ಹಣಕ್ಕಾಗಿ ಅಪ್ರಾಪ್ತ ಮಗಳನ್ನ 32ರ ವ್ಯಕ್ತಿ ಜತೆ ಮದ್ವೆ ಮಾಡಿದ ತಂದೆ, ರೊಕ್ಕ ಕೊಟ್ಟು ಮದ್ವೆಯಾದವ ಕಂಬಿ ಹಿಂದೆ!
ಪಾಪಿ ತಂದೆಯೊಬ್ಬ ಹಣಕ್ಕಾಗಿ ತನ್ನ ಅಪ್ರಾಪ್ತ ಮಗಳನ್ನ 32ರ ವ್ಯಕ್ತಿ ಜತೆ ಮದ್ವೆ ಮಾಡಿಕೊಟ್ಟಿದ್ದಾನೆ. ಇನ್ನು ಕುಡುಕನಿಗೆ ಹಣ ನೀಡಿ ಆತಮ ಮಗಳನ್ನು ಮದ್ವೆಯಾದವನ ಸ್ಥಿತಿ ಏನಾಯ್ತು ಅಂತ ಸ್ಪಲ್ಪ ನೋಡಿ.
ಚೆನ್ನೈ: ಮಕ್ಕಳು ಮಕ್ಕಳೇ. ಯಾವ ಸಮಯದಲ್ಲಿಯಾದರೂ ತನ್ನ ಮಗಳ ಜೇವನ ಏರುಪೇರಾದರೆ ಅದು ತಂದೆಗೆ ಭರಿಸಲಾದದ ದುಃಖ. ಮಕ್ಕಳು ಜೀವನದಲ್ಲಿ ಎಡವದಿರಲೆಂದು ಅಪ್ಪ-ಅಮ್ಮ ಮುದ್ದು ಮಾಡಿ ಬೆಳೆಸ್ತಾರೆ. ಅರಿವಿದ್ದೋ, ಅರಿವಿಲ್ಲದೆಯೋ ಮಕ್ಕಳು ಎಡವಿ ಬಿದ್ದಾಗ ತಂದೆ-ತಾಯಿಗಳೇ ಆಸರೆಯಾಗ್ತಾರೆ. ಆದ್ರೆ, ಇಲ್ಲೊಬ್ಬ ಅಪ್ಪ ಹಣಕ್ಕಾಗಿ ತನ್ನ ಅಪ್ರಾಪ್ತ ಮಗಳನ್ನ 32ರ ವಯಸ್ಸಿನವನೊಂದಿಗೆ ಮದ್ವೆ ಮಾಡಿಕೊಟ್ಟಿದ್ದಾನೆ.
ಹೌದು….ತಂದೆಯೊಬ್ಬ ಹಣಕ್ಕಾಗಿ 13 ವರ್ಷದ ಮಗಳಿಗೆ 32 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ ಘಟನೆ ತಮಿಳುನಾಡಿನ ಪೆರಂಲೂರಿನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯವ್ಯಸನಿ ವ್ಯಕ್ತಿಗೆ ಹಣ ನೀಡಿ ಆತನ ಅಪ್ರಾಪ್ತ ಮಗಳನ್ನ ಮದುವೆಯಾಗಿದ್ದವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಎಷ್ಟು ಮದ್ವೆಯಾಗಿದ್ದೀರಿ, ಯಾರೊಂದಿಗೆ ಸಂಸಾರ ಮಾಡ್ತಿದ್ದೀರಾ? RTI ಅಡಿಯಲ್ಲಿ ಲೇಡಿ ಅಧಿಕಾರಿಯ ಮಾಹಿತಿ ಕೇಳಿದ ಭೂಪ
ಬಾಲಕಿಯ ತಂದೆ ಮದ್ಯವಸನಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನಿಗೆ ಹಣ ಬೇಕಿತ್ತು. ಅದೇ ಸಮಯಕ್ಕೆ ವರತರಾಜ್(32) ಹಣ ನೀಡುತ್ತೇನೆ. ಆದ್ರೆ, ಅದರ ಬದಲು ಮಗಳನ್ನು ಮದುವೆ ಮಾಡಿಕೊಡಲು ಹೇಳಿದ್ದ. ಈ ಹಿನ್ನೆಲೆಯಲ್ಲಿ ಮಗಳನ್ನು ವರತರಾಜ್‍ಗೆ ಮದುವೆ ಮಾಡಿಕೊಡಲು ಬಾಲಕಿಯ ತಂದೆ ಹಾಗೂ ಆತನ ಸಹೋದರಿ ಮುತ್ತುಲಕ್ಷ್ಮಿ ಸೇರಿ ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಮೂರು ತಿಂಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದಾರೆ.
ಈ ವಿಚಾರ ಪೊಲೀಸರಿಗೆ ತಿಳಿದಿದ್ದು, ಹಣ ನೀಡಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿದ್ದ ವರತರಾಜ್ ಎನ್ನುವಾತನನ್ನು ಇಂದು(ಸೆಪ್ಟೆಂಬರ್ 02) ಪೊಲೀಸರು ಬಂಧಿಸಿದ್ದಾರೆ. ವರತರಾಜ್ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಬಾಲಕಿಯ ತಂದೆ ಮತ್ತು ಆತನ ಸಹೋದರಿ ಮುತ್ತುಲಕ್ಷ್ಮಿ ತಲೆಮರಿಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Sun, 2 October 22