ಅಯ್ಯೋ ದೇವರೇ…ಬುದ್ದಿ ಹೇಳಿದಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗ, ಬಳಿಕ ಮಾಡಿದ್ದೇನು ಗೊತ್ತಾ?

ಹೆತ್ತು ಹೊತ್ತು ಸಾಕಿದ ತಾಯಿಯನ್ನೇ ಪಾಪಿ ಮಗನೊಬ್ಬ ಭೀಕರವಾಗಿ ಕೊಲೆ ಮಾಡಿದ ಘಟನೆ ಗದಗ(Gadag) ನಗರದ ದಾಸರ ಓಣಿಯಲ್ಲಿ ನಡೆದಿದೆ. ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಯ್ಯೋ ದೇವರೇ...ಬುದ್ದಿ ಹೇಳಿದಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗ, ಬಳಿಕ ಮಾಡಿದ್ದೇನು ಗೊತ್ತಾ?
ಆರೋಪಿ ಸಿದ್ಧಲಿಂಗ, ಮೃತ ತಾಯಿ ಶಾರದಮ್ಮ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 28, 2024 | 3:39 PM

ಗದಗ, ಆ.28: ಬುದ್ದಿ ಹೇಳಿದಕ್ಕೆ ಮಗನೇ ಹೆತ್ತ ತಾಯಿಯನ್ನ ಕೊಲೆ ಮಾಡಿದ ಘಟನೆ ಗದಗ(Gadag) ನಗರದ ದಾಸರ ಓಣಿಯಲ್ಲಿ ನಡೆದಿದೆ. ಶಾರದಮ್ಮ ಅಗಡಿ (85) ಕೊಲೆಯಾದ ತಾಯಿ. ಮಾನಸಿಕ ಅಸ್ವಸ್ಥ ಪುತ್ರ ಸಿದ್ಧಲಿಂಗ, ಮಲಗಿದಲ್ಲೇ ತಾಯಿಯನ್ನು  ಕೊಂದಿದ್ದಾನೆ. ನಿನ್ನೆ ಪಕ್ಕದ ಮನೆಯವರ ಜೊತೆ ಸಿದ್ಧಲಿಂಗ ಜಗಳ ಮಾಡಿಕೊಂಡಿದ್ದ. ಈ ವೇಳೆ ನನ್ನ ಮಗನ ತಲೆ ಸರಿಯಿಲ್ಲ ಬಿಟ್ಟು ಬಿಡಿ ಎಂದು ತಾಯಿ ಬೇಡಿಕೊಂಡಿದ್ದರು. ಇದಾಗಿ ಬೆಳಿಗ್ಗೆ ಆಗುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ.

ತಾಯಿ ಕೊಂದು ಸಹೋದರಿಯರಿಗೆ ಫೋನ್ ಮಾಡಿದ

ಇನ್ನು ತಾಯಿಯನ್ನು ಕೊಂದು ಸಹೋದರಿಯರಿಗೆ ಫೋನ್ ಮಾಡಿದ ಪಾಪಿ, ಅಮ್ಮ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾನೆ. ಮಾನಸಿಕ ಅಸ್ವಸ್ಥ ಸಹೋದರನ ಮಾತು ನಂಬದ ಅಕ್ಕಂದಿರು, ಬಳಿಕ ಪೊಲೀಸರು ಮಾಹಿತಿ ನೀಡಿದ ಬಳಿಕ ಓಡೋಡಿ ಬಂದಿದ್ದಾರೆ. ಅಜ್ಜಿ ಮಲಗಿದ ಹಾಸಿಗೆಯಲ್ಲಾ ರಕ್ತಸಿಕ್ತವಾಗಿದ್ದು, ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:ರಾಯಚೂರಿನಲ್ಲಿ ಪತ್ನಿ, ಅಜ್ಜಿ ಜೋಡಿ ಕೊಲೆ ಪ್ರಕರಣಕ್ಕೆ ಟ್ವೀಸ್ಟ್​! ಪೊಲೀಸ್ ತನಿಖೆ ವೇಳೆ ಬಯಲಾಯ್ತು ಹತ್ಯೆಯ ಸತ್ಯಾಂಶ

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿ ಸಾವು

ಹಾಸನ: ಬೇಲೂರು ತಾಲೂಕಿನ ಜೆ.ಸುರಪುರ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಮಲ್ಲಿಕಾರ್ಜುನ(58) ಎಂಬಾತ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಆಗಸ್ಟ್​ 13ರಂದು ಜಮೀನಿಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿತ್ತು. ಬಳಿಕ ಗಾಯಗೊಂಡಿದ್ದ ಮಲ್ಲಿಕಾರ್ಜುನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Wed, 28 August 24