Crime News: ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸೆಗಿದ ಕಾಮುಕ ಶಿಕ್ಷಕನಿಗೆ 79 ವರ್ಷಗಳ ಜೈಲು ಶಿಕ್ಷೆ..!

| Updated By: ಝಾಹಿರ್ ಯೂಸುಫ್

Updated on: Aug 04, 2022 | 6:49 PM

Crime News In Kannada: 2019 ರಲ್ಲಿ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು ಎಂಬುದೇ ಇಲ್ಲಿ ಆಘಾತಕಾರಿ ವಿಷಯ. ಅಷ್ಟೇ ಅಲ್ಲದೆ 2021 ರಲ್ಲಿ ಅತ್ಯಾಚಾರ ಪ್ರಕರಣಗಳು 12% ರಷ್ಟು ಹೆಚ್ಚಾಗಿದೆ.

Crime News: ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸೆಗಿದ ಕಾಮುಕ ಶಿಕ್ಷಕನಿಗೆ 79 ವರ್ಷಗಳ ಜೈಲು ಶಿಕ್ಷೆ..!
ಸಾಂದರ್ಭಿಕ ಚಿತ್ರ
Follow us on

Crime News In Kannada: ನಮ್ಮ ದೇಶದಲ್ಲಿ ಶಿಕ್ಷಕರನ್ನು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಎಂದು ಗೌರವಿಸುತ್ತೇವೆ. ಅಂದರೆ ಗುರುವಿನಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ಆದರೆ ಇದಕ್ಕೆಲ್ಲಾ ಅಪವಾದ ಎಂಬಂತೆ ಕಾಮುಕ ಶಿಕ್ಷಕನೊಬ್ಬನಿದ್ದ..ಆತ ಮಾಡಿದ ನೀಚ ಕೆಲಸಕ್ಕೆ ಕೊನೆಗೂ ಶಿಕ್ಷೆಯಾಗಿದೆ. ಆತನ ಹೆಸರು ಪಿ.ಇ.ಗೋವಿಂದನ್ ನಂಬೂದರಿ. ಕೇರಳದ ಕಣ್ಣೂರಿನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕನಾಗಿದ್ದ ಈತ ಎಳೆ ಪ್ರಾಯ ಹೆಣ್ಣುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗುತ್ತಿದ್ದ. 2013-2014ರ ಅವಧಿಯಲ್ಲಿ ಈತ 4ನೇ ಮತ್ತು 5ನೇ ತರಗತಿಯಲ್ಲಿನ ಕೆಲ ವಿದ್ಯಾರ್ಥಿನಿಯರೊಂದಿಗೆ ತನ್ನ ಕಾಮಚೇಷ್ಠೆ ತೀರಿಸಿಕೊಂಡಿದ್ದ. ಆದರೆ ಶಿಕ್ಷಕನನ್ನು ಹೆದರಿ ಯಾವುದೇ ವಿದ್ಯಾರ್ಥಿನಿಯರು ಈತನ ವಿರುದ್ದ ದೂರು ನೀಡಿರಲಿಲ್ಲ. ಅಲ್ಲದೆ ಪೋಷಕರಿಗೂ ತಿಳಿಸುತ್ತಿರಲಿಲ್ಲ.

ಆದರೆ ವಿದ್ಯಾರ್ಥಿನಿಯೊಬ್ಬಳ ಪೋಷಕರು ಮಗಳ ನಡವಳಿಕೆಯಲ್ಲಿ ಕಂಡು ಬಂದ ಬದಲಾವಣೆಯಿಂದ ಸಂದೇಹಗೊಂಡು ವಿಚಾರಿಸಿದ್ದಾರೆ. ಅಲ್ಲದೆ ಪುಟ್ಟ ಕಂದಮ್ಮನಿಗೆ ಧೈರ್ಯ ತುಂಬಿ ನಡೆದಿರುವ ಘಟನೆಯನ್ನು ಬಾಯಿ ಬಿಡಿಸಿದ್ದಾರೆ. ಆಗಲೇ ಗೊತ್ತಾಗಿದ್ದು ಸುಶಿಕ್ಷಿತ ಶಿಕ್ಷಕನಾಗಿ ಮೆರೆಯುತ್ತಿದ್ದ ಕಾಮುಕ ಟೀಚರ್​ನ ಅಸಲಿಯತ್ತು.

ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಪೋಷಕರು ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಇನ್ನಿತರ 4 ವಿದ್ಯಾರ್ಥಿನಿಯರ ಮೇಲೂ ಈತ ಲೈಂಗಿಕ ದೌರ್ಜನ್ಯ ಎಸೆಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕಾರಣದಿಂದಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ವಿರುದ್ದ ಕೂಡ ದೂರು ದಾಖಲಾಯಿತು. ಇದರಿಂದ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿ ಗೋವಿಂದನ್ ನಂಬೂದಿರಿಯನ್ನು ಕೆಲಸದಿಂದ ವಜಾಗೊಳಿಸಿದ್ದರು.

ಇದನ್ನೂ ಓದಿ
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಇದಾಗ್ಯೂ ಕಾಮುಕ ಶಿಕ್ಷಕನ ವಿರುದ್ದ ಪೋಷಕರು ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಿದ್ದರು. ಈ ಹೋರಾಟದ ಫಲವಾಗಿ ಇದೀಗ ಕಾಮುಕ ಶಿಕ್ಷಕನಿಗೆ ಶಿಕ್ಷೆಯಾಗಿದೆ. ಅದರಂತೆ ಗೋವಿಂದನ್ ನಂಬೂದರಿಗೆ 2.70 ಲಕ್ಷ ರೂಪಾಯಿ ದಂಡ ಹಾಗೂ 79 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ಒಟ್ಟಿನಲ್ಲಿ ಪೋಷಕರೊಬ್ಬರ ಸಮಯ ಪ್ರಜ್ಞೆಯಿಂದಾಗಿ ಇಂದು ಕಾಮುಕ ಶಿಕ್ಷಕನೊಬ್ಬನಿಗೆ ಜೈಲು ಶಿಕ್ಷೆಯಾಗಿದೆ. ಇಂತಹ ಕಾಮುಕರು ಹಲವು ಕಡೆಯಿದ್ದು, ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜಾಗೃತೆವಹಿಸಿ. ಅದರಲ್ಲೂ ಪುಟ್ಟ ಮಕ್ಕಳ ವರ್ತನೆಯಲ್ಲಿ ಏನಾದರೂ ವ್ಯತ್ಯಾಸಗಳು ಕಂಡು ಬರುತ್ತಿದ್ದರೆ ಅವರಿಗೆ ದೈರ್ಯ ತುಂಬಿ ವಿಚಾರಿಸಿ.

ಏಕೆಂದರೆ 2012 ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಕಾನೂನನ್ನು ರೂಪಿಸಲಾಗಿದೆ. ಆದರೆ ಇಲ್ಲಿ ಆಘಾತಕಾರಿ ವಿಷಯವೆಂದರೆ ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಸರ್ಕಾರವೇ ತಿಳಿಸಿದೆ. 2019ರಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಕುರಿತು ಬಿಡುಗಡೆ ಮಾಡಲಾದ ವರದಿಯಂತೆ, ಒಂದು ವರ್ಷದಲ್ಲಿ 4,05,861 ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ನಡೆದಿದೆ.

ಅಲ್ಲದೆ 2019 ರಲ್ಲಿ ಮಹಿಳೆಯರ ಮೇಲೆ 32,033 ಅತ್ಯಾಚಾರ ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊ (ಎನ್​ಸಿಆರ್​ಬಿ) ತಿಳಿಸಿದೆ. ಅಂದರೆ 2019 ರಲ್ಲಿ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು ಎಂಬುದೇ ಇಲ್ಲಿ ಆಘಾತಕಾರಿ ವಿಷಯ. ಅಷ್ಟೇ ಅಲ್ಲದೆ 2021 ರಲ್ಲಿ ಅತ್ಯಾಚಾರ ಪ್ರಕರಣಗಳು 12% ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಅಂಕಿ ಅಂಶಗಳು ದೂರು ದಾಖಲಾದ ಪ್ರಕರಣಗಳು ಆಧರಿಸಿವೆ ಎಂಬುದು. ಅಂದರೆ ಇನ್ನೆಷ್ಟೋ ಪ್ರಕರಣಗಳು ಬೆಳಕಿಗೆ ಬರದೇ ಮರೆಯಾಗುತ್ತಿದೆ. ಅತ್ಯಾಚಾರಿಗಳು ಕಾನೂನಿನ ಭಯವಿಲ್ಲದೆ ಹೇಯ ಕೃತ್ಯಗಳಲ್ಲಿ ಮುಂದುವರೆಯುತ್ತಿದ್ದಾರೆ.