ಯುವತಿಯನ್ನು ಚುಡಾಯಿಸಿದ ಯುವಕನಿಗೆ ಸಾರ್ವಜನಿಕರಿಂದ ಗೂಸಾ; ಯುವಕನನ್ನು ವಶಕ್ಕೆ ಪಡೆದ ವಿದ್ಯಾಗಿರಿ ಪೊಲೀಸ್
ಹೊಲದಲ್ಲಿ ಕಟ್ಟಿದ್ದ ಎತ್ತುಗಳನ್ನು ಕಳ್ಳತನ ಮಾಡಿದ್ದ ಯುವಕನನ್ನು ಗ್ರಾಮಸ್ಥರು ಬಂಧಿಸಿರುವಂತಹ ಘಟನೆ ಕಲ್ಲಾಪುರ ಗ್ರಾಮದ ಬಳಿ ನಡೆದಿದೆ.
ಧಾರವಾಡ: ಹಿಂದೂ ಯುವತಿ ಚುಡಾಯಿಸಿದ ಮುಸ್ಲಿಂ ಯುವಕನಿಗೆ ಸಾರ್ವಜನಿಕರಿಂದ ಗೂಸಾ ನೀಡಿರುವಂತಹ ಘಟನೆ ನಗರದ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ. ಇರ್ಷಾದ್, ಗೂಸಾ ತಿಂದ ಯುವಕ. ಯುವತಿಗೆ ನಿರಂತರ ಕಿರುಕುಳ (Harassment) ನೀಡಿದ್ದು, ಎಚ್ಚರಿಕೆ ಕೊಟ್ಟರೂ ಇರ್ಷಾದ್ ಬೆನ್ನು ಬಿದಿದ್ದ. ಗೌಳಿ ಗಲ್ಲಿ ಬಡಾವಣೆಯ ಯುವತಿ ತನ್ನ ತಾಯಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇರ್ಷಾದ್ನಿಗೆ ಸಾರ್ವಜನಿಕವಾಗಿ ಯುವತಿ ತಾಯಿ ಥಳಿಸಿದ್ದು, ಬಳಿಕ ಘಟನೆ ಅರಿತ ಸಾರ್ವಜನಿಕರಿಂದಲೂ ಗೂಸಾ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ವಿದ್ಯಾಗಿರಿ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಹೊಲದಲ್ಲಿ ಕಟ್ಟಿದ ಎತ್ತುಗಳು ಕಳವು; ಕಳನನ್ನು ಹಿಡಿದ ಗ್ರಾಮಸ್ಥರು:
ಧಾರವಾಡ: ಹೊಲದಲ್ಲಿ ಕಟ್ಟಿದ್ದ ಎತ್ತುಗಳನ್ನು ಕಳ್ಳತನ ಮಾಡಿದ್ದ ಯುವಕನನ್ನು ಗ್ರಾಮಸ್ಥರು ಬಂಧಿಸಿರುವಂತಹ ಘಟನೆ ಕಲ್ಲಾಪುರ ಗ್ರಾಮದ ಬಳಿ ನಡೆದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ನಿವಾಸಿ ಸುಭಾನಿ ಅನ್ನೋ ಯುವಕನಿಂದ ಕೃತ್ಯ ಎಸಗಲಾಗಿದೆ. ಕೇದಾರಿಗೌಡ ಪಾಟೀಲ್ ಅನ್ನೋರಿಗೆ ಸೇರಿದ ಒಂದು ಲಕ್ಷ ರೂ. ಮೌಲ್ಯದ ಎತ್ತುಗಳನ್ನು ಬೊಲೆರೋ ವಾಹನದಲ್ಲಿ 2 ಎತ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ನಾಲ್ವರು ದುಷ್ಕರ್ಮಿಗಳು ಪರಾರಿಯಾಗಿದ್ದು. ಓರ್ವ ಕಳ್ಳನನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಫಲವತ್ತಾದ ಭೂ ಸ್ವಾಧೀನ ಕೈಬಿಡುವಂತೆ ರೈತರು ಪಟ್ಟು; ಮನವಿ ನೀಡಲು ಬಂದ ರೈತರನ್ನು ತಡೆದ ಪೊಲೀಸರು:
ಬೆಳಗಾವಿ: ಕಣಬರ್ಗಿಯಲ್ಲಿ ನೂತನ ಬಡಾವಣೆಗಾಗಿ ಬುಡಾದಿಂದ ಭೂಸ್ವಾಧೀನ ಮಾಡಲಾಗಿದ್ದು, ಬಿಜೆಪಿ ನಾಯಕರು ತಂಗಿರುವ ಹೋಟೆಲ್‌ಗೆ ರೈತರು ಮುತ್ತಿಗೆಗೆ ಯತ್ನಿಸಿದ್ದಾರೆ. ಫಲವತ್ತಾದ ಭೂ ಸ್ವಾಧೀನ ಕೈಬಿಡುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಬಿಎಸ್‌ವೈ, ಅರುಣ್ ಸಿಂಗ್ಗೆ ಮನವಿ ನೀಡಲು ಅವಕಾಶ ನೀಡುವಂತೆ ರೈತರು ಪಟ್ಟು ಹಿಡಿದಿದ್ದಾರೆ. ರೈತರನ್ನು ಗೇಟ್ ಆವರಣದಲ್ಲಿ ತಡೆದ ಪೊಲೀಸರು ಮರಳಿ ಕಳುಹಿಸಲು ಹರಸಾಹಸ ಪಟ್ಟರು. ಪೊಲೀಸರ ಮಾತಿಗೆ ಬೆಲೆ ಕೊಡದೇ ಹೋಟೆಲ್ ಮುತ್ತಿಗೆಗೆ ರೈತರು ಯತ್ನಿಸಿದ್ದಾರೆ. ಮಾಳ ಮಾರುತಿ ಠಾಣೆ ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:
ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯಕಾರಿ ಈ 5 ಯೋಗಾಸನಗಳು; ಇಲ್ಲಿದೆ ನೋಡಿ ಮಾಹಿತಿ
ಮೊಟ್ಟೆ ಸೇವನೆ ಮತ್ತು ಕೊಲೆಸ್ಟ್ರಾಲ್ ನಡುವೆ ಸಂಬಂಧವಿದೆಯೇ? ಆಹಾರ ತಜ್ಞರು ಏನಂತಾರೆ?
Published On - 5:52 pm, Tue, 12 April 22