Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆಸಾಮಿ: ನಟೋರಿಯಸ್ ಗಾಂಜಾ ಪೆಡ್ಲರ್ ಬಂಧನ

ಆಂಧ್ರದ ವಿಶಾಖಪಟ್ಟಣಂನಿಂದ ತಮಿಳುನಾಡಿನ ಥಳಿಗೆ ಗಾಂಜಾ ಸರಬರಾಜು ಮಾಡಿ, ಬಳಿಕ ಅಲ್ಲಿಂದ ತಂದು ಮಾರಾಟ ಮಾಡುತ್ತಿದ್ದ. ಸಣ್ಣ ಸಣ್ಣ ಪ್ಯಾಕೆಟ್​​ಗಳನ್ನಾಗಿ ಮಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನಟೋರಿಯಸ್​​ ಪೆಡ್ಲರ್​ನನ್ನು ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ.

ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆಸಾಮಿ: ನಟೋರಿಯಸ್ ಗಾಂಜಾ ಪೆಡ್ಲರ್ ಬಂಧನ
ಅನ್ಸರ್ ಬಾಷಾ ಅಲಿಯಾಸ್ ಬೀಡಿ ಬಾಷಾ ಬಂಧಿತ ಆರೋಪಿ
Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2023 | 7:03 PM

ಆನೇಕಲ್, ಸೆಪ್ಟೆಂಬರ್​​ 23: ಗಾಂಜಾ ಮಾರಾಟವನ್ನೇ ಪ್ರವೃತ್ತಿಯನ್ನಾಗಿಸಿಕೊಂಡಿದ್ದ ನಟೋರಿಯಸ್​​ ಪೆಡ್ಲರ್ (ganja peddler)​ ನನ್ನು ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ. ಅತ್ತಿಬೆಲೆ ಮೂಲದ ಅನ್ಸರ್ ಬಾಷಾ ಅಲಿಯಾಸ್ ಬೀಡಿ ಬಾಷಾ ಬಂಧಿತ ಆರೋಪಿ. ಬಂಧಿತನಿಂದ ಅರ್ಧ ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆಯಲಾಗಿದೆ. ಜೈಲಿಗೆ ಹೋಗಿ ಬಂದರು ಬುದ್ಧಿ ಕಲಿತಿರಲಿಲ್ಲ.

ಆಂಧ್ರದ ವಿಶಾಖಪಟ್ಟಣಂನಿಂದ ತಮಿಳುನಾಡಿನ ಥಳಿಗೆ ಗಾಂಜಾ ಸರಬರಾಜು ಮಾಡಿ, ಬಳಿಕ ಅಲ್ಲಿಂದ ತಂದು ಮಾರಾಟ ಮಾಡುತ್ತಿದ್ದ. ಸಣ್ಣ ಸಣ್ಣ ಪ್ಯಾಕೆಟ್​​ಗಳನ್ನಾಗಿ ಮಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಪೊಲೀಸರ ಹೆಸರಿನಲ್ಲಿ ನಕಲಿ ರೈಡ್ ಮಾಡಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್

ಆನೇಕಲ್ ತಾಲ್ಲೂಕಿನಾದ್ಯಂತ ಬೀಡಿ ಬಾಷಾ ಎಂದೇ ಹೆಸರು ಮಾಡಿದ್ದ. ಈ ಹಿಂದೆ ದರೋಡೆ ಹಾಗೂ ಗಾಂಜಾ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದ. ಜೈಲಿಗೆ ಹೋಗಿ ಬಂದ್ದರು ಹಳೆಯ ಚಾಳಿಯನ್ನು ಮುಂದುವರೆಸಿದ್ದ.

ಖಚಿತ ಮಾಹಿತಿ ಮೇರೆಗೆ ಆರೋಪಿಯ ಬೆನ್ನುಬಿದ್ದಿದ್ದ ಸೂರ್ಯನಗರ ಪೋಲೀಸರು, ಬೈಕ್​ನಲ್ಲಿ ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದವನನ್ನು ಚೇಸಿಂಗ್​ ಮಾಡಿ, ಹಿಡಿಯುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.

ರಾಯಚೂರಿನಲ್ಲಿ ಒಂದೇ ಪೊಲೀಸ್‌ ಠಾಣಾ ವ್ಯಾಪ್ತಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು

ರಾಯಚೂರು: ರಸ್ತೆ ದಾಟುತ್ತಿದ್ದ ವೇಳೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಎಚ್​​ಎನ್ ತಾಂಡಾದಲ್ಲಿ ನಡೆದಿದೆ. ಡಾಕಮ್ಮ(62) ಮೃತ ಮಹಿಳೆ. ಗಣಕಲ್​ನಿಂದ ದೇವದುರ್ಗಕ್ಕೆ ಕೆಎಸ್​ಆರ್​ಟಿಸಿ ಬಸ್​ ಹೋಗುತ್ತಿತ್ತು. ಈ ವೇಳೆ ಎಚ್​ಎನ್​ ತಾಂಡಾದ ಬಸ್ ನಿಲ್ದಾಣದ ಬಳಿ ವೃದ್ಧೆಗೆ ಡಿಕ್ಕಿ ಆಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಸಿನಿಮೀಯ ಶೈಲಿಯಲ್ಲಿ ಕೊಲೆಗೆ ಯತ್ನ: ಅದೃಷ್ಟವಶಾತ್​ ಪಾರಾದ ಇಬ್ಬರು ಯುವಕರು, ಬಂಧನ

ಮತ್ತೊಂದು ಪ್ರಕರಣದಲ್ಲಿ ಕೆಎಸ್​ಆರ್​ಟಿಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಚಿಕ್ಕ ಹೊಣ್ಣಕುಣಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ದೇವದುರ್ಗ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.