ಚಿಕ್ಕಬಳ್ಳಾಪುರ, ಜನವರಿ 30: ಬಿ.ಎಡ್ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುವ ಪ್ರಾಧ್ಯಾಪಕರೊಬ್ಬರಿಗೆ (Professor) ಆನ್‍ಲೈನ್‍ನಲ್ಲಿ ಕ್ರೆಡಿಟ್ ಕಾರ್ಡ್ (Credit Card) ಮಾಡಿಸಿಕೊಡುವುದಾಗಿ ನಂಬಿಸಿ 40,776 ರೂಪಾಯಿಗಳನ್ನು ಪಡೆದು ವಂಚಿಸಿದ ಪ್ರಕರಣ ನಡೆದಿದೆ. ಚಿಕ್ಕಬಳ್ಳಾಪುರ (Chikkaballapur) ನಗರದ ಚಿತ್ರಾವತಿ ಬಳಿ ಇರುವ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಎಂ.ಶಂಕರ್ ಸೈಬರ್ ವಂಚಕರನ್ನು ನಂಬಿ ಮೋಸ ಹೋಗಿದ್ದಾರೆ. ಪೇಸ್‍ಬುಕ್ ಖಾತೆಯಲ್ಲಿದ್ದ ಲಿಂಕ್‍ನ್ನು ತೆರೆದು ಕ್ರೆಡಿಟ್ ಕಾರ್ಡ್‍ಗೆ ಅಪ್ಲೈ ಮಾಡಿದ್ದಾರೆ.
ಟ್ಯಾಕ್ಸ್ ಮತ್ತು ಬ್ಯಾಂಕಿನ ಇತರೆ ಫೀಗಳೆಂದು 40,776 ರೂಪಾಯಿಗಳನ್ನು ಆನ್‍ಲೈನ್‍ನಲ್ಲಿ ಪಡೆದು ನಂತರ ಕ್ರೆಡಿಟ್ ಕಾರ್ಡ್ ನೀಡದೆ, ಹಣವನ್ನು ವಾಪಸ್ಸು ನೀಡದೆ, ಪ್ರಾಧ್ಯಾಪಕರಿಗೆ ಸೈಬರ್ ವಂಚಕರು ಪಂಗನಾಮ ಹಾಕಿದ್ದಾರೆ. ಇದರಿಂದ ಪ್ರಾಧ್ಯಾಪಕರಿಂದ ಶಂಕರ್ ಎಂ, ಚಿಕ್ಕಬಳ್ಳಾಪುರದ ಸಿಇಎನ್ ಪೊಲಸ್ ಠಾಣೆಯಲ್ಲಿ ಐಪಿಸಿ ಕಲಂ 419, 420 ಸೇರಿದಂತೆ ಐ.ಟಿ.ಆಕ್ಟ್ 66ಡಿ ರಡಿ ದೂರು ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ