ಅನೈತಿಕ ಸಂಬಂಧ ಶಂಕಿಸಿ ಪತ್ನಿಗೆ ಚಾಕು ಇರಿದ ಪತಿ; ಹೆಂಡತಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಗಂಡ ಖಾಕಿ ವಶಕ್ಕೆ

26 ವರ್ಷಗಳ ಹಿಂದೆ ಮಂಜುಳಾರನ್ನು ವಿವಾಹವಾಗಿದ್ದ ರವಿಗೆ ತನ್ನ ಪತ್ನಿ ಮೇಲೆ ಶಂಕೆ ಉಂಟಾಗಿತ್ತು. ಅನೈತಿಕ ಸಂಬಂಧವಿರುವ ಬಗ್ಗೆ ನಿನ್ನೆ ಗಂಡ-ಹೆಂಡತಿ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮಂಜುಳಾಗೆ ರವಿ ಚಾಕು ಇರಿದಿದ್ದಾನೆ.

ಅನೈತಿಕ ಸಂಬಂಧ ಶಂಕಿಸಿ ಪತ್ನಿಗೆ ಚಾಕು ಇರಿದ ಪತಿ; ಹೆಂಡತಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಗಂಡ ಖಾಕಿ ವಶಕ್ಕೆ
ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
TV9kannada Web Team

| Edited By: Ayesha Banu

Jun 14, 2022 | 8:01 PM

ಬೆಂಗಳೂರು: ಪತ್ನಿ ಮೇಲೆ ಅನೈತಿಕ(Illegal Affair) ಸಂಬಂಧ ಶಂಕಿಸಿ ಪತ್ನಿಗೆ ಪತಿ ಚಾಕು ಇರಿದ ಘಟನೆ ಬೆಂಗಳೂರಿನ ಕೆಂಗೇರಿಯ ವಿನಾಯಕ ಲೇಔಟ್ನಲ್ಲಿ ನಡೆದಿದೆ. ಮಂಜುಳಾ (48) ಚಾಕು ಇರಿತಕ್ಕೊಳಗಾದ ಮಹಿಳೆ. ಪತಿ ರವಿ (48) ಮಂಜುಳಾ ಕುತ್ತಿಗೆ, ಎದೆ, ಕೈಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. 26 ವರ್ಷಗಳ ಹಿಂದೆ ಮಂಜುಳಾರನ್ನು ವಿವಾಹವಾಗಿದ್ದ ರವಿಗೆ ತನ್ನ ಪತ್ನಿ ಮೇಲೆ ಶಂಕೆ ಉಂಟಾಗಿತ್ತು. ಅನೈತಿಕ ಸಂಬಂಧವಿರುವ ಬಗ್ಗೆ ನಿನ್ನೆ ಗಂಡ-ಹೆಂಡತಿ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮಂಜುಳಾಗೆ ರವಿ ಚಾಕು ಇರಿದಿದ್ದಾನೆ. ಗಾಯಾಳು ಮಂಜುಳಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಕೆಂಗೇರಿ ಠಾಣೆ ಪೊಲೀಸರು ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪತ್ನಿ ಪ್ರಿಯಕರನ್ನು ಕೊಂದು ಸುಟ್ಟಿದ್ದ ಆರೋಪಿ ಬಂಧಿಸಿದ ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಠಾಣೆ ಪೊಲೀಸರು ಪತ್ನಿ ಪ್ರಿಯಕರನ್ನು ಕೊಂದು ಸುಟ್ಟಿದ್ದ ಆರೋಪಿ ಬಾಬಾವಲಿಯನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಡಿ.ಜೆ.ಹಳ್ಳಿ ನಿವಾಸಿ ಸೈಯದ್ ಮುಸ್ತಫಾ ಕೊಲೆಯಾಗಿತ್ತು. ಬಾಬಾವಲಿ ಪತ್ನಿ ಸಲ್ಮಾ ಜತೆ ಅನೈತಿಕ ಸಂಬಂಧ ಹೊಂದಿದ್ದ ಮುಸ್ತಫಾ ಮದ್ಯಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಾಗ ಕತ್ತು ಹಿಸುಕಿ ಬಾಬಾವಲಿ ಕೊಂದಿದ್ದ. ಮುಸ್ತಫಾನನ್ನ ಕೊಂದು ಶವ ಸುಟ್ಟಿದ್ದ.ಹತ್ಯೆಯಾದ ಮುಸ್ತಫಾ, ಬಾಬಾವಲಿ ಇಬ್ಬರೂ ಡಿ.ಜೆ.ಹಳ್ಳಿ ನಿವಾಸಿಗಳು. ಸದ್ಯ ಶರ್ಟ್ ಕಾಲರ್ನಲ್ಲಿದ್ದ ಟೈಲರ್ ಅಂಗಡಿ ವಿಳಾಸದಿಂದ ಕೇಸ್ ಬಯಲಾಗಿದ್ದು 7 ದಿನಗಳಲ್ಲಿ ಬಾಗೇಪಲ್ಲಿ ಠಾಣೆ ಪೊಲೀಸರು ಹತ್ಯೆ ಪ್ರಕರಣ ಭೇದಿಸಿ ಆರೋಪಿಯನ್ನು ಹಿಡಿದಿದ್ದಾರೆ. ಇದನ್ನೂ ಓದಿ: Gold- Silver Price: ಬೆಂಗಳೂರು, ದೆಹಲಿ, ಮುಂಬೈ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಜೂನ್ 14ರ ಚಿನ್ನ- ಬೆಳ್ಳಿ ದರ ಇಲ್ಲಿದೆ

4.61 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದ ಕಳ್ಳ ಅರೆಸ್ಟ್ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಗ್ರಾಮಾಂತರ ಪೊಲೀಸರು ಮೊಬೈಲ್ ಕಳ್ಳ ತಬರೇಜ್ ಮೊಹಮ್ಮದ್ ಬಾಗಲಕೋಟೆ(23) ಸೆರೆ ಹಿಡಿದಿದ್ದಾರೆ. ಮೇ 25ರಂದು 4.61 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಹಳಿಯಾಳದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಶಾಪ್ಗೆ ಕಿಟಕಿ ಮೂಲಕ ನುಗ್ಗಿ ನಗದು, ಮೊಬೈಲ್ ಕದಿದ್ದ. ಈ ಬಗ್ಗೆ ಹಳಿಯಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada