Delhi Crime: ಗರ್ಭಿಣಿ ಮೇಲೆ ಗುಂಡು ಹಾರಿಸಿ ಗರ್ಭಪಾತವಾಗಿದ್ದ ಪ್ರಕರಣ, ಚಿಕಿತ್ಸೆ ಫಲಿಸದೆ ಮಹಿಳೆ ಸಾವು
ಕರ್ಕಶ ಸಂಗೀತವನ್ನು ನಿಲ್ಲಿಸಿ ಎಂದು ಹೇಳಿದ್ದಕ್ಕೆ ಗರ್ಭಿಣಿ(Pregnant) ಎಂದೂ ನೋಡದೆ ಗುಂಡು ಹಾರಿಸಿ ಗರ್ಭಪಾತವಾಗಿದ್ದ ಪ್ರಕರಣದಲ್ಲಿ ಇದೀಗ ಮಹಿಳೆಯೂ ಕೊನೆಯುಸಿರೆಳೆದಿದ್ದಾರೆ.
ಕರ್ಕಶ ಸಂಗೀತವನ್ನು ನಿಲ್ಲಿಸಿ ಎಂದು ಹೇಳಿದ್ದಕ್ಕೆ ಗರ್ಭಿಣಿ(Pregnant) ಎಂದೂ ನೋಡದೆ ಗುಂಡು ಹಾರಿಸಿ ಗರ್ಭಪಾತವಾಗಿದ್ದ ಪ್ರಕರಣದಲ್ಲಿ ಇದೀಗ ಮಹಿಳೆಯೂ ಕೊನೆಯುಸಿರೆಳೆದಿದ್ದಾರೆ. ದೆಹಲಿಯ ಸಿರಸ್ಪುರದಲ್ಲಿ ಘಟನೆ ನಡೆದಿತ್ತು, ಪಕ್ಕದ ಮನೆಯಲ್ಲಿ ಕರ್ಕಶ ಮ್ಯೂಸಿಕ್ ಹಾಕಲಾಗಿತ್ತು, ಅದನ್ನು ವಿರೋಧಿಸಿದ್ದಕ್ಕೆ ಮಹಿಳೆ ಮೇಲೆ ಗುಂಡು ಹಾರಿಸಿದ್ದರು. ಏಪ್ರಿಲ್ 3 ರಂದು ಘಟನೆ ನಡೆದಿತ್ತು.
ಮಹಿಳೆಯ ಸ್ಥಿತಿ ಚಿಂತಾಜನಕವಾಗಿತ್ತು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇದೀಗ ಪೊಲೀಸರು ಆರೋಪ್ ಹರೀಶ್ ವಿರುದ್ಧ ಸೆಕ್ಷನ್ 302(ಕೊನೆ) ಪ್ರಕರಣವನ್ನೂ ದಾಖಲಿಸಿದ್ದಾರೆ. ಏಪ್ರಿಲ್ 3 ರಂದು ಘಟನೆಗೆ ಸಂಬಂಧಿಸಿದಂತೆ ಪಿಸಿಆರ್ಗೆ ಕರೆ ಬಂದಿತ್ತು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ರಂಜು ಅವರನ್ನು ಶಾಲಿಮಾರ್ ಬಾಗ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಕುತ್ತಿಗೆಗೆ ಗುಂಡೇಟು ತಗುಲಿತ್ತು. ಬಳಿಕ ಗರ್ಭಪಾತವೂ ಆಗಿತ್ತು.
ಮತ್ತಷ್ಟು ಓದಿ: Delhi: ಕರ್ಕಶ ಸಂಗೀತ ನಿಲ್ಲಿಸಲು ಕೇಳಿದ್ದಕ್ಕೆ ಗರ್ಭಿಣಿಯ ಮೇಲೆ ನಡೆಯಿತು ಗುಂಡಿನ ದಾಳಿ, ಸ್ಥಳದಲ್ಲೇ ಗರ್ಭಪಾತ
ಹರೀಶ್ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಎಂಬಾತನಿಂದ ಗನ್ ತೆಗೆದುಕೊಂಡು ಆಕೆಯ ಮೇಲೆ ಗುಂಡು ಹಾರಿದ್ದನು. ಮಹಿಳೆಯ ಪತಿ ಕೂಲಿ ಕೆಲಸ ಮಾಡುತ್ತಿದ್ದು, ಬಿಹಾರ ಮೂಲದ ಕುಟುಂಬ ಅಲ್ಲಿ ನೆಲೆಸಿದ್ದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ