ಗೂಗಲ್​ನಲ್ಲಿದ್ದ ಆಸ್ಪತ್ರೆ ನಂಬರ್​ಗೆ ಫೋನ್ ಮಾಡಿ 5 ಲಕ್ಷ ಕಳೆದುಕೊಂಡ ವ್ಯಕ್ತಿ

ನಾವು ಯಾವುದಾದರೂ ವಿಷಯದ ಬಗ್ಗೆ ಮಾಹಿತಿಯನ್ನು ಹುಡುಕಲು ಬಯಸಿದರೆ ನಮ್ಮಲ್ಲಿ ಹಲವರು 'ಗೂಗಲ್' ಅನ್ನು ಬಳಸುತ್ತಾರೆ. ಗೂಗಲ್ ಮೂಲಕ ನಮಗೆ ಬೇಕಾದ ಎಲ್ಲವನ್ನೂ ಹುಡುಕಬಹುದಾಗಿದೆ. ಆದರೆ, ಮುಂಬೈನಲ್ಲಿರುವ ವ್ಯಕ್ತಿಯೊಬ್ಬರಿಗೆ ಗೂಗಲ್​ನಲ್ಲಿ ವೈದ್ಯರ ನಂಬರ್ ಹುಡುಕುವುದೇ ದುಬಾರಿಯಾಗಿ ಪರಿಣಮಿಸಿದ್ದು, ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ.

ಗೂಗಲ್​ನಲ್ಲಿದ್ದ ಆಸ್ಪತ್ರೆ ನಂಬರ್​ಗೆ ಫೋನ್ ಮಾಡಿ 5 ಲಕ್ಷ ಕಳೆದುಕೊಂಡ ವ್ಯಕ್ತಿ
ಗೂಗಲ್ ಸರ್ಚ್

Updated on: May 28, 2024 | 5:54 PM

ಮುಂಬೈ: ನಾವು ಯಾವುದಾದರೂ ವಿಷಯದ ಬಗ್ಗೆ ಮಾಹಿತಿಯನ್ನು ಹುಡುಕಲು ಸಾಮಾನ್ಯವಾಗಿ ‘ಗೂಗಲ್‘ ಅನ್ನು ಬಳಸುತ್ತೇವೆ. ಸರ್ಚ್ ಮಾಡಲು ಗೂಗಲ್ (Google Search) ಸಹಾಯವನ್ನು ತೆಗೆದುಕೊಳ್ಳುತ್ತೇವೆ. ಆದರೆ ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಗೂಗಲ್​ನಲ್ಲಿ ವೈದ್ಯರ ನಂಬರ್ ಸರ್ಚ್ ಮಾಡುವುದೇ ದುಬಾರಿಯಾಗಿ ಪರಿಣಮಿಸಿದ್ದು, ಸೈಬರ್ ಕಳ್ಳರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆಘಾತಕಾರಿ ಘಟನೆ (Shocking News) ನಡೆದಿದೆ.

ವ್ಯಕ್ತಿಯೊಬ್ಬರ ಸೋದರಳಿಯನಿಗೆ ಹುಷಾರಿಲ್ಲದ ಕಾರಣ ಸಂತ್ರಸ್ತೆ ಇಸ್ಮಾನ್ ಗೂಗಲ್​ನಲ್ಲಿ ವೈದ್ಯರ ನಂಬರ್ ಹುಡುಕಿದ್ದಾರೆ. ಗೂಗಲ್​ನಲ್ಲಿ ಡಾಕ್ಟರ್ ನಂಬರನ್ನು ಸರ್ಚ್ ಮಾಡಿದಾಗ ಒಳ್ಳೆ ರೇಟಿಂಗ್ ಇದ್ದ ಕಾರಣ ವೈದ್ಯರೊಬ್ಬರ ಬಳಿ ಸೋದರಳಿಯನನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದರು. ಕಾಲ್ ಮಾಡಿದಾಗ ಆ ನಂಬರ್​ನಿಂದಾಗಿ ಸೈಬರ್ ಕಳ್ಳರು ಅವರ ಮೊಬೈಲ್ ಮೇಲೆ ಹಿಡಿತ ಸಾಧಿಸಿ ಸುಮಾರು 5 ಲಕ್ಷ ರೂ. ದೋಚಿದ್ದಾರೆ. ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತ ಇಸ್ಮಾ ಪೊವೈ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ತುಮಕೂರು: ಪತಿಯಿಂದಲೇ ಪತ್ನಿಯ ಭೀಕರ ಕೊಲೆ, ದೇಹದ ಅಂಗಾಂಗ ಕತ್ತರಿಸಿ ವಿಕೃತಿ

ಅಷ್ಟಕ್ಕೂ ನಡೆದಿದ್ದೇನು?:

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ರಾಘವ್ (ಹೆಸರು ಬದಲಾಯಿಸಲಾಗಿದೆ) ಎಂಬ ವ್ಯಕ್ತಿ ಪೊವೈನಲ್ಲಿ ವಾಸಿಸುತ್ತಿದ್ದು, ತನ್ನ ಸೋದರಳಿಯನನ್ನು ವೈದ್ಯರ ಬಳಿಗೆ ಕರೆದೊಯ್ಯಲು ಬಯಸಿದ್ದರು. ಕೂಪರ್ ಹಾಸ್ಪಿಟಲ್​ಗೆ ಹೋಗಲು ರಾಘವ್ ಗೂಗಲ್ ಸರ್ಚ್ ಇಂಜಿನ್​ಗೆ ಹೋಗಿ ಈ ಆಸ್ಪತ್ರೆಯ ನಂಬರ್ ಪಡೆದರು. ಬಳಿಕ ಇಂಟರ್‌ನೆಟ್‌ನಿಂದ ಸಿಕ್ಕ ಮೊಬೈಲ್‌ ನಂಬರ್‌ಗೆ ಸಂಪರ್ಕಿಸಿದಾಗ ಕೂಪರ್‌ ಆಸ್ಪತ್ರೆಯ ಪ್ರತಿನಿಧಿ ಮಾತನಾಡುತ್ತಿರುವುದಾಗಿ ಅತ್ತ ಕಡೆಯ ವ್ಯಕ್ತಿ ಹೇಳಿದ್ದರು. ವೈದ್ಯರನ್ನು ನೋಡಲು ಮೊದಲು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ರಾಘವ್‌ಗೆ ಲಿಂಕ್ ಕಳುಹಿಸಿದ್ದರು. ಅವರು ಆ ಲಿಂಕ್ ಅನ್ನು ಡೌನ್‌ಲೋಡ್ ಮಾಡಿದ್ದರು.

ಇದನ್ನೂ ಓದಿ: ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮೈದುನನ ಬರ್ಬರ ಹತ್ಯೆ

ಕೆಲವು ದಿನಗಳ ನಂತರ ರಾಘವ್ ತನ್ನ ಖಾತೆಯಿಂದ 2 ಲಕ್ಷ ರೂಪಾಯಿ ಚೆಕ್ ಅನ್ನು ಉದ್ಯಮಿಯೊಬ್ಬರಿಗೆ ಯಾವುದೋ ಕೆಲಸದ ನಿಮಿತ್ತ ನೀಡಿದ್ದರು. ಆದರೆ, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿದ್ದು, ರಾಘವ್ ಗೊಂದಲಕ್ಕೆ ಸಿಲುಕಿದ್ದರು. ಸಂಬಂಧಪಟ್ಟ ಬ್ಯಾಂಕ್ ಗೆ ಹೋಗಿ ಈ ಬಗ್ಗೆ ವಿಚಾರಿಸಿದಾಗ ಹೊರಬಂದ ಮಾಹಿತಿ ಕೇಳಿ ಬೆಚ್ಚಿಬಿದ್ದಿದ್ದಾರೆ. ರಾಘವ್ ಅವರ ಖಾತೆಯಿಂದ ಸುಮಾರು 8ರಿಂದ 10 ವಹಿವಾಟುಗಳು ನಡೆದಿದ್ದು, 5 ಲಕ್ಷ ರೂ.ಗಳನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಮೋಸ ಹೋಗಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿರುವುದನ್ನು ಅರಿತ ರಾಘವ್ ಪೊವಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us