27 ವರ್ಷದ ಯುವ ವೈದ್ಯ, 36ರ ಮಹಿಳೆ ನಡುವೆ ಕುಚ್ಕುಚ್: ಪೊಲೀಸರಿಗೆ ತಲೆನೋವಾದ ಪ್ರಕರಣ
ಡ್ರಾಪ್ ಕೇಳಿದ 36 ವರ್ಷದ ಮಹಿಳೆಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆರೋಪ 27 ವರ್ಷದ ಯುವ ವೈದನ ಮೇಲೆ ಕೇಳಿಬಂದಿದೆ. ಇನ್ನು ಇದಕ್ಕೆ ಪ್ರತಿಯಾಗಿ ಯುವ ವೈದ್ಯ ಸಹ ಮಹಿಳೆ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅವಳೇ ಹಿಂಬದಿಯಿಂದ ನನ್ನ ಮರ್ಮಾಂಗಕ್ಕೆ ಕೈ ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪ್ರತಿದೂರು ನೀಡಲು ಸಹ ಮುಂದಾಗಿದ್ದು, ಈ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಣಮಿಸಿದೆ. ಹಾಗಾದ್ರೆ, ಏನಿದು ಘಟನೆ? ಮಹಿಳೆ ನೀಡಿದ ದೂರಿನಲ್ಲೇನಿದೆ? ಇದಕ್ಕೆ ಯುವ ಡಾಕ್ಟರ್ ಹೇಳಿದ್ದೇನು ಎನ್ನುವುದು ಇಲ್ಲಿದೆ.
ರಾಮನಗರ, (ಜನವರಿ 15): 27 ವರ್ಷದ ಯುವ ವೈದ್ಯನ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಡ್ರಾಪ್ ಪ್ಲೀಸ್ ಎಂದ ಮಹಿಳೆಯನ್ನು ಯುವ ವೈದ್ಯನೋರ್ವ ಬೈಕ್ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ವಿಕೃತವಾಗಿ ನಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಸ್ವಲ್ಪ ಡ್ರೆಸ್ ಬಿಚ್ಚಿ ಅದು ಮಾಡಿ ಡ್ರಾಪ್ ಕೊಡುತ್ತೇನೆ ಎಂದು ಮೈ ಮುಟ್ಟಲು ಮುಂದಾಗಿದ್ದಾನೆಂದು ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಆರೋಪಿದ್ದಾರೆ. ಇನ್ನು ರಾಮನಗರ ಜಿಲ್ಲೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಇದೀಗ ಈ ಸಂಬಂಧ ಮಹಿಳೆ, ವೈದ್ಯನ ವಿರುದ್ಧ ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ಯುವ ವೈದ್ಯ ಸಹ ಮಹಿಳೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮಹಿಳೆ ನೀಡಿದ ದೂರಿನಲ್ಲೇನಿದೆ?
ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಸಂಬಂಧಿಕರ ಮನೆಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದರು. ರಾತ್ರಿ 9 ಗಂಟೆಯಾದ್ರೂ ಬಸ್ ಸಿಗದ ಕಾರಣ ಬೈಕ್ ಸವಾರನನ್ನು ತಡೆದು ಡ್ರಾಪ್ ಕೇಳಿದ್ದಾಳೆ. ಈ ವೇಳೆ 36 ವರ್ಷದ ಮಹಿಳೆಯನ್ನು ತನ್ನ ಬೈಕಿನಲ್ಲಿ ಡ್ರಾಪ್ ನೀಡುವ ವೇಳೆ ಎಲ್ಲಿಗೆ ಹೋಗಬೇಕು ಎಂದು 27 ಯುವ ವೈದ್ಯ ಕೇಳಿದ್ದಾನೆ. ಆಗ ಆ ಮಹಿಳೆ ನನಗೆ ಕುಂಬಳಗೋಡು ಬಿಡಿ ಎಂದು ಹೇಳಿದ್ದಾಳೆ. ಈ ವೇಳೆ ಕೆಂಗೇರಿ ಕಡೆ ಹೋಗ್ತಾ ಇದೀರಾ, ಹಾಗಾದ್ರೆ ಕೆಂಗೇರಿಯೇ ಬಿಟ್ಟುಬಿಡಿ ಎಂದು ಮಹಿಳೆ ಹೇಳಿದ್ದಾಳಂತೆ. ಈ ವೇಳೆ ಕೆಂಗೇರಿ ಕಡೆ ಹೋಗದೇ ಅಡ್ಡ ದಾರಿಯಲ್ಲಿ ಹೋಗಿ, ಕತ್ತಲೆ ಇದ್ದ ಜಾಗದ ಖಾಲಿ ಲೇಔಟ್ ನಲ್ಲಿ ಬೈಕ್ ನಿಲ್ಲಿಸಿದ್ದಾನೆ. ಬಳಿಕ ನಿಮ್ಮ ಡ್ರೆಸ್ ತೆಗೀರಿ, ನಾನು ಅದು ಮಾಡಬೇಕು. ಆಮೇಲೆ ನಾನೇ ಡ್ರಾಪ್ ಮಾಡುತ್ತೇನೆ ಎಂದಿದ್ದಾನಂತೆ. ಬಳಿಕ ತನ್ನ ಪ್ಯಾಂಟ್ ಬಿಚ್ಚಿ, ಮೈ ಮುಟ್ಟಲು ಮುಂದಾಗಿದ್ದಾನೆ. ಆಗ ಜೋರಾಗಿ ಕೂಗಿ ಅಲ್ಲಿಂದ ಓಡಿ ಹೋಗಿ ಇನ್ನೊಂದು ಬೈಕ್ ಸವಾರನನ್ನು ನಿಲ್ಲಿಸಿ ಅವರಿಂದ ಡ್ರಾಪ್ ತೆಗೆದುಕೊಂಡೆ ಎಂದು ಮಹಿಳೆ ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ: ಹುಬ್ಬಳ್ಳಿ: ಪ್ರೇಯಸಿಯ ಖಾಸಗಿ ವಿಡಿಯೋ, ಫೋಟೋ ಶೇರ್ ಮಾಡಿ ಪ್ರಿಯಕರ ಆತ್ಮಹತ್ಯೆ
ಅವಳೇ ನನ್ನ ಮರ್ಮಾಂಗಕ್ಕೆ ಕೈ ಹಾಕಿದ್ದು
ಇನ್ನು ಮಹಿಳೆಯ ಆರೋಪವನ್ನು ನಿರಾಕರಿಸಿದ ಬೈಕ್ ಸವಾರ, ಆಕೆಯೇ ನನ್ನ ಮರ್ಮಾಂಗಕ್ಕೆ ಕೈ ಹಾಕಿದ್ದು ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾನು ಆ ಮಹಿಳೆಗೆ ಲಿಫ್ಟ್ ಕೊಟ್ಟಿದ್ದು ನಿಜ. ನಾನೊಬ್ಬ ವೈದ್ಯ, ನನಗೆ ಮಹಿಳೆ ಮೇಲೆ ಆ ತರಹದ ಯಾವುದೇ ಯೋಚನೆಗಳಿಲ್ಲ, ರಾತ್ರಿ ವೇಳೆ ಪಾಪಾ ಹೆಣ್ಣು ಮಗಳು ನಿಂತಿದ್ದಾಳೆ ಅಲ್ಲಿಯವರೆಗೆ ಬಿಡೋಣ ಅಂತ ಸಹಾಯ ಮಾಡಿದೆ ಅಷ್ಟೇ ಎಂದಿದ್ದಾರೆ.
ನಾನು ಬೆಂಗಳೂರಿಗೆ ಬಂದು ಹದಿನೈದು ದಿನ ಆಯ್ತು, ಎಲ್ಲಾದರೂ ಹೋಗಬೇಕಾದರೆ ಲೋಕೇಶ್ ಹಾಕಿಕೊಂಡೇ ಹೋಗುತ್ತೇನೆ ಹೀಗಿರುವಾಗ ಮಹಿಳೆಗೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿರೋದು ಸುಳ್ಳು, ಬೈಕಿನಲ್ಲಿ ಬರುವಾಗ ಅವಳೇ ನನ್ನ ಮೊಬೈಲ್ ನಂಬರ್ ಕೇಳಿದಳು. ನನಗೆ ಆಗಾಗ ಆರೋಗ್ಯ ಸಮಸ್ಯೆ ಇರುತ್ತದೆ ನಿಮಗೆ ಕರೆ ಮಾಡುತ್ತೇನೆಂದು ಹೇಳಿದ್ದಳು. ಬಳಿಕ ಅವಳೇ ಹಿಂಬದಿಯಿಂದ ನನ್ನ ಮರ್ಮಾಂಗಕ್ಕೆ ಕೈ ಹಾಕಿದ್ದಳು. ಆಗ ನನಗೆ ಶಾಕ್ ಆಯ್ತು, ಭಯನೂ ಆಯ್ತು, ಕೂಡಲೇ ನಾನು ಬೈಕ್ ನಿಲ್ಲಿಸಿ ಮೇಡಮ್ ನೀವು ಇಲ್ಲಿ ಇಳಿದುಕೊಳ್ಳಿ ಎಂದು ಚಲ್ಲಘಟ್ಟ ಸಮೀಪ ಬಿಟ್ಟಿದ್ದೇನೆ. ಬೇಕಾದರೆ ಪೊಲೀಸರು ಯಾವುದೇ ಸಿಸಿಟಿವಿ ಪರಿಶೀಲನೆ ಮಾಡಲಿ ಎಂದಿದ್ದಾರೆ.
ಡಾಕ್ಟರ್ ಪರ ನಿಂತ ಸ್ಥಳೀಯರು
ಇನ್ನು ಮಹಿಳೆ ಹಾಗೂ ವೈದ್ಯನ ಆರೋಪ ಪ್ರತ್ಯಾರೋಪ ಮಧ್ಯ ಸ್ಥಳೀಯರು ಸಹ ತಮ್ಮ ಅಭಿಪ್ರಾಯ ತಿಳಿಸಿದ್ದು, ಡಾಕ್ಟರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಮಹಿಳೆ ಆರೋಪ ಮಾಡಿದಂತೆ ಅಂಥದ್ದೇನು ನಡೆದಿರಲ್ಲ. ಅವಳದ್ದು ಬರೀ ಅದೇ ಕೆಲಸ. ಯಾರಾದ್ರೂ ಸ್ವಲ್ಪ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಚೆನ್ನಾಗಿ ಕಂಡ್ರೆ ಸಾಕು ಅವರ ಮೇಲೆ ಹೋಗಿ ಬೀಳುತ್ತಾಳೆ. ಬಳಿಕ ನನಗೆ ದೌರ್ಜನ್ಯ ಮಾಡೋದಕ್ಕೆ ಬಂದ್ರು ಎಂದು ಕೇಸ್ ಹಾಕುವುದಕ್ಕೆ ಹೋಗುವುದು ಬಳಿಕ ಹಣಕ್ಕೆ ಪೀಡಿಸುತ್ತಾಳೆ. ಇದೇ ಕೆಲಸ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾಳೆ ಎಂದು ಹೇಳಿದ್ದಾರೆ.
ಇನ್ನು ಮಹಿಳೆ ದೂರಿಗೆ ಪ್ರತಿ ದೂರು ಸಲ್ಲಿಸಿ, ಹನಿಟ್ರ್ಯಾಪ್ ಪ್ರಕರಣ ದಾಖಲಿಸಲು ಮುಂದಾಗಿದ್ದೇವೆ ಎಂದು ಮಹಿಳಾ ಸಂಘಟನೆ ಸದಸ್ಯರು ತಿಳಿಸಿದ್ದಾರೆ. ಇನ್ನು ಈ ಪ್ರಕರಣ ಕುಂಬಳಗೋಡು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದು, ಸದ್ಯಕ್ಕೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ