ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣ: ಪ್ರಮುಖ ಆರೋಪಿ ಸೈಯದ್ ಅಬ್ಬಾಸ್ ಬಂಧಿಸಿದ ಎನ್​ಐಎ

ಈಗಾಗಲೇ ಪ್ರಕರಣ ಸಂಬಂಧ 138 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ. ಎನ್​ಐಎ ಸ್ಪೆಷಲ್ ಕೋರ್ಟ್ ಮುಂದೆ ಆರೋಪಿಯನ್ನು ಹಾಜರು ಪಡಿಸಿದ ಎನ್​ಐಎ, 6 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ.

ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣ: ಪ್ರಮುಖ ಆರೋಪಿ ಸೈಯದ್ ಅಬ್ಬಾಸ್ ಬಂಧಿಸಿದ ಎನ್​ಐಎ
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ (ಸಂಗ್ರಹ ಚಿತ್ರ)

ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ಗಲಭೆ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್​ಐಎ ಬಂಧಿಸಿದೆ. ಗಲಭೆ ಬಳಿಕ ನಾಪತ್ತೆಯಾಗಿದ್ದ ಗೋವಿಂದಪುರದ ನಿವಾಸಿ ಸೈಯದ್ ಅಬ್ಬಾಸ್ ಬಂಧನವಾಗಿದೆ. 2020 ರ ಆಗಸ್ಟ್ 11 ರಂದು ಗಲಭೆ ಕೇಸ್ ನಡೆದಿತ್ತು. ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯನ್ನು ಸೈಯದ್ ಅಬ್ಬಾಸ್ ಧ್ವಂಸ ಮಾಡಿದ್ದ.

ಈ ಪ್ರಕರಣ ಸಂಬಂಧ 2020 ರ ಆಗಸ್ಟ್ 12 ರಂದು ಎಫ್​ಐಆರ್ ದಾಖಲಾಗಿತ್ತು. ಎಫ್​ಐಆರ್ ದಾಖಲಾದ ಬಳಿಕ ಪ್ರಕರಣವನ್ನು ಎನ್​ಐಎಗೆ ವರ್ಗಾವಣೆ ಮಾಡಲಾಗಿತ್ತು. ಸೈಯದ್ ಅಬ್ಬಾಸ್ ಗಲಭೆ ವೇಳೆ ಹಲವು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆ ಬಳಿಕ ಠಾಣೆಗೆ ಬೆಂಕಿ ಇಟ್ಟಿದ್ದು ಸಹ‌ ಇದೇ ಸೈಯದ್ ಅಬ್ಬಾಸ್ ಎಂದು ತಿಳಿದುಬಂದಿತ್ತು.

ಈಗಾಗಲೇ ಪ್ರಕರಣ ಸಂಬಂಧ 138 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ. ಎನ್​ಐಎ ಸ್ಪೆಷಲ್ ಕೋರ್ಟ್ ಮುಂದೆ ಆರೋಪಿಯನ್ನು ಹಾಜರು ಪಡಿಸಿದ ಎನ್​ಐಎ, 6 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ. ಸೈಯದ್ ಅಬ್ಬಾಸ್ ನಾಗವಾರ ಎಸ್​ಡಿಪಿಐ ಅಧ್ಯಕ್ಷನೂ ಆಗಿದ್ದ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆ
‘ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ 500ಕ್ಕೂ ಹೆಚ್ಚು ಜನರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್‌ ಬೈರಸಂದ್ರದಲ್ಲಿ 2020ರ ಆಗಸ್ಟ್​ 10ರಂದು ವಾಹನಗಳಿಗೆ ಬೆಂಕಿಹಚ್ಚಿ, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆಯೂ ಕೆಲವರು ದಾಳಿ ಮಾಡಿದ್ದರು.

ಪೊಲೀಸರ ಗುಂಡೇಟಿಗೆ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದರು. ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎನ್ನಲಾದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆಗೆ ಸಂಬಂಧಿಸಿದಂತೆ 111 ಜನರನ್ನು ಪೊಲೀಸರು ಬಂಧಿಸಿದ್ದರು. ಹಿಂಸಾಚಾರದಲ್ಲಿ 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ: ಈವರೆಗೆ ಸಂಪತ್ ರಾಜ್ ಬಂಧಿಸದಿರುವುದಕ್ಕೆ.. ಹೈಕೋರ್ಟಿ​ಗೆ ಅಚ್ಚರಿ!

ಡಿಜೆ ಹಳ್ಳಿ ಗಲಭೆ: ಸರ್ಕಾರದ ಕೈ ಸೇರಿದ ಘಟನೆಯ ಸತ್ಯಶೋಧನಾ ವರದಿ

Click on your DTH Provider to Add TV9 Kannada