇ ಕ್ಲಾಸಿನ ಆ ಹುಡುಗ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: Crime News: ಹಾಸಿಗೆ ಹಿಡಿದಿದ್ದ 80 ವರ್ಷದ ವೃದ್ಧೆ ಮೇಲೆ ಅತ್ಯಾಚಾರ; ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

ಈ ಪ್ರಕರಣದಲ್ಲಿ ಕಮಲ್ ವರ್ಮಾ ಎಂಬ 40 ವರ್ಷದ ಅಕ್ಕಸಾಲಿಗನನ್ನು ಬಂಧಿಸಿರುವ ಪೊಲೀಸರು ಆತನಿಂದ ಒಂದು ಚಿನ್ನದ ಉಂಗುರ ಮತ್ತು ಒಂದು ಕಿವಿಯೋಲೆಯನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರಿಗೆ ದೂರು ಬಂದ ನಂತರ ಅವರು ಅಪರಾಧದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆದರೆ ಘಟನೆಯ ಸಮಯದಲ್ಲಿ ದೂರುದಾರರ ಮನೆಯ ಬಳಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಿಲ್ಲ. ತಂಡವು ಯಾವುದೇ ಸುಳಿವುಗಳಿಗಾಗಿ ನೆರೆಹೊರೆಯನ್ನು ಮತ್ತಷ್ಟು ಪರಿಶೀಲಿಸಿತು. ಆದರೆ ಆ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಯಾರೂ ನೋಡಲಿಲ್ಲ ಎಂಬುದು ಗೊತ್ತಾಯಿತು.

ಇದನ್ನೂ ಓದಿ: Crime News: ಸಾಲದ ವಿಚಾರಕ್ಕೆ ಕೊಲೆ; ಸುತ್ತಿಗೆಯಿಂದ ಹೊಡೆದು ಪಕ್ಕದ ಮನೆಯಾಕೆಯನ್ನು ಕೊಂದ ಮಹಿಳೆ

ಹೀಗಾಗಿ, ಈ ಕಳ್ಳತನದಲ್ಲಿ ಹೊರಗಿನವರ ಕೈವಾಡದ ಸಾಧ್ಯತೆಯನ್ನು ತಳ್ಳಿಹಾಕಿದ ತನಿಖಾ ತಂಡವು ಕುಟುಂಬ ಸದಸ್ಯರ ಮೇಲೆ ಕೇಂದ್ರೀಕರಿಸಿತು. ಕಳ್ಳತನದ ನಂತರ ಆ ಮಹಿಳೆಯ ಮಗ ನಾಪತ್ತೆಯಾಗಿರುವುದನ್ನು ಪತ್ತೆ ಹಚ್ಚಿದರು. ನಂತರ ತಂಡವು ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿತು ಮತ್ತು ಅವನ ಶಾಲಾ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿತು. ಆಗ ಆತ 1 ಲಕ್ಷ ರೂ. ಮೌಲ್ಯದ ಹೊಸ ಐಫೋನ್ ಖರೀದಿಸಿದ್ದಾನೆ ಎಂದು ತಂಡಕ್ಕೆ ತಿಳಿದುಬಂದಿತು. ನಂತರ ಆತನನ್ನು ಬಂಧಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ