ಕಳ್ಳತನಕ್ಕೆ ಹೋದಾಗ ಎಚ್ಚರಗೊಂಡ ಮನೆಯವರು, ಇಬ್ಬರ ಹತ್ಯೆ ಮಾಡಿದ ಕಳ್ಳ

ಮಂಗಳೂರು: ಯುವಕನೊಬ್ಬ ಕುರಿಯ ಗ್ರಾಮದಲ್ಲಿ ಮೊನ್ನೆ ತಡರಾತ್ರಿ ಮನೆಗೆ ನುಗ್ಗಿ, ಇಬ್ಬರ ಭೀಕರ ಹತ್ಯೆ ಬಳಿಕ ಒಂದು ಕೊಲೆ ಯತ್ನ ಮಾಡಿರುವ ಪ್ರಕರಣ ನಡೆದಿದೆ. ಆರೋಪಿ ಕರೀಂ ಖಾನ್(29) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಶೇಕ್ ಕೊಗ್ಗು ಸಾಹೇಬ್ (70) ಮತ್ತು ಶಾಮಿಯಾ ಭಾನು (16) ಹತ್ಯೆಗೀಡಾದವರು. ಖತೀಜಾಬಿ ಎಂಬ ಮಹಿಳೆ ಮೇಲೆ ಗಂಭೀರವಾಗಿ ಹಲ್ಲೆ ನಡೆದಿದೆ. ಗೋಡೆ ಮತ್ತು ಹೆಂಚಿನ ನಡುವೆ ಮನೆ ಒಳಗೆ ನುಗ್ಗಿ ಕಳ್ಳತನ ಮಾಡಲು ಹೋದಾಗ ಮನೆಯವರು ಎಚ್ಚರಗೊಂಡ ಹಿನ್ನೆಲೆ, ಆರೋಪಿ ಕರೀಂ […]

ಕಳ್ಳತನಕ್ಕೆ ಹೋದಾಗ ಎಚ್ಚರಗೊಂಡ ಮನೆಯವರು, ಇಬ್ಬರ ಹತ್ಯೆ ಮಾಡಿದ ಕಳ್ಳ
ಸಾಧು ಶ್ರೀನಾಥ್​

Updated on: Nov 20, 2019 | 11:24 AM

ಮಂಗಳೂರು: ಯುವಕನೊಬ್ಬ ಕುರಿಯ ಗ್ರಾಮದಲ್ಲಿ ಮೊನ್ನೆ ತಡರಾತ್ರಿ ಮನೆಗೆ ನುಗ್ಗಿ, ಇಬ್ಬರ ಭೀಕರ ಹತ್ಯೆ ಬಳಿಕ ಒಂದು ಕೊಲೆ ಯತ್ನ ಮಾಡಿರುವ ಪ್ರಕರಣ ನಡೆದಿದೆ. ಆರೋಪಿ ಕರೀಂ ಖಾನ್(29) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಶೇಕ್ ಕೊಗ್ಗು ಸಾಹೇಬ್ (70) ಮತ್ತು ಶಾಮಿಯಾ ಭಾನು (16) ಹತ್ಯೆಗೀಡಾದವರು.
ಖತೀಜಾಬಿ ಎಂಬ ಮಹಿಳೆ ಮೇಲೆ ಗಂಭೀರವಾಗಿ ಹಲ್ಲೆ ನಡೆದಿದೆ.

ಗೋಡೆ ಮತ್ತು ಹೆಂಚಿನ ನಡುವೆ ಮನೆ ಒಳಗೆ ನುಗ್ಗಿ ಕಳ್ಳತನ ಮಾಡಲು ಹೋದಾಗ ಮನೆಯವರು ಎಚ್ಚರಗೊಂಡ ಹಿನ್ನೆಲೆ, ಆರೋಪಿ ಕರೀಂ ಇಬ್ಬರನ್ನು ಕೊಲೆಗೈದು, ಮಹಿಳೆಯ ಕೊಲೆಗೆ ಯತ್ನಿಸಿದ್ದಾನೆ. ಎಲ್ಲಾ ಪರಿಚಯಸ್ಥರೇ ಆಗಿದ್ರಿಂದ ಸಿಕ್ಕಿಹಾಕಿಕೊಳ್ಳುವ ಭಯದಿಂದ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಬಂಧಿತ ಕರೀಂ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ. ಆರೋಪಿ ಕರೀಂ ಹತ್ಯೆಗಳ ಮಾಡಿದ ಬಳಿಕವೂ ಮನೆಯಲ್ಲಿದ್ದ 30 ಗ್ರಾಂ ಚಿನ್ನ, 6000 ನಗದು ಕದ್ದು ಪರಾರಿಯಾಗಿದ್ದ.

ಹಣಕಾಸಿನ ಮನಸ್ತಾಪ, ದ್ವೇಷ:
ಶೇಕ್ ಜೊತೆ ಈ ಹಿಂದೆ ಹಣಕಾಸಿನ ವಿಚಾರದಲ್ಲೂ ಮನಸ್ತಾಪವುಂಟಾಗಿತ್ತು. ಈ ದ್ವೇಷದಿಂದ ಕೂಡ ಬರ್ಬರ ಹತ್ಯಾಕಾಂಡ ನಡೆದಿರುವ ಸಾಧ್ಯತೆಯಿದೆ. ಕದ್ದುಕೊಂಡು ಹೋಗಿದ್ದ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published On - 11:20 am, Wed, 20 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us