ಸಾಲದ ಹಣ ವಾಪಸ್ ನೀಡುವುದಾಗಿ ಕರೆದು ಯುವಕನ ಹತ್ಯೆ, ಮೂವರ ಬಂಧನ
ಮೈಸೂರು: ಸಾಲದ ಹಣ ವಾಪಸ್ ನೀಡುವುದಾಗಿ ಕರೆದು ಯುವಕನ ಹತ್ಯೆ ಮಾಡಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ 48 ಗಂಟೆಗಳಲ್ಲಿಯೇ ಯಶಸ್ವಿ ಕಾರ್ಯಾಚರಣೆಯಿಂದ ಹಂತಕರನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನ ನಿವಾಸಿ ಗಣೇಶ್(20) ಮೃತ ದುರ್ದೈವಿ. ಹುಣಸೂರಿನ ಧನು (22) ಸಲ್ಮಾನ್ (24) ಹಾಗೂ ಮಹದೇವನಾಯಕ (65) ಬಂಧಿತ ಆರೋಪಿಗಳು. ಮೃತ ಗಣೇಶ್ನಿಂದ ಆರೋಪಿ ಧನು 10 ಸಾವಿರ ಸಾಲ ಪಡೆದಿದ್ದ. ಕೊಟ್ಟ ಸಾಲ ಹಿಂದಿರುಗಿಸುವುದಾಗಿ ಹೇಳಿ ಮದ್ದೂರಿನಿಂದ ಗಣೇಶ್ನನ್ನು ಹುಣಸೂರಿಗೆ ಬರುವಂತೆ […]
ಮೈಸೂರು: ಸಾಲದ ಹಣ ವಾಪಸ್ ನೀಡುವುದಾಗಿ ಕರೆದು ಯುವಕನ ಹತ್ಯೆ ಮಾಡಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ 48 ಗಂಟೆಗಳಲ್ಲಿಯೇ ಯಶಸ್ವಿ ಕಾರ್ಯಾಚರಣೆಯಿಂದ ಹಂತಕರನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರಿನ ನಿವಾಸಿ ಗಣೇಶ್(20) ಮೃತ ದುರ್ದೈವಿ. ಹುಣಸೂರಿನ ಧನು (22) ಸಲ್ಮಾನ್ (24) ಹಾಗೂ ಮಹದೇವನಾಯಕ (65) ಬಂಧಿತ ಆರೋಪಿಗಳು. ಮೃತ ಗಣೇಶ್ನಿಂದ ಆರೋಪಿ ಧನು 10 ಸಾವಿರ ಸಾಲ ಪಡೆದಿದ್ದ. ಕೊಟ್ಟ ಸಾಲ ಹಿಂದಿರುಗಿಸುವುದಾಗಿ ಹೇಳಿ ಮದ್ದೂರಿನಿಂದ ಗಣೇಶ್ನನ್ನು ಹುಣಸೂರಿಗೆ ಬರುವಂತೆ ಮಾಡಿದ್ದಾನೆ.
ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದು ಹಾಕಿದ್ದಾನೆ. ನಂತರ ಶವವನ್ನ ತನ್ನ ಸ್ನೇಹಿತ ಇಮ್ರಾನ್ ರವರ ಮರದ ಮಿಲ್ ನಲ್ಲಿ ಹೂತಿಟ್ಟಿದ್ದಾನೆ. ಧನು ನಡೆಸಿದ ಕೃತ್ಯಕ್ಕೆ ಸಹಕರಿಸಿದ ಸಲ್ಮಾನ್ ಹಾಗೂ ಮಹದೇವ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.