ಮಗಳು ಕೆಳ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಅವಮಾನ; ಮನೆಯವರನ್ನೆಲ್ಲ ಕೊಂದು ತಂದೆ ಆತ್ಮಹತ್ಯೆ

| Updated By: ಸುಷ್ಮಾ ಚಕ್ರೆ

Updated on: Feb 18, 2022 | 2:13 PM

Murder: ಟೀ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣನ್ ತನ್ನ ಹಿರಿಯ ಮಗಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಕೋಪಗೊಂಡಿದ್ದರು. ಇದರಿಂದ ಮನನೊಂದು ಅವರು ತಮ್ಮ ಹೆಂಡತಿ ಮಕ್ಕಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಮಗಳು ಕೆಳ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಅವಮಾನ; ಮನೆಯವರನ್ನೆಲ್ಲ ಕೊಂದು ತಂದೆ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ಚೆನ್ನೈ: ತನ್ನ ಮಗಳು ಪರಿಶಿಷ್ಟ ಜಾತಿಯ (SC) ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಮನನೊಂದ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಕೊಂದು ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಈ ಭೀಕರ ಘಟನೆಯ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾತಿ ತಾರತಮ್ಯ ಮತ್ತು ಅಂತರ್ಜಾತಿ ವಿವಾಹಗಳ (Inter caste Marriage) ಕಾರಣದಿಂದ ತಮಿಳುನಾಡಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ ಸಂಬಂಧಿಕರಿಂದ ಹಲ್ಲೆಗಳು ನಡೆದ ಘಟನೆಗಳು ನಡೆಯುತ್ತಲೇ ಇರುತ್ತದೆ.

ಈ ಘಟನೆಯ ಕುರಿತು ಮಾಹಿತಿ ನೀಡಿರುವ ನಾಗಪಟ್ಟಣಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜಿ ಜವಾಹರ್, ಟೀ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣನ್ ತನ್ನ ಹಿರಿಯ ಮಗಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಕೋಪಗೊಂಡಿದ್ದರು. ಇದರಿಂದ ಮನನೊಂದು ಅವರು ತಮ್ಮ ಹೆಂಡತಿ ಮಕ್ಕಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ಅವರ ಮಗಳು ಈಗ ಪತಿಯೊಂದಿಗೆ ವಾಸಿಸುತ್ತಿದ್ದು, ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.

2016ರಲ್ಲಿ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಉಡುಮಲ್‌ಪೇಟ್‌ನಲ್ಲಿ ಪರಿಶಿಷ್ಟ ಜಾತಿಯ ಯುವಕನನ್ನು ಹಾಡ ಹಗಲೇ ಆತನ ಮೇಲ್ಜಾತಿಯ ಆತನ ಹಿಂದೂ ಪತ್ನಿಯ ಕುಟುಂಬವು ಬಾಡಿಗೆಗೆ ಪಡೆದ ಗೂಂಡಾಗಳಿಂದ ಹತ್ಯೆ ಮಾಡಿತ್ತು. ಆ ಹಂತಕರು 23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ವಿ ಶಂಕರ್ ಎಂಬಾತನನ್ನು ಕೊಂದು ಆತನ ಪತ್ನಿ ಕೌಸಲ್ಯನನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಕೌಸಲ್ಯಳ ತಂದೆ ಚಿನ್ನಸ್ವಾಮಿ ಸೇರಿದಂತೆ 6 ಮಂದಿಗೆ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.

2020ರಲ್ಲಿ ಮದ್ರಾಸ್ ಹೈಕೋರ್ಟ್ ಮಹಿಳೆಯ ತಂದೆಯನ್ನು ಖುಲಾಸೆಗೊಳಿಸಿತ್ತು ಮತ್ತು ಇತರರಿಗೆ ನೀಡಲಾದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ಈ ಎರಡು ಘಟನೆಗಳಲ್ಲಿ, ಇಬ್ಬರು ಪರಿಶಿಷ್ಟ ಜಾತಿಯ ಪುರುಷರು ಮೇಲ್ಜಾತಿಯ ಮಹಿಳೆಯರನ್ನು ಮದುವೆಯಾದ ನಂತರ ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದರು.

ಇದನ್ನೂ ಓದಿ: Crime News: ಕುಡಿದ ಅಮಲಿನಲ್ಲಿ ಯುವಕನ ತಲೆ ಕತ್ತರಿಸಿದ ಗುಂಪು; ಕಸದ ರಾಶಿಯಲ್ಲಿ ರುಂಡ ಪತ್ತೆ

Crime News: ತನ್ನ ಮಾಜಿ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಯುವತಿ; ಕಾರಣವೇನು ಗೊತ್ತಾ?

Published On - 2:12 pm, Fri, 18 February 22