ಯುಎಇ ರಾಜಮನೆತನದೊಂದಿಗೆ ನಂಟು ಇದೆ ಎಂದು 5 ಸ್ಟಾರ್ ಹೋಟೆಲ್​​ನಲ್ಲಿ ವಾಸ್ತವ್ಯ; ₹23 ಲಕ್ಷ ಬಿಲ್ ಪಾವತಿಸದೆ ವ್ಯಕ್ತಿ ಪರಾರಿ

ಶನಿವಾರದಂದು ಲೀಲಾ ಪ್ಯಾಲೇಸ್ ಹೋಟೆಲ್ ಆಡಳಿತವು ನೀಡಿದ ದೂರಿನ ಮೇರೆಗೆ ವಂಚನೆ ಮತ್ತು ಕಳ್ಳತನದ ಆರೋಪ ಹೊತ್ತಿರುವ ಮೊಹಮ್ಮದ್ ಷರೀಫ್  ಎಂಬಾತನನ್ನು ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ.

ಯುಎಇ ರಾಜಮನೆತನದೊಂದಿಗೆ ನಂಟು ಇದೆ ಎಂದು 5 ಸ್ಟಾರ್ ಹೋಟೆಲ್​​ನಲ್ಲಿ ವಾಸ್ತವ್ಯ; ₹23 ಲಕ್ಷ ಬಿಲ್ ಪಾವತಿಸದೆ ವ್ಯಕ್ತಿ ಪರಾರಿ
ಲೀಲಾ ಪ್ಯಾಲೇಸ್ ಹೋಟೆಲ್Image Credit source: leela palace delhi
Follow us
| Updated By: ರಶ್ಮಿ ಕಲ್ಲಕಟ್ಟ

Updated on: Jan 17, 2023 | 1:58 PM

ದೆಹಲಿ: ನಾಲ್ಕು ತಿಂಗಳ ಕಾಲ ದೆಹಲಿಯ (Delhi) ಐಷಾರಾಮಿ ಹೋಟೆಲ್‌ನಲ್ಲಿ ತಂಗಲು ಅಬುಧಾಬಿ ರಾಜಮನೆತನದ ಉದ್ಯೋಗಿಯಂತೆ ನಟಿಸಿದ ವ್ಯಕ್ತಿಯೊಬ್ಬರು ₹ 23 ಲಕ್ಷ ಬಿಲ್ ಪಾವತಿ ಮಾಡದೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಶನಿವಾರದಂದು ಲೀಲಾ ಪ್ಯಾಲೇಸ್(Leela Palace) ಹೋಟೆಲ್ ಆಡಳಿತವು ನೀಡಿದ ದೂರಿನ ಮೇರೆಗೆ ವಂಚನೆ ಮತ್ತು ಕಳ್ಳತನದ ಆರೋಪ ಹೊತ್ತಿರುವ ಮೊಹಮ್ಮದ್ ಷರೀಫ್  ಎಂಬಾತನನ್ನು ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ. ಷರೀಫ್ ಆಗಸ್ಟ್ 1 ರಂದು ಲೀಲಾ ಪ್ಯಾಲೇಸ್‌ನ 427 ನೇ ಕೊಠಡಿಗೆ ಚೆಕ್ ಇನ್ ಆಗಿದ್ದು ನವೆಂಬರ್ 20 ರಂದು ಯಾರಿಗೂ ಹೇಳದೆ ಅಲ್ಲಿಂದ ಓಡಿ ಹೋಗಿದ್ದ. ಈತ ಕೊಠಡಿಯಿಂದ ಬೆಳ್ಳಿ ಪಾತ್ರೆಗಳು ಮತ್ತು ಮುತ್ತಿನ ತಟ್ಟೆ ಸೇರಿದಂತೆ ಹಲವಾರು ವಸ್ತುಗಳನ್ನು ಕದ್ದಿದ್ದಾನೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

ಆಗಸ್ಟ್‌ನಲ್ಲಿ ಹೋಟೆಲ್‌ಗೆ ಆಗಮಿಸಿದಾಗ ಷರೀಫ್  ತಾನು ಯುಎಇ ನಿವಾಸಿ ಮತ್ತು ಅಬುಧಾಬಿ ರಾಜಮನೆತನದ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಸಿಬ್ಬಂದಿಗೆ ತಿಳಿಸಿದ್ದ .ತಾನು ಶೇಖ್ ಅವರೊಂದಿಗೆ ವೈಯಕ್ತಿಕವಾಗಿ ಕೆಲಸ ಮಾಡಿದ್ದೇನೆ.ಅವರು ಅಧಿಕೃತ ವ್ಯವಹಾರಕ್ಕಾಗಿ ಭಾರತದಲ್ಲಿದ್ದರು ಎಂದು ಷರೀಫ್ ಹೇಳಿದ್ದಾನೆ. ತಾನು ಹೇಳಿದ್ದು ನಿಜ ಎಂದು ದೃಢೀಕರಿಸಲು ಬ್ಯುಸಿನೆಸ್ ಕಾರ್ಡ್, ಯುಎಇ ನಿವಾಸಿ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಸಹ ಆತ ತಯಾರಿಸಿದ್ದ. ಈತ ಯುಎಇಯಲ್ಲಿನ ತನ್ನ ಜೀವನದ ಬಗ್ಗೆ ಹೋಟೆಲ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಲೇ ಇರುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: Viral News: ದುಬಾರಿ ಗಿಫ್ಟ್​ ಕೊಡಲಿಲ್ಲವೆಂದು ಹೆಂಡತಿ ಮಾನಸಿಕ ಹಿಂಸೆ ನೀಡುತ್ತಾಳೆ; ಪೊಲೀಸರಿಗೆ ಗಂಡನಿಂದ ದೂರು

ಈ ದಾಖಲೆಗಳು ನಕಲಿ ಎಂದು ಶಂಕಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಷರೀಫ್ ನಾಲ್ಕು ತಿಂಗಳ ವಾಸ್ತವ್ಯದ ಕೊಠಡಿ ಮತ್ತು ಸೇವೆಗಳ ಬಿಲ್ ₹ 35 ಲಕ್ಷ ಆಗಿದೆ. ₹ 11.5 ಲಕ್ಷ ಪಾವತಿಸಿ ಉಳಿದ ಹಣವನ್ನು ನೀಡದೆ ಆತ ಹೋಟೆಲ್ ಬಿಟ್ಟಿದ್ದಾನೆ. ನ.20ರಂದು ಹೋಟೆಲ್ ನಿಂದ ಪರಾರಿಯಾಗಿದ್ದ ದಿನ ₹ 20 ಲಕ್ಷದ ಚೆಕ್ ಅನ್ನು ಸಿಬ್ಬಂದಿಗೆ ನೀಡಿದ್ದ. ವ್ಯಕ್ತಿಯನ್ನು ಗುರುತಿಸಲು ದೆಹಲಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

ಮತ್ತಷ್ಟು  ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ